Advertisement
ಇದಕ್ಕೆ ಉತ್ತರ- “ಇಲ್ಲ’. ಬೆಂಗಳೂರು ಮೆಟ್ರೋ ರೈಲು ನಿಗಮ ಅನುಸರಿಸುತ್ತಿರುವ ಕ್ರಮಗಳು ಕೋವಿಡ್-19 ವೈರಸ್ ಸೋಂಕು ನಿಯಂತ್ರಣವನ್ನು ಮಾತ್ರ ಕೇಂದ್ರೀಕರಿಸಿದಂತಿವೆ. ಪ್ರಯಾಣಿಕರಿಗೆ ಪೂರಕವಾದ ಅಥವಾ ಸರಳೀಕರಿಸುವ ವ್ಯವಸ್ಥೆ ಬಗ್ಗೆ ಯೋಚನೆ ಮಾಡಿಲ್ಲ. ಇದರ ಪರಿಣಾಮ ಪ್ರಯಾಣಿಕರ ಮೇಲೆ ಆಗುತ್ತಿದ್ದು, ನಿರಾಸಕ್ತಿಗೆ ಎಡೆಮಾಡಿಕೊಡುತ್ತಿದೆ ಎನ್ನುತ್ತಾರೆ ತಜ್ಞರು.
- ಸದ್ಯದ ವ್ಯವಸ್ಥೆಯಲ್ಲಿ ಹಣ ಮತ್ತು ಸಮಯ ಎರಡೂ ಉಳಿತಾಯ ಆಗುತ್ತಿಲ್ಲ. ಇವೆರಡೂಸಾಧ್ಯವಾಗುತ್ತಿರುವುದು ಖಾಸಗಿ ವಾಹನಗಳಲ್ಲಿ. ಈ ಹಿನ್ನೆಲೆಯಲ್ಲಿ ಆರು ತಿಂಗಳ ಮಟ್ಟಿಗೆ ಪ್ರಯಾಣ ದರ ತಗ್ಗಿಸುವ ಅವಶ್ಯಕತೆ ಇದೆ
- ಐಟಿ ರಾಜಧಾನಿಯಲ್ಲಿದ್ದೂ ನಾವು ಮೆಟ್ರೋದಂತಹ ಸಮೂಹ ಸಾರಿಗೆಯಲ್ಲಿ ಸಮರ್ಪಕ ಸ್ಮಾರ್ಟ್‌ಕಾರ್ಡ್ ರಿಚಾರ್ಜ್‌ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗುತ್ತಿಲ್ಲ. ಪ್ರತಿ ವ್ಯಕ್ತಿ ಸುಲಭವಾಗಿ ಕಡಿಮೆ ಅವಧಿಯಲ್ಲಿ ರಿಚಾರ್ಜ್ ಮಾಡಿಕೊಂಡು ಓಡಾಡುವಂತಾಗಬೇಕು.
- ಅಟೋಮೆಟಿಕ್ ಟಿಕೆಟಿಂಗ್ ಯಂತ್ರಗಳನ್ನು ಸರಿಪಡಿಸಿ ಮರುಚಾಲನೆ ನೀಡಬೇಕು. – ಯೋಗೇಶ್ ರಂಗನಾಥ್, ಕ್ಲೀನ್‌ಏರ್ ಪ್ಲಾಟ್‌ಫಾರಂ ಸಿಇಒ
- ಮೆಟ್ರೋದಲ್ಲಿ ಹವಾನಿಯಂತ್ರಿತ ವ್ಯವಸ್ಥೆ ಬದಲಿಗೆ ತಾತ್ಕಾಲಿಕವಾಗಿ ಫ್ಯಾನ್‌ಗಳನ್ನೇಕೆ ಅಳವಡಿಸಬಾರದು?
- ನಿಲ್ದಾಣಗಳ ಎರಡು-ಮೂರು ಕಿ.ಮೀ. ಸುತ್ತಲಿನ ವ್ಯಾಪ್ತಿಯಲ್ಲಿ ಬಸ್ ಸಂಪರ್ಕ ಸೇವೆಗಳು ಪರಿಣಾಮಕಾರಿಯಾಗಿ ಆಗಬೇಕು. ಕಬ್ಬನ್ ಉದ್ಯಾನ ಮತ್ತು ವಿಧಾನಸೌಧದಿಂದ ವಸಂತನಗರ ನಡುವೆ ಫೀಡರ್ ಸೇವೆಗೆ ಕಳೆದ ಐದು ವರ್ಷಗಳಿಂದ ಬೇಡಿಕೆ ಇಡಲಾಗುತ್ತಿದೆ. ಇನ್ನೂ ಆಗಿಲ್ಲ
- ಮುಖಗವಸು, ಸ್ಯಾನಿಟೈಸರ್ ಸೇರಿದಂತೆ ಮಾರ್ಗ ಸೂಚಿ ಪಾಲಿಸದವರ ವಿರುದ್ಧ ಕಟ್ಟು ನಿಟ್ಟಾಗಿ ಕಾರ್ಯಾಚರಣೆ ಮಾಡಬೇಕು. ಹೆಚ್ಚು ದಂಡ ವಿಧಿಸಬೇಕು. ಈ ಕ್ರಮಗಳು ಪ್ರಯಾಣಿಕರಲ್ಲಿ ಸುರಕ್ಷತೆ ಬಗ್ಗೆ ವಿಶ್ವಾಸ ಹೆಚ್ಚಿಸುತ್ತವೆ. – ರಾಜಕುಮಾರ್ ದುಗರ್, ಸಂಚಾಲಕರು, ಸಿಟಿಜನ್ ಫಾರ್ ಸಿಟಿಜನ್
- ಮೆಟ್ರೋ ಮತ್ತು ರೈಲು ಒಂದಕ್ಕೊಂದು ಪೂರಕವಾಗಿವೆ. ನಿತ್ಯ ಬೈಯಪ್ಪನಹಳ್ಳಿಯಿಂದಲೇ ಸಾವಿರಾರು ಪ್ರಯಾಣಿಕರು ಮೆಟ್ರೋ ಏರುತ್ತಿದ್ದರು. ಅವರೆಲ್ಲಾ ವೈಟ್‌ಫೀಲ್ಡ್ ಸೇರಿದಂತೆ ಉಪನಗರಗಳಿಂದ ಬರುತ್ತಿದ್ದರು.
- ಈಗ ರೈಲು ಸೇವೆ ಇಲ್ಲದ್ದರಿಂದ ಖಾಸಗಿ ವಾಹನ ಅಥವಾ ಬಸ್‌ಗಳಲ್ಲಿ ಬರುತ್ತಿದ್ದಾರೆ. ಆದ್ದರಿಂದ ಕೊನೆಪಕ್ಷ ಆಯ್ದ ಮಾರ್ಗಗಳಲ್ಲಿ ರೈಲು ಸೇವೆ ಶುರು ಮಾಡಲು ರಾಜ್ಯ ಸರ್ಕಾರ ರೈಲ್ವೆ ಇಲಾಖೆಗೆ ಮನವಿ ಮಾಡಬೇಕು. ಮುಂಬೈನಲ್ಲಿ ಸಬ್‌ಅರ್ಬನ್ ಸೇವೆ ಸಾಧ್ಯವಾಗಿದ್ದು, ಇಲ್ಲಿ ಯಾಕೆ ನಿರ್ಬಂಧ?
- ಮೆಟ್ರೋ ನಿಲ್ದಾಣಗಳಲ್ಲಿರುವ ವಾಹನ ನಿಲುಗಡೆ ಪ್ರದೇಶ ಈಗ ಉಪಯೋಗ ಆಗುತ್ತಿಲ್ಲ. ಯಾಕೆಂದರೆ, ಜನ ಅಲ್ಲಿಗೆ ಬರುತ್ತಿಲ್ಲ. ತಾತ್ಕಾಲಿಕವಾಗಿ ಪಾರ್ಕಿಂಗ್ ಉಚಿತ ಆಗಬೇಕು.
- ಸ್ಮಾರ್ಟ್ ಕಾರ್ಡ್‌ನಲ್ಲಿ ಕನಿಷ್ಠ ನೂರು ರೂ.ಇರಲೇಬೇಕೆಂಬ ನಿಯಮ ತಾತ್ಕಾಲಿಕವಾಗಿಸಡಿಲಗೊಳಿಸಬೇಕು. ಎಷ್ಟೋ ಜನ ವಾರಕ್ಕೊಮ್ಮೆ ಅಥವಾ ಎರಡು ಬಾರಿ ಪ್ರಯಾಣಿಸುವವರೂ ಇದ್ದಾರೆ. ದಿನಗೂಲಿ ನೌಕರರು, ಕಾರ್ಮಿಕ ವರ್ಗಕ್ಕೆ ಆ ನೂರು ರೂ. ಯಾವತ್ತಿದ್ದರೂ ಹೊರೆಯೇ.
- ಬಹುತೇಕ ಟಿಟಿಎಂಸಿ, ಬಸ್ ನಿಲ್ದಾಣಗಳಿಗೆಹಾಗೂ ಮೆಟ್ರೋ ನಿಲ್ದಾಣಗಳ ನಡುವೆ ಇಂಟಿಗ್ರೇಷನ್ ಇಲ್ಲ. ಉದಾಹರಣೆಗೆ ಬನಶಂಕರಿ ಟಿಟಿಎಂಸಿ, ತುಮಕೂರು ರಸ್ತೆಯ ಪೀಣ್ಯ,ದಾಸರಹಳ್ಳಿ, ಜಾಲಹಳ್ಳಿ ನಾಗಸಂದ್ರದಲ್ಲಿ ರಸ್ತೆ ದಾಟಲು ಸುತ್ತುವರಿದು ಬರಬೇಕಿದೆ.- ಸಂಜೀವ್ ದ್ಯಾಮಣ್ಣವರ, ರೈಲ್ವೆ ತಜ್ಞ
- ಸ್ಪರ್ಶರಹಿತ ವ್ಯವಸ್ಥೆ ಜತೆಗೆ ಸರಳೀಕೃತ ಮತ್ತು ಅಡತಡೆರಹಿತ ಪ್ರಯಾಣ ಸೇವೆ ಅಗತ್ಯ. ಮೆಟ್ರೋ ಮಾರ್ಗದುದ್ದಕ್ಕೂ ಬರುವ ನಿಲ್ದಾಣಗಳಿಂದ ಸಂಪರ್ಕ ಸೇವೆಗಳನ್ನು ಕಲ್ಪಿಸಬೇಕು. ವೈಜ್ಞಾನಿಕವಾಗಿ ಫೀಡರ್ ಬಸ್‌ಗಳನ್ನೂ ಕಲ್ಪಿಸಬೇಕು
- ಮೆಟ್ರೋ ನಿಲ್ದಾಣಗಳ ಕನಿಷ್ಠ 800 ಮೀ. ಸುತ್ತ ಉತ್ತಮ ಗುಣಮಟ್ಟ ಮತ್ತು ಸಾಮರ್ಥ್ಯದ ಫುಟ್‌ಪಾತ್‌ಗಳ ವ್ಯವಸ್ಥೆ ಇರಬೇಕು
- ನಿಲ್ದಾಣಗಳ ಸುತ್ತಲಿನ ಒಂದೂವರೆ ಕಿ.ಮೀ. ವ್ಯಾಪ್ತಿಯಲ್ಲಿ ಬೈಸಿಕಲ್ ಆದ್ಯತಾ ಪಥ, ನಿಲುಗಡೆ ತಾಣಗಳ ವ್ಯವಸ್ಥೆ ಕಲ್ಪಿಸಬೇಕು.
- ನಗರದ ಹೊರವಲಯದಲ್ಲಿರುವ ನಿಲ್ದಾಣಗಳಲ್ಲಿ ವಾಹನ ಅಥವಾ ಬೈಸಿಕಲ್ ನಿಲುಗಡೆ ಮಾಡಿ, ಮೆಟ್ರೋದಲ್ಲಿ ಪ್ರಯಾಣಿಸುವ ವ್ಯವಸ್ಥೆ ಕಲ್ಪಿಸಬೇಕು.
- ಕಾಯುವ ಅವಧಿ ಕಡಿಮೆ ಮಾಡಲು ಮೆಟ್ರೋ ಫ್ರಿಕ್ವೆನ್ಸಿ ಹೆಚ್ಚಿಸಬೇಕು. ಇದರಿಂದ ದಟ್ಟಣೆ ಕಡಿಮೆ ಆಗಲಿದ್ದು, ಸೋಂಕಿನ ಸಾಧ್ಯತೆ ಕಡಿಮೆ ಇರುತ್ತದೆ. – ಪ್ರೊ.ಆಶಿಶ್ ವರ್ಮ, ಭಾರತೀಯ ವಿದ್ಯಾಸಂಸ್ಥೆ, ಸಹ ಪ್ರಾಧ್ಯಾಪಕ(ಐಐಎಸ್ಸಿ)
Related Articles
Advertisement
– ವಿಜಯಕುಮಾರ ಚಂದರಗಿ