Advertisement
ಬೆಂಗಳೂರು: ಲಾಕ್‌ಡೌನ್ ತೆರವಾಗಿ ಹಲವು ತಿಂಗಳುಗಳು ಕಳೆದಿವೆ. ನಿರ್ಬಂಧಗಳು ಸಡಿಲಿಕೆ ಗೊಂಡಾಗಿದೆ.ಎಂದಿನಂತೆ ಜನ ರಸ್ತೆಗಿಳಿಯುತ್ತಿದ್ದಾರೆ. ನಗರದ ಜೀವನ ಸಹಜಸ್ಥಿತಿಗೆ ಮರಳಿದೆ. ಆದರೆ, “ನಮ್ಮಮೆಟ್ರೋ’ ಮಾತ್ರಇನ್ನೂ “ಅಸಹಜಸ್ಥಿತಿ’ ಅನುಭವಿಸುತ್ತಿದೆ.
Related Articles
Advertisement
ಇನ್ನು ಪಿಒಎಸ್ ಮೂಲಕ ಸ್ಥಳದಲ್ಲೇ ರಿಚಾರ್ಜ್ ಮಾಡಿಸಿಕೊಂಡರೂ “ಸಿಂಕ್ರನೈಜ್’ ಆಗಲು ಸಮಯ ತೆಗೆದುಕೊಳ್ಳುತ್ತದೆ. ಹಾಗಾಗಿ, ಗ್ರಾಹಕರಿಗೆ ಯುಪಿಎಯಿಂದ ರಿಚಾರ್ಜ್ ಮಾಡಿಸಿಕೊಳ್ಳಲು ಮನವಿ ಮಾಡಲಾಗುತ್ತದೆ. ಕೆಲವರುಆಸೌಲಭ್ಯ ಹೊಂದಿರುವುದಿಲ್ಲ. ಇತ್ತೀಚೆಗೆ ಪ್ರಯಾಣಿಕರಿಗಿಂತದೂರುಗಳೇ ಹೆಚ್ಚು ಬರುತ್ತಿವೆ. ಇದೆಲ್ಲದರ ನಡುವೆ ನಗರದಲ್ಲಿ ಹೆಚ್ಚುತ್ತಿರುವ ಸೋಂಕಿನಿಂದ ನಾಗರಿಕರು ಸ್ವಂತ ವಾಹನಗಳು, ಆಟೋ ಅಥವಾ ಬಸ್ ಮೊರೆ ಹೋಗುತ್ತಿದ್ದಾರೆ ಎಂದು ಎಂದು ಬಿಎಂಆರ್‌ಸಿಎಲ್ ಅಧಿಕಾರಿಯೊಬ್ಬರು ತಿಳಿಸಿದರು.
ಏರಿಕೆಕಂಡಿದೆ: ಬಿಎಂಆರ್‌ಸಿಎಲ್ : ಬೆಳಗ್ಗೆ 9ರಿಂದ 10.30 ಹಾಗೂ ಸಂಜೆ 5ರಿಂದ 6.30ರ ಅವಧಿಯಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚಿರುತ್ತದೆ. ಕಳೆದ ಒಂದು ವಾರದಿಂದ ಪ್ರಯಾಣಿಕರ ಸಂಖ್ಯೆ 50 ಸಾವಿರ ದಾಟುತ್ತಿದ್ದು, 25-30 ಲಕ್ಷ ರೂ. ಆದಾಯ ಸಂಗ್ರಹ ಆಗುತ್ತಿರುವುದು ಸಮಾಧಾನಕರ ಸಂಗತಿ. “ನಾಲ್ಕೈದು ದಿನಗಳಿಂದಪ್ರಯಾಣಿಕರ ಸಂಖ್ಯೆ ಅಧಿಕವಾಗಿದ್ದು, ಆರಂಭದದಿನಗಳಿಗೆ ಹೋಲಿಸಿದರೆ ಸಾಕಷ್ಟು ಏರಿಕೆ ಕಂಡು ಬಂದಿದೆ ಎಂದು ಬಿಎಂಆರ್‌ಸಿಎಲ್ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚವಾಣ್ ಹೇಳಿದರು.
ಒಂದೆಡೆ ಭಯ ಇದೆ.ಮತ್ತೂಂದೆಡೆ ನಿರ್ಬಂಧಗಳಿವೆ.ಈ ಸಂದರ್ಭದಲ್ಲಿ ಜನಹೆಚ್ಚು ಬರುವುದಿಲ್ಲ ಎನ್ನುವುದು ನಿರೀಕ್ಷಿತ.ಆದರೆ, ಪ್ರಯಾಣಿ ಕರಿಗೆ ಪೂರಕವಾದಕೆಲವುಕ್ರಮಗಳನ್ನುಕೈಗೊಳ್ಳಬೇಕು.ಸಂಜೆ 7ರ ನಂತರ ಫ್ರಿಕ್ವೆನ್ಸಿ ಹೆಚ್ಚಿಸುವ ಅಗತ್ಯವಿದೆ. – ಅಭಿಷೇಕ್ ಆರ್., ವಿಜಯನಗರ ನಿವಾಸಿ
ಮೆಟ್ರೋದಲ್ಲಿ ಹವಾನಿಯಂತ್ರಿತ ವ್ಯವಸ್ಥೆಯಿದ್ದು, ಸೋಂಕು ಹರಡುವ ಸಾಧ್ಯತೆಹೆಚ್ಚು.ಜತೆಗೆ ಎಷ್ಟರ ಮಟ್ಟಿಗೆ ಸ್ಯಾನಿಟೈಸ್ ಆಗಿರುತ್ತದೆ ಸ್ಪಷ್ಟತೆಯಿಲ್ಲ. ಆರಂಭದಲ್ಲಿ ರೈಲ್ವೆ ಮತ್ತು ಬಸ್‌ಗಳಲ್ಲಿ ಇದನ್ನು ಪಾಲಿಸಲಾಯಿತು.ಈಗ ಎಲ್ಲಿಯೂ ಕಾಣುವುದಿಲ್ಲ. ಮಾಸ್ಕ್ ಅನ್ನುಬಹುತೇಕರು ಸರಿಯಾಗಿ ಬಳಸುತ್ತಿಲ್ಲ. – ಮಹೇಶ್ ಮಹದೇವಯ್ಯ, ಮುಖ್ಯಸ್ಥ, ಎಚ್‌ಆರ್-ಅಡ್ಮಿನಿಸ್ಟ್ರೇಟರ್, ಮಕಿನೊ ಪ್ರೈ.ಲಿ.
ಕೋವಿಡ್ ಮುಂಚೆ ನಿತ್ಯ ರಾಜಾಜಿನಗರ- ನಾಗ ಸಂದ್ರ ಮಧ್ಯೆ ಮೆಟ್ರೋದಲ್ಲೇ ಪ್ರಯಾಣಿಸುತ್ತಿದ್ದೆ.ಆದರೆ, 2-3ತಿಂಗಳಿಂದ ಸ್ವಂತ ವಾಹನ ದಲ್ಲೇಓಡಾಡುತ್ತಿ ದ್ದೇನೆ.ಪರ್ಯಾಯ ವ್ಯವಸ್ಥೆಗೆಹೊಂದಿಕೊಂಡಿದ್ದು, ಸಂಚಾರ ದಟ್ಟಣೆ ಕಡಿಮೆಯಿದ್ದು, ಮೆಟ್ರೋ ಅಗತ್ಯವಿಲ್ಲ. – ರವಿ ಜಾಧವ್, ಸಿವಿಲ್ ಎಂಜಿನಿಯರ್, ಬಸವೇಶ್ವರನಗರ ನಿವಾಸಿ.
ವಾರದಲ್ಲಿ ಒಂದೆರಡು ಬಾರಿ ನಾನು ಮೆಟ್ರೋದಲ್ಲಿ ಪ್ರಯಾಣಿಸುತ್ತಿದ್ದೆ. ಈಗ ಸ್ಮಾರ್ಟ್‌ಕಾರ್ಡ್ ಇದ್ದವರಿಗೆ ಮಾತ್ರ ಪ್ರವೇಶ ಇದೆ.ಅದರ ರಿಚಾರ್ಜ್ ಸರಳವಾಗಿಲ್ಲ. ಗೃಹಿಣಿಯರಿಗೆ,ಹಿರಿಯ ನಾಗರಿಕರಿಗೆಇದೆಲ್ಲ ಕಿರಿಕಿರಿ.ಕೊನೆಪಕ್ಷಕೌಂಟರ್‌ನಲ್ಲೇಹಣ ಕೊಟ್ಟು, ರಿಚಾರ್ಜ್‌ಗೆಅವಕಾಶಕೊಡಬೇಕು. –ನೇತ್ರಾ ಅನಿಲಕುಮಾರ್, ಬಾಪೂಜಿನಗರ ನಿವಾಸಿ
ಸೋಂಕು ವಿಪರೀತ ಆಗುತ್ತಿದೆ.ಈ ಮಧ್ಯೆ ಹವಾನಿಯಂತ್ರಿತ ವ್ಯವಸ್ಥೆ ಯಲ್ಲಿಪ್ರಯಾಣಿಸುವುದೇ ಬೇಡಅನಿಸುತ್ತಿದೆ. ಸದ್ಯಕ್ಕೆ ಬಸ್ ಅಥವಾ ಆಟೋ ಸೂಕ್ತ. – ಸುಮಾ, ಜೆ.ಪಿ. ನಗರ ನಿವಾಸಿ
ಆ್ಯಪ್‌ನಲ್ಲಿ ರಿಚಾರ್ಜ್ ಮಾಡಿಸಿದ್ದೆ. ಹಣ ಕಡಿತಗೊಂಡಿತ್ತು. ಆದರೆ, ನಿಲ್ದಾಣಕ್ಕೆ ಹೋದಾಗ ಗೇಟ್ ತೆರೆಯಲಿಲ್ಲ. ಸರ್ವರ್ ಡೌನ್ ಇರಬಹುದು, ಸ್ವಲ್ಪಕಾಯಿರಿ ಎಂದು ಅಲ್ಲಿನ ಸಿಬ್ಬಂದಿ ಹೇಳಿದರು. ಇಷ್ಟೊಂದು ಸಾಹಸ ಮಾಡಬೇಕಾ? – ರಾಘವೇಂದ್ರ ರಾಜ್ ಗೋದಿ, ಐಟಿ ಉದ್ಯೋಗಿ