Advertisement
ಮೆಟ್ರೋದಲ್ಲಿ ಸುರಂಗ ಮಾರ್ಗದ ಮುಖ್ಯ ಉದ್ದೇಶ ಬಹುಪಯೋಗಿ ಭೂಬಳಕೆ ಆಗಿದೆ. ಅಲ್ಲದೆ, ನಗರದ ಸೌಂದರ್ಯ ಕಾಪಾಡುವುದರ ಜತೆಗೆ ಅಭಿವೃದ್ಧಿಕಾರ್ಯವೂಕೈಗೂಡುತ್ತದೆ. “ನಮ್ಮ ಮೆಟ್ರೋ’ ಬಹುತೇಕ ನಗರದ ಹೃದಯಭಾಗದಲ್ಲೇ ಹಾದುಹೋಗುತ್ತದೆ. ಈ ಮೊದಲೇ ಭೂಮಿಯ ಲಭ್ಯತೆ ತುಂಬಾಕಡಿಮೆ ಇದೆ. ಅದರಲ್ಲೂ ಸಿಬಿಡಿ ಪ್ರದೇಶದಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚು. ಸುರಂಗ ನಿರ್ಮಿಸಿದರೆ, ಲಭ್ಯವಿರುವ ಭೂಮಿಯಲ್ಲಿ ವಿವಿಧ ಉದ್ದೇಶಗಳಿಗೆ ಬಳಕೆ ಮಾಡಿದಂತಾಗುತ್ತದೆ. ಇನ್ನು ಭೂಸ್ವಾಧೀನ ಪ್ರಕ್ರಿಯೆಗೆ ಸಾಕಷ್ಟುಸಮಯ ಹಿಡಿಯುತ್ತದೆ. ಆಗ, ಯೋಜನೆ ಅನುಷ್ಠಾನ ವಿಳಂಬವಾಗುತ್ತದೆ. ಅದುಯೋಜನಾ ವೆಚ್ಚ ವಿಸ್ತರಣೆ ರೂಪದಲ್ಲಿ ಪರಿಣಮಿಸುತ್ತದೆ. ಸುರಂಗದಲ್ಲೂ ಭೂಸ್ವಾಧೀನಪಡಿಸಿಕೊಳ್ಳಬೇಕಾಗುತ್ತದೆ. ಆದರೆ ನಿಲ್ದಾಣಕ್ಕೆ ಮಾತ್ರ ಇದರ ಅವಶ್ಯಕತೆ ಇದೆ. ಹಾಗೂ ನಂತರದಲ್ಲಿ ಆ ಜಾಗವನ್ನು ಬೇರೆ ಉದ್ದೇಶಗಳಿಗೂ ಬಳಸಬಹುದು.
Related Articles
Advertisement
ಡ್ರಿಲ್ಲಿಂಗ್ ಮಷಿನ್‌ನಂತೆ ಕೆಲಸ : ಟಿಬಿಎಂ ಒಂದು ಡ್ರಿಲಿಂಗ್‌ಯಂತ್ರ ಇದ್ದಂತೆ. ಗೋಡೆಯ ಒಂದು ಚುಕ್ಕೆ ಮೇಲಿಟ್ಟು ಹಿಂದಿನಿಂದ ಒತ್ತಡ ಹಾಕಲಾಗುತ್ತದೆ. ಅದೇ ರೀತಿ, ಸುರಂಗದಲ್ಲೂಯಂತ್ರಕ್ಕೆ ಹಿಂದಿನಿಂದ 300ರಿಂದ 600 ಟನ್‌ನಷ್ಟು ಒತ್ತಡ ಹಾಕಬೇಕಾಗುತ್ತದೆ. ಇನ್ನು ಸುರಂಗದಲ್ಲಿಕಲ್ಲು ಬಂದರೆ ಟಿಬಿಎಂನಕಟರ್‌ಹೆಡ್ ಒಂದು ನಿಮಿಷಕ್ಕೆ ನಾಲ್ಕು ಬಾರಿ ತಿರುಗಿಸಬೇಕಾಗುತ್ತದೆ. ಮಣ್ಣು ಬಂದರೆ 1-2 ಬಾರಿ ತಿರುಗಿಸಬೇಕು. ಈಗಾಗಲೇ ಗೊತ್ತಿರುವಂತೆ ನಗರದ ಮಣ್ಣು ಕಲ್ಲಿನ ಮಿಶ್ರಣವಾಗಿದೆ. ಒಂದು ವೇಳೆ ಸುರಂಗದಲ್ಲಿ ಬಂಡೆ ಎದುರಾದರೆ, ಅದನ್ನುಕೊರೆಯುವುದುಕಷ್ಟ.ಯಾಕೆಂದರೆ, ಇಡೀ ಬಂಡೆಯೇ ತಿರುಗಲು ಶುರುವಾಗುತ್ತದೆ. ಆಗ ಅದರ ಮೇಲಿನ ಮಣ್ಣಿನ ಪದರಗಳು ಅಲುಗಾಡುತ್ತದೆ. ಇದರಿಂದ ಮೇಲಿನಕಟ್ಟಡಗಳಿಗೆ ತೊಡಕಾಗಬಹುದು. ಈ ವೇಳೆ ಮೇಲಿನಿಂದ ರಂಧ್ರ ಕೊರೆದು, ಸಿಮೆಂಟ್‌ನಿಂದ ಗ್ರೌಟಿಂಗ್ ಮಾಡಲಾಗುತ್ತದೆ. ದೊಡ್ಡ ಬಂಡೆಯಾದರೆ ಹಲವು ಬಾರಿ ಗ್ರೌಟಿಂಗ್ ಮಾಡಬೇಕಾಗುತ್ತದೆ. ಮಣ್ಣಿನ ಪರೀಕ್ಷೆ ವೇಳೆ ಈ ಸುಳಿವು ಸಿಗದು.
ಮಣ್ಣು ಪರೀಕ್ಷೆ ಸವಾಲು : ಸುರಂಗಕೊರೆವ ಮುನ್ನ ಉದ್ದೇಶಿತ ಮಾರ್ಗದಲ್ಲಿ ಮಣ್ಣು ಪರೀಕ್ಷೆ ನಡೆಸಬೇಕು. ಇದಕ್ಕಾಗಿ ಹತ್ತಾರು ಮೀ. ಆಳದಲ್ಲಿಕೊಳವೆಬಾವಿ ಮಾದರಿಯಲ್ಲಿಕೊರೆಯಬೇಕಾಗುತ್ತದೆ. ಆದರೆ, ಸುರಂಗ ಹಾದುಹೋಗುವ ದಾರಿಯಲ್ಲಿಕಟ್ಟಡಗಳು ಇರುತ್ತವೆ. ಅಲ್ಲಿ ಅವಕಾಶ ಸಿಗುವುದಿಲ್ಲ. ಹಾಗಾಗಿ, ರಸ್ತೆಗಳ ಬದಿ ಕೊಳವೆಕೊರೆದು ಮಾದರಿ ಸಂಗ್ರಹಿಸಲಾಗುತ್ತದೆ. ಉದಾಹರಣೆಗೆಕೆ.ಜಿ. ರಸ್ತೆಯ ಎರಡು ಬದಿಯಲ್ಲಿ ಮೆಟ್ರೋ ಸುರಂಗ ಮಾರ್ಗ ಹಾದುಹೋಗಿದೆ. ಆದರೆ, ಮಣ್ಣಿನ ಮಾದರಿ ಸಂಗ್ರಹಿಸಿದ್ದು ರಸ್ತೆ ಮಧ್ಯೆದಿಂದ. ವಿಚಿತ್ರವೆಂದರೆ ಬೆಂಗಳೂರಿನ ಮಣ್ಣಿನ ಗುಣಧರ್ಮ ಪ್ರತಿ 5-10 ಮೀ.ಗೆ ಭಿನ್ನವಾಗಿರುತ್ತದೆ. ಪರಿಣಾಮ ಪರೀಕ್ಷೆಯಲ್ಲಿಕಂಡುಕೊಂಡಿದ್ದು ಒಂದು; ವಾಸ್ತವ ಇನ್ನೊಂದು ಆಗಿರುತ್ತದೆ. ಹಾಗಾಗಿ, ಈ ಸಲ ಪ್ರತಿ 30 ಮೀ. ಗೊಂದುಕೊಳವೆಕೊರೆದು ಮಣ್ಣಿನ ಪರೀಕ್ಷೆ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ.
ನೂರಾರು ಬೋರ್‌ವೆಲ್ : ಮಾರ್ಗದುದ್ದಕ್ಕೂ ನೂರಾರುಕೊಳವೆಬಾವಿಗಳು ದೊರೆಯುತ್ತವೆ. ಅವುಗಳನ್ನು ಸಿಮೆಂಟ್‌ಕಾಂಕ್ರೀಟ್‌ನಿಂದ ಮುಚ್ಚಲಾಗುತ್ತದೆ. ಇದಕ್ಕೆ ಪ್ರತಿಯಾಗಿ ಕೊಳವೆಬಾವಿ ಮಾಲಿಕರಿಗೆ ಪರಿಹಾರ ನೀಡುವುದರ ಜತೆಗೆ ನೀರಿನ ಸಂಪರ್ಕ ಕಲ್ಪಿಸಲಾಗುತ್ತದೆ. ಟಿಬಿಎಂ ಪ್ರತಿ ಬಾರಿ ತೆಗೆಯುವ40 ಕ್ಯೂಬಿಕ್ ಮಣ್ಣನ್ನು ಹೊರಹಾಕಲು40 ಸಾವಿರ ಲೀ.ಗೂ ಅಧಿಕ ನೀರು ಬೇಕಾಗುತ್ತದೆ. ಹಾಗಾಗಿ ನಿತ್ಯ ಲಕ್ಷಾಂತರ ಲೀ. ನೀರು ಬೇಕಾಗುತ್ತದೆ. ಇದಕ್ಕಾಗಿ ಪುನರ್ಬಳಕೆ ವ್ಯವಸ್ಥೆ ಮಾಡಿಕೊಳ್ಳಲಾಗಿದೆ.
ಎರಡು ಕಡೆ ಕೆಲಸ ಆರಂಭ : ಡೈರಿ ವೃತ್ತದಿಂದ ನಾಗವಾರದವರೆಗೆ ಒಟ್ಟಾರೆ ನಾಲ್ಕು ಪ್ಯಾಕೇಜ್‌ಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಈ ಪೈಕಿ ಎರಡು ಪ್ಯಾಕೇಜ್‌ಗಳಲ್ಲಿ ಈಗ ಸುರಂಗಕೊರೆಯುವಕಾರ್ಯಕ್ಕೆ ಚಾಲನೆ ದೊರಕಿದೆ. ಟ್ಯಾನರಿ ರಸ್ತೆಯಕಂಟೋನ್ಮೆಂಟ್‌ನಿಂದ ಶಿವಾಜಿನಗರಕಡೆಗೆಊರ್ಜಾ ಮತ್ತು ವಿಂದ್ಯಾ ಯಂತ್ರಗಳುಕಾರ್ಯಾರಂಭ ಮಾಡಿವೆ. ಅದೇ ರೀತಿ, ಶಿವಾಜಿನಗರದಿಂದ ವೆಲ್ಲಾರಕಡೆಗೆ ವಾರದ ಹಿಂದಷ್ಟೇ “ಅವನಿ’ ಪಯಣ ಶುರು ಮಾಡಿದೆ.
ಗಂಟೆಗೆ ಸಾವಿರ ಯೂನಿಟ್ : ಈ ಬಾರಿ ವಿದ್ಯುತ್‌ಚಾಲಿತಯಂತ್ರವನ್ನು ಬಳಕೆ ಮಾಡುತ್ತಿದ್ದು, ಸದ್ಯಕ್ಕೆ ಗಂಟೆಗೆ ಸಾವಿರ ಯೂನಿಟ್‌ಖರ್ಚಾಗುತ್ತಿದೆ. ಮುಂದಿನ ದಿನಗಳಲ್ಲಿ ಇದಕ್ಕೆ 6 ಮೆ.ವಾ.ವರೆಗೂ ವಿದ್ಯುತ್ ಬೇಕಾಗಬಹುದು. ಬೆಸ್ಕಾಂ ವಿದ್ಯುತ್ ಪೂರೈಕೆ ಹೊಣೆ ಹೊತ್ತಿದೆ. ಈ ಮೊದಲಿನ ಟಿಬಿಎಂಗೆ ನಿತ್ಯ 10-12 ಸಾವಿರ ಲೀ. ಡೀಸೆಲ್‌ಖರ್ಚಾಗುತ್ತದೆ. ಇದಕ್ಕಾಗಿ ಪ್ರತ್ಯೇಕ ಡೀಸೆಲ್ ಬಂಕ್ ತೆರೆಯಲಾಗಿತ್ತು.
ವಿಜಯಕುಮಾರ್ ಚಂದರಗಿ