ಬೆಂಗಳೂರು: ಕೊರೊನಾ ಭೀತಿಯಿಂದ ನಗರ ತೊರೆದು ಹಳ್ಳಿಗಳಿಗೆ ಹಿಂದಿರುಗು ವವರಿಗೆ ನರೇಗಾದಡಿ ತತ್‌ಕ್ಷಣ ಉದ್ಯೋಗ ನೀಡಲು ಎಲ್ಲ ಗ್ರಾಮ ಪಂಚಾಯತ್‌ಗಳು ಸಜ್ಜಾಗಿವೆ.
ಇಂಥವರು ಉದ್ಯೋಗ ಬಯಸಿ ದಲ್ಲಿ ವಿಳಂಬಿಸದೆ ಜಾಬ್ ಕಾರ್ಡ್ ಕೊಡುವುದರ ಸಹಿತ ಇತರ ಪ್ರಕ್ರಿಯೆ ಪೂರೈಸುವುದು, ಮರು ದಿನವೇ ಕೆಲಸಕ್ಕೆ ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆ ಈ ಕ್ರಮ ಕೈಗೊಂಡಿದೆ. ಈಗಾಗಲೇ ಎಲ್ಲ ಗ್ರಾ.ಪಂ. ಪಿಡಿಒ ಗಳಿಗೆ ಈ ಜವಾ ಬ್ದಾರಿ ನೀಡಲಾಗಿದೆ. ಇತರ ಸಿಬಂದಿಯ ನೆರವು ಪಡೆದು ಕೊರೊನಾ ಸಂದರ್ಭದಲ್ಲಿ ಹಳ್ಳಿಗೆ ಮರಳಿದವರಲ್ಲಿ ಎಷ್ಟು ಮಂದಿಗೆ ಉದ್ಯೋಗ ನೀಡಲಾಗಿದೆ ಎಂಬುದರ ವರದಿ ಕೂಡ ಸಿದ್ಧವಾಗಲಿದೆ.
“ಜಲಶಕ್ತಿ’ ಕಾಮಗಾರಿಗೆ ಬಳಕೆ
ಉದ್ಯೋಗ ಬಯಸಿ ಬಂದವ ರನ್ನು “ಜಲಶಕ್ತಿ’ ಅಭಿಯಾನದ ಕಾಮಗಾರಿ ಗಳಿಗೆ ಹೆಚ್ಚು ಬಳಸಿಕೊಳ್ಳಲು ನಿರ್ದೇಶನ ನೀಡಲಾಗಿದೆ. ಪ್ರತೀ 15 ದಿನಗಳ ಒಳಗೆ ಕೂಲಿ ಪಾವತಿಗೆ ಕ್ರಮ ಕೈಗೊಳ್ಳಬೇಕು, ವಿಳಂಬಿಸಬಾರದು ಎಂದು ಸೂಚನೆ ನೀಡಲಾಗಿದೆ.
ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಇಲಾಖೆಯು ಮಾ. 15ರಿಂದಲೇ “ದುಡಿಯೋಣ ಬಾರಾ’ ಹೆಸರಿನಲ್ಲಿ ಮೂರು ತಿಂಗಳ ಕಾಲ ಉದ್ಯೋಗ ನೀಡುವ ಅಭಿಯಾನ ಆರಂಭಿಸಿದೆ. ಅನಂತರ ಜಲಶಕ್ತಿ ಅಭಿಯಾನಕ್ಕೂ ಚಾಲನೆ ನೀಡಿದೆ. ಹೀಗಾಗಿ ಕೂಲಿ ಕೆಲಸಕ್ಕೆ ಹೆಚ್ಚು ಜನರ ಆವಶ್ಯಕತೆ ಇದೆ. ಈಗ ನಗರ ಗಳಿಂದ ಜನರು ಹಳ್ಳಿಗಳಿಗೆ ಮರ ಳಿ ರುವುದರಿಂದ ಎಲ್ಲರಿಗೂ ಕೆಲಸ ಸಿಗು ವಂತಾಗಲಿದೆ. ಕೆಲವು ಜಿಲ್ಲೆಗಳಲ್ಲಿ ಒಂದು ವಾರದ ಅವಧಿಯಲ್ಲಿ 50 ಸಾವಿರಕ್ಕೂ ಹೆಚ್ಚು ಜನರು ಕೆಲಸ ಕೇಳಿ ಬಂದಿದ್ದು, ಮುಂದಿನ ದಿನಗಳಲ್ಲಿ ಈ ಸಂಖ್ಯೆ ಹೆಚ್ಚಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನರೇಗಾ: ಎಷ್ಟು ಮಂದಿಗೆ ಕೆಲಸ?
– 29.93 ಲಕ್ಷ ಕುಟುಂಬಗಳ 56.29 ಲಕ್ಷ ಜನರಿಗೆ ಉದ್ಯೋಗ
– ಕಳೆದ ವರ್ಷ 14.50 ಕೋಟಿ ಮಾನವ ದಿನಗಳ ಸೃಷ್ಟಿ
– ಈ ವರ್ಷ 15 ಕೋಟಿ ಮಾನವ ದಿನಗಳ ಸೃಷ್ಟಿ ಗುರಿ
ಉದ್ಯೋಗ ಕೇಳಿ ಯಾರೇ ಬಂದರೂ ತತ್‌ಕ್ಷಣ ಕೆಲಸ ನೀಡ ಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿ ಗ್ರಾ.ಪಂ.ಗಳಲ್ಲಿ ಅದಕ್ಕಾಗಿ ವಿಶೇಷ ವ್ಯವಸ್ಥೆ ಮಾಡಲಾಗಿದೆ.
– ಕೆ.ಎಸ್. ಈಶ್ವರಪ್ಪ , ಗ್ರಾಮೀಣಾಭಿವೃದ್ಧಿ ಮತ್ತು ಪಂ. ರಾಜ್ ಸಚಿವರು