Advertisement

ISRO: ಅಂತರಿಕ್ಷದಲ್ಲಿ ಅಲಸಂದೆ ಬೀಜ ಮೊಳಕೆ: ಇಸ್ರೋ ಪ್ರಯೋಗಕ್ಕೆ ಯಶಸ್ಸು

10:28 AM Jan 05, 2025 | Team Udayavani |

ನವದೆಹಲಿ: ಗುರುತ್ವಾಕರ್ಷಣೆಯಿಂದ ದೂರವಾಗಿ ಬಾಹ್ಯಾಕಾಶದಲ್ಲಿ ಸಸ್ಯದ ಬೆಳವಣಿಗೆ ಹೇಗಿರುತ್ತದೆ ಎಂಬುದನ್ನು ತಿಳಿದುಕೊಳ್ಳಲು ಇಸ್ರೋ ಕೈಗೊಂಡಿದ್ದ ಪ್ರಯೋಗದಲ್ಲಿ ಯಶಸ್ಸು ಸಾಧಿಸಿದೆ. ಬಾಹ್ಯಾಕಾಶಕ್ಕೆ ಕಳುಹಿಸಲಾಗಿದ್ದ ಅಲಸಂದೆ ಬೀಜಗಳು 4 ದಿನಗಳಲ್ಲೇ ಮೊಳಕೆ ಬಂದಿದೆ ಎಂದು ಇಸ್ರೋ ಶನಿವಾರ ಹೇಳಿದೆ.

Advertisement

ಬಾಹ್ಯಾಕಾಶ ಡಾಕಿಂಗ್‌ಗಾಗಿ ಮಂಗಳವಾರ ಕೈಗೊಂಡಿದ್ದ ಉಡಾವಣೆ ಬಾಹ್ಯಾಕಾಶದಲ್ಲಿ ಸಸ್ಯ ಬೆಳೆಸುವ ಯೋಜನೆಯನ್ನೂ ಹೊಂದಿತ್ತು. ಇದಕ್ಕಾಗಿ ಪಿಎಸ್‌ ಎಲ್‌ವಿ-ಸಿ60 ರಾಕೆಟ್‌ನಲ್ಲಿ ಬಾಹ್ಯಾಕಾಶದಲ್ಲಿ ಸಸ್ಯ ಬೆಳವಣಿಗೆಗೆ ಬೇಕಾದ ಎಲ್ಲಾ ಘಟಕಗಳನ್ನು ಅಳವಡಿಸಲಾಗಿತ್ತು.

“ಇದು ಇನ್ನೂ 3-4 ದಿನಗಳ ಕಾಲ ಕಾರ್ಯನಿರ್ವಹಿಸಲಿದ್ದು, ಬಾಹ್ಯಾಕಾಶ ದಲ್ಲಿ ಸಸ್ಯ ಬೆಳವಣಿಗೆ ಬಗ್ಗೆ ಹೆಚ್ಚಿನ ಅಧ್ಯಯನ ನಡೆಸಲಾಗುತ್ತದೆ’ ಎಂದು ಇಸ್ರೋ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next