Advertisement

ಮಲ್ಪೆ ಬಾಪುತೋಟ ಗೋಳಿದಡಿ ಚತುಃಪವಿತ್ರ ನಾಗಬ್ರಹ್ಮಮಂಡಲ ಸೇವೆ

12:32 PM Feb 19, 2018 | |

ಮಲ್ಪೆ: ಶ್ರದ್ಧೆ ಮತ್ತು ಭಕ್ತಿಯಿಂದ ನಾಗದೇವರ ಆರಾಧನೆ ಮಾಡಿದಾಗ ಮತ್ತು ನಮ್ಮ ಮೂಲ ಸ್ಥಾನದ ಅಭಿವೃದ್ಧಿಯಿಂದ ಆರೋಗ್ಯ, ಮಾನಸಿಕ ಶಾಂತಿ, ನೆಮ್ಮದಿ ಪ್ರಾಪ್ತಿ ಯಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನತೀರ್ಥ ಸ್ವಾಮೀಜಿ ಅವರು ನುಡಿದರು.

Advertisement

ರವಿವಾರ ಮಲ್ಪೆ ಬಾಪುತೋಟ ಗೋಳಿದಡಿ ಶ್ರೀ ನಾಗಬ್ರಹ್ಮಸ್ಥಾನದಲ್ಲಿ ಚತುಃಪವಿತ್ರ ನಾಗಬ್ರಹ್ಮ ಮಂಡಲ ಸೇವೆಯ ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿದರು.

ಪರಶುರಾಮ ಸೃಷ್ಟಿಯಲ್ಲಿ ಕೃಷಿಗೆ ಆದ್ಯತೆ ನೀಡಲಾಗಿದ್ದು, ಉಳುಮೆಯ ಜಾಗ ಎಂದೂ ನಾಗ ಬೀದಿ ಎನಿಸದು. ಆದರೆ ಈಗ ಕೃಷಿ ನಡೆಸದೆ ಹಡಿಲು ಬಿಟ್ಟು ಭೂಮಿ ಮತ್ತೆ ನಾಗಬೀದಿ ಎನಿಸು ತ್ತಿದೆ. ನಾಗಾರಾಧನೆ ಸಂಸ್ಕೃತಿಯ ಪ್ರತೀಕವಾಗಿದ್ದು, ಅದರಿಂದ ಸಮಾಜ ಮತ್ತು ಕುಟುಂಬದಲ್ಲಿ ಸಾಮರಸ್ಯ ಮೂಡುತ್ತದೆ ಎಂದರು.

ಧಾರ್ಮಿಕ ಪ್ರವಚನವನ್ನು ನೀಡಿದ ವಾಸ್ತುತಜ್ಞ ಗುಂಡಿಬೈಲು ಸುಬ್ರಹ್ಮಣ್ಯ ಭಟ್‌ ಮಾತನಾಡಿ, ನಾಗಬನಕ್ಕೆ ಜೀರ್ಣೋದ್ಧಾರ ಇಲ್ಲ. ಅದು ಜೀರ್ಣವಾಗುವುದೂ ಇಲ್ಲ. ನಾಗಬನವನ್ನು ಜೀರ್ಣೋದ್ಧಾರ ಮಾಡುವುದು ಸರಿಯಲ್ಲ, ಅದು ಹಾವು ಹರಿದಾಡುವ ಜಾಗವಾಗ ಬೇಕು. ಅವುಗಳಿಗೆ ರಕ್ಷಣೆ ಬೇಕು. ಮರಗಿಡಗಳನ್ನು ಬೆಳೆಸುವ ಮೂಲಕ ಈ ವ್ಯವಸ್ಥೆ ಆಗಬೇಕಾಗಿದೆ ಎಂದರು.

ಅಧ್ಯಕ್ಷತೆಯನ್ನು ಯಕ್ಷಗಾನ ಅಕಾಡೆಮಿ ಮಾಜಿ ಅಧ್ಯಕ್ಷ ಪ್ರೊ| ಎಂ.ಎಲ್‌. ಸಾಮಗ ವಹಿಸಿದ್ದರು.

Advertisement

ಮುಖ್ಯ ಅತಿಥಿಗಳಾಗಿ ಶಾಸಕ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಕೆ. ರಘುಪತಿ ಭಟ್‌, ಸುಬ್ರಹ್ಮಣ್ಯ ಉಪಾಧ್ಯ ಮಲ್ಪೆ, ಕೃಷ್ಣ ಉಪಾಧ್ಯ ಮಲ್ಪೆ, ಕಲ್ಮಾಡಿ ಸ್ಟೆಲ್ಲಾ ಮಾರೀಸ್‌ ಚರ್ಚ್‌ನ ಧರ್ಮಗುರು ಫಾ| ಅಲ್ಬನ್‌ ಡಿ’ಸೋಜಾ, ಪಡುಬಿದ್ರಿ ಖಡೆYàಶ್ವರಿ ಬ್ರಹ್ಮಸ್ಥಾನದ ಮೊಕ್ತೇಸರ ನಾರಾಯಣ ರಾವ್‌, ಬೆಂಗಳೂರು ಬಿಲ್ಲವ ಅಸೋಸಿಯೇಶನಿನ ಅಧ್ಯಕ್ಷ ವೇದ ಕುಮಾರ್‌, ನಗರಸಭಾ ಸದಸ್ಯ ನಾರಾಯಣ ಪಿ. ಕುಂದರ್‌, ಮೀನು ಮಾರಾಟ ಫೆಡರೇಶನ್‌ನ ಅಧ್ಯಕ್ಷ ಯಶ್‌ಪಾಲ್‌ ಸುವರ್ಣ, ಮಲ್ಪೆ ರಾಘವೇಂದ್ರ, ಅಂಬಲಪಾಡಿ ಬಿಲ್ಲವ ಸೇವಾ ಸಂಘದ ಅಧ್ಯಕ್ಷ ಗೋಪಾಲ ಸಿ. ಬಂಗೇರ, ಉದ್ಯಮಿ ನಾಗೇಶ್‌ ಉದ್ಯಾವರ, ಸಮಿತಿಯ ಅಧ್ಯಕ್ಷ ಎಚ್‌.ವಿ. ಜಗಜೀವನ್‌, ಗೌರವಾ ಧ್ಯಕ್ಷರಾದ ನಾರಾಯಣ ಮಲ್ಪೆ, ನಾರಾಯಣ ಬಂಗೇರ, ರಾಜಾರಾಂ ಪೂನಾ, ವಾಸುದೇವ ಜೆ. ಕುಂದರ್‌, ಜಗನ್ನಾಥ್‌ ಜಾರಿಗೆಬೈಲು, ಮುದ್ದು ಪೂಜಾರಿ ಕಪ್ಪೆಟ್ಟು ಉಪಸ್ಥಿತ ರಿದ್ದರು.
ಎಂ. ಮಹೇಶ್‌ ಕುಮಾರ್‌ ಸ್ವಾಗತಿಸಿದರು. ಗೋಪಾಲ ಪೂಜಾರಿ ಪ್ರಸ್ತಾವನೆಗೈದರು. ಸಂತೋಷ್‌ ಸಿ. ಪೂಜಾರಿ ನಿರೂಪಿಸಿ, ವಂದಿಸಿದರು.
 

Advertisement

Udayavani is now on Telegram. Click here to join our channel and stay updated with the latest news.

Next