Advertisement
ಸಿಎಂ ಹಾಗೂ ಸಚಿವ ಸಿಟಿ ರವಿ ಸಮ್ಮುಖದಲ್ಲಿ ನಂದಿಗಿರಿಧಾಮವನ್ನು ತೋಟಗಾರಿಕೆಇಲಾಖೆಯಿಂದ ಪ್ರವಾಸೋದ್ಯಮಹಸ್ತಾಂತರಿಸಲುನಿರ್ಧರಿಸಿರುವುದು ಅಸಮಾಧಾನಕ್ಕೆಕಾರಣವಾಗಿದೆ.
Related Articles
Advertisement
ವಾಣಿಜ್ಯಕರಣ ಬೇಡ: ಜಿಲ್ಲೆಯ ಪ್ರವಾಸಿತಾಣ ನಂದಿ ಗಿರಿಧಾಮದ ಅಭಿವೃದ್ಧಿಗೆ ಸರ್ಕಾರಯೋಜನೆಗಳನ್ನು ರೂಪಿಸಿ ಅನುಷ್ಠಾನಗೊಳಿಸಲಿ. ಆದರೆ ನಂದಿ ಗಿರಿಧಾಮವನ್ನು ಪ್ರವಾಸೋದ್ಯಮದ ಇಲಾಖೆಗೆ ಹಸ್ತಾಂತರಿಸಿ ವಾಣಿಜ್ಯಕರಣಗೊಳಿಸುವಯಾವುದೇ ರೀತಿಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ನಿರ್ಧಾರವನ್ನು ಸರ್ಕಾರ ವಾಪಸ್ ಪಡೆಯಬೇಕೆಂದು ಪರಿಸರ ಪ್ರೇಮಿಗಳು ಮತ್ತುನಿವೃತ್ತ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಪರಿಸರ ಪ್ರೇಮಿಗಳು ಒತ್ತಾಯಿಸುತ್ತಿದ್ದಾರೆ.
ನಂದಿ ಉಳಿಸಿ ಅಭಿಯಾನ… : ಕೋಲಾರ ಮತ್ತು ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ ಆಮ್ಲಜನಕ ಕೇಂದ್ರ (ಆಕ್ಸಿಜನ್ ಸೆಂಟರ್)ವಾಗಿದೆ. ಜೀವ ವೈವಿಧ್ಯತೆ ಇದೆ. ಹಲವಾರು ನದಿಗಳ ಉಗಮ ಸ್ಥಾನ ಮತ್ತು ಅರಣ್ಯ ಸಂಪತ್ತನ್ನು ಮಡಿಲಲ್ಲಿ ಇಟ್ಟುಕೊಂಡಿದೆ ನಂದಿ ಗಿರಿಧಾಮ. ಈ ಪ್ರದೇಶದ ವ್ಯಾಪ್ತಿಯಲ್ಲಿಕೃಷಿಯೇತರಚಟುವಟಿಕೆಗಳನ್ನು ಸಂಪೂರ್ಣ ನಿಷೇಧಿಸಿ ಸುಮಾರು5ಕಿ.ಮೀ. ವ್ಯಾಪ್ತಿಯನ್ನು ಪರಿಸರ ಸೂಕ್ಷ್ಮ ವಲಯ ಎಂದು ಘೋಷಣೆ ಮಾಡಿ ಗಣಿಗಾರಿಕೆಗೆ ಅವಕಾಶ ನೀಡದೆ ಅಲ್ಲಿರುವಅರಣ್ಯ ಪ್ರದೇಶ ಉಳಿಸುವ ಜೊತೆಗೆ ಅಮೂಲ್ಯ ಪ್ರಭೇದಗಳನ್ನು ಉಳಿಸಿ ಸ್ಥಳೀಯ ಪ್ರಭೇದಗಳನ್ನು ಹಾಕಿ ಅರಣ್ಯ ಬೆಳೆಸುವಂತಹಕೆಲಸ ಆಗಬೇಕೆಂಬ ಆಗ್ರಹಕೇಳಿ ಬರುತ್ತಿದೆ. ಸರ್ಕಾರ ವಾಣಿಜ್ಯಕರಣಗೊಳಿಸುವ ಉದ್ದೇಶದಿಂದ ನಂದಿ ಗಿರಿಧಾಮವನ್ನು ಪ್ರವಾಸೋದ್ಯಮದ ಇಲಾಖೆಗೆ ಹಸ್ತಾಂತರಿಸಲು ಹೊರಟಿರುವುದನ್ನು ಆಕ್ಷೇಪ ವ್ಯಕ್ತಪಡಿಸಿರುವ ಪರಿಸರ ಪ್ರೇಮಿಗಳು ಸರ್ಕಾರ ನಿರ್ಧಾರವನ್ನು ವಾಪಸ್ ಪಡೆಯದಿದ್ದಲ್ಲಿ ನಂದಿ ಉಳಿಸಿ ಅಭಿಯಾನ ನಡೆಸಲು ವೇದಿಕೆ ಸಜ್ಜಾಗಿದೆ.
ಲೇಔಟ್,ಕೈಗಾರಿಕೆ, ರೆಸಾರ್ಟ್‌ಗೆ ಅವಕಾಶ ಬೇಡ : ನಂದಿ ಗಿರಿಧಾಮದ ಸುತ್ತಮುತ್ತ ಲೇಔಟ್, ಕೈಗಾರಿಕೆಗಳು, ರೆಸಾರ್ಟ್‌ಗಳ ಸ್ಥಾಪನೆಗೆ ಅವಕಾಶ ನೀಡಬಾರದು. ಪರಿಸರ ಸಂರಕ್ಷಣೆ ಮಾಡಲು ಪರಿಸರ ಸೂಕ್ಷ್ಮ ವಲಯ ವೆಂದು ಘೋಷಿಸಿ ಗಿರಿ ಧಾಮದ ಸುತ್ತಮುತ್ತ ಗಣಿಗಾರಿಕೆ ನಿಷೇಧಿಸಿ ಆದೇಶ ಹೊರಡಿಸಬೇಕುಎಂದು ಚಿಕ್ಕಬಳ್ಳಾಪುರದಪರಿಸರ ಪ್ರೇಮಿ ಆಂಜಿನೇಯರೆಡ್ಡಿ ಹೇಳಿದರು. ನಂದಿ ಗಿರಿಧಾಮವನ್ನು ಪ್ರವಾಸೋದ್ಯಮ ಇಲಾಖೆಗೆ ಹಸ್ತಾಂತರಿಸುವುದರಿಂದ ಸರ್ಕಾರಕ್ಕೆ ಆದಾಯ ಬರಬಹುದು ವಿನಃ ಜೀವ ವೈವಿಧ್ಯತೆಮತ್ತು ಜಲಮೂಲಗಳನ್ನು ಅಭಿವೃದ್ಧಿಗೊಳಿಸುವಕಾರ್ಯ ಪ್ರವಾಸೋದ್ಯಮ ಇಲಾಖೆಯಿಂದ ಆಗುವುದಿಲ್ಲ. ಬದಲಿಗೆ ನಾಶವಾಗುತ್ತದೆ. ಆದ್ದರಿಂದ ಸರ್ಕಾರ ಕೂಡಲೇ ನಿರ್ಧಾರ ಹಿಂಪ ಡೆದು ಪರಿಸರ ಸ್ನೇಹಿ ಕೆಲಸ ಮಾಡಬೇಕು. ಇಲ್ಲ ದಿದ್ದರೆ ಪ್ರಗತಿಪರ ಸಂಘಟನೆಗಳ ಸಹಕಾರದಿಂದ ನಂದಿಬೆಟ್ಟ ಉಳಿಸಿ ಅಭಿಯಾನಕ್ಕೆ ಚಾಲನೆ ನೀಡುತ್ತೇವೆ ಎಂದು ಹೇಳಿದ್ದಾರೆ.
ನಂದಿ ಗಿರಿಧಾಮವನ್ನು ತೋಟ ಗಾರಿಕೆ ಇಲಾಖೆಯನಿರ್ವಹಣೆ ಮುಂದು ವರಿಸಿ ಪ್ರವಾಸೋದ್ಯಮ ಇಲಾಖೆ ಮೂಲಕ ಅಭಿವೃದ್ಧಿ ಕೆಲಸಗಳು ನಡೆಯಲಿ. ನಂದಿಗಿರಿಧಾಮದ ಮೂಲಕ ಬರುವ ಆದಾಯ ಗಿರಿಧಾಮಕ್ಕೆಬಳಸುವಂತಹಕೆಲಸ ಆಗಬೇಕು. ಎರಡುಇಲಾಖೆಗಳು ಸಮನ್ವಯದಿಂದಕಾರ್ಯ ನಿರ್ವಹಿಸಿ ಪ್ಲಾಸ್ಟಿಕ್ ನಿಷೇಧಿಸಿ ಪರಿಸರ ಉಳಿಸುವಕೆಲಸ ಪರಿಣಾಮಕಾರಿಯಾಗಿ ಮಾಡಬೇಕು. – ಸಂತೋಷ್ ಬೆಳ್ಳೂಟಿ, ಪರಿಸರ ಪ್ರೇಮಿ, ಶಿಡ್ಲಘಟ್ಟ
–ಎಂ.ಎ.ತಮೀಮ್ ಪಾಷ