ಮಂಗಳೂರು: ಬೆಂಗಳೂರು -ಮೈಸೂರು – ಮಂಗಳೂರು ಸೆಂಟ್ರಲ್- ಮುರುಡೇಶ್ವರ ನಡುವೆ ಸಂಚರಿಸುತ್ತಿರುವ ಬೆಂಗಳೂರು – ಮುರುಡೇಶ್ವರ ಎಕ್ಸ್‌ಪ್ರೆಸ್ ರೈಲಿನ ಸಮಯ ಬದಲಾಯಿಸುವಂತೆ ರೈಲ್ವೇ ಮಂಡಳಿಯ ಪ್ರಸ್ತಾವನೆಗೆ ನೈಋತ್ಯ ರೈಲ್ವೇ ಮಂಡಳಿ ಅಸಮ್ಮತಿ ಸೂಚಿಸಿದೆ ಎಂದು ನೈರುತ್ಯ ರೈಲ್ವೇಯ ಅಧಿಕೃತ ಮೂಲಗಳು ತಿಳಿಸಿವೆ.
ನಂ.16585/86 ರೈಲು ರಾತ್ರಿ 7.45ಕ್ಕೆ ಬೆಂಗಳೂರಿನಿಂದ ಹೊರಟು ಮರುದಿನ ಮಧ್ಯಾಹ್ನ 12.50ಕ್ಕೆ ಮುರುಡೇಶ್ವರ ತಲುಪುತ್ತಿದ್ದು,ಮಧ್ಯಾಹ್ನ 2.10ಕ್ಕೆ ಮುರುಡೇಶ್ವರ ದಿಂದ ಹೊರಟು ಮರುದಿನ ಬೆಳಗ್ಗೆ 7.15ಕ್ಕೆ ಮತ್ತೆ ಬೆಂಗಳೂರು ಸೇರುತ್ತದೆ. ಈ ರೈಲಿಗೆ ಮುರುಡೇಶ್ವರದಲ್ಲಿ ತಂಗಲು 1 ಗಂಟೆ 20 ನಿಮಿಷ ಮಾತ್ರ ಕಾಲಾವಕಾಶವಿದೆ. ಇಲ್ಲಿಗೆ ರೈಲು ತನ್ನ ತಲುಪಿದ ಬಳಿಕ ನೀರು, ಸ್ವಚ್ಛತೆ, ಮರು ಇಂಧನ ತುಂಬಲು ಹೆಚ್ಚಿನ ಸಮಯ ಬೇಕಾಗುತ್ತದೆ ಎನ್ನುವ ಕಾರಣ ನೀಡಿ ನಿಲುಗಡೆ ಅವಧಿ ಹೆಚ್ಚಿಸುವಂತೆ ರೈಲ್ವೇ ಮಂಡಳಿಯು ಪತ್ರ ಬರೆದಿತ್ತು.
ಈ ರೈಲು ರಾತ್ರಿ 7.45ಕ್ಕೆ ಬೆಂಗಳೂರಿನಿಂದ ಹೊರಟು ರಾತ್ರಿ 12.10ಕ್ಕೆ ಪಡೀಲ್ ತಲುಪಿ ಅಲ್ಲಿಂದ ತೋಕೂರು ಮೂಲಕ ಮುಂಜಾನೆ 5.15ಕ್ಕೆ ಮುರುಡೇಶ್ವರ ತಲುಪುತ್ತದೆ. ಮರು ಪ್ರಯಾಣದಲ್ಲಿ ಬೆಳಗ್ಗೆ 10.30ಕ್ಕೆ ಮುರುಡೇಶ್ವರದಿಂದ ಹೊರಟು ಮರುದಿನ ಬೆಳಗ್ಗೆ 7.15ಕ್ಕೆ ಬೆಂಗಳೂರು ತಲುಪುವಂತೆ ಸಂಬಂಧಿಸಿದ ಪ್ರಸ್ತಾವಿತ ವೇಳಾಪಟ್ಟಿ ಸಿದ್ಧಪಡಿಸಲಾಗಿತ್ತು.
ರೈಲ್ವೇ ಮಂಡಳಿಯ ಈ ಪ್ರಸ್ತಾವನೆಗೆ ರೈಲ್ವೇ ಹೋರಾಟಗಾರರು ವಿರೋಧ ವ್ಯಕ್ತಪಡಿಸಿದ್ದರು. ಮುರುಡೇಶ್ವರ ರೈಲು ನಿಲ್ದಾಣದಲ್ಲಿ ರೈಲು ಶುಚಿಗೊಳಿಸಲು ಮೂಲ ಸೌಕರ್ಯಗಳು ಇಲ್ಲದಿರುವಾಗ ಈ ಪ್ರಸ್ತಾವನೆಗೆ ಸಮ್ಮತಿ ಸೂಚಿ
ಸುವ ಅಗತ್ಯವೂ ಇಲ್ಲ ಎಂದು ಹೋರಾಟ ಗಾರರು ಆಕ್ರೋಶ ವ್ಯಕ್ತಪಡಿಸಿದ್ದರು.