Advertisement

Udupi: ಗೀತಾರ್ಥ ಚಿಂತನೆ-150: ತಣ್ತೀನಿಶ್ಚಯ ಬಳಿಕವೇ ಧ್ಯಾನ

12:44 AM Jan 09, 2025 | Team Udayavani |

ತಣ್ತೀ ನಿಶ್ಚಯವಾಗದ ಹೊರತು ಧ್ಯಾನಕ್ಕೆ ಏನೆಂದು ಕೂರುವುದು? ಆದ್ದರಿಂದ ತಣ್ತೀ ನಿಶ್ಚಯಪಡಿಸಿಯೇ ಮತ್ತೆ ಧ್ಯಾನಕ್ಕೆ ಕೂರಬೇಕು. ನಮ್ಮಲ್ಲಿ ಮೊದಲು ವೇದಾಂತ ಓದುವುದು ಅದಕ್ಕಾಗಿಯೇ. ಏಕೆಂದರೆ ಅದು ತಪ್ಪು, ಇದು ಸರಿ ಎಂದು ಚರ್ಚೆ ನಡೆದು ನಡೆದು ತಣ್ತೀ ನಿಶ್ಚಯ ಮಾಡಿಕೊಳ್ಳಬೇಕು. ಯಾವುದೇ ಪ್ರಶ್ನೆ ಕೇಳಿದರೂ ಗೊಂದಲವಿರಬಾರದು. ಅದರಲ್ಲಿ ದೃಢತೆ ಬೇಕು. ಆಮೇಲೆ ಧ್ಯಾನ ಮಾಡಬೇಕು. ಯಾವುದು ದೃಢವೋ ಅದನ್ನು ನಿಶ್ಚಯ ಮಾಡಬೇಕು. ಸ್ವತಃಪ್ರಾಮಾಣ್ಯದಿಂದ ಒಬ್ಬ ನಂಬಿಕಸ್ತ ಎಂದು ತೆಗೆದುಕೊಳ್ಳುವುದು, ಅನಂತರ ಕ್ರಮೇಣ ಪರೀಕ್ಷೆ ಮಾಡಿ ನೋಡಬೇಕು. ಮೊದಲು ಸ್ವತಃಪ್ರಾಮಾಣ್ಯದಿಂದ ಪ್ರವೃತ್ತಿ, ಆಮೇಲೆ ಪ್ರಮಾಣಗಳಿಂದ ಸಾಮಾನ್ಯ ದೃಢೀಕರಣ. ನಾಸ್ತಿಕ್ಯದಿಂದ ಪ್ರಮಾಣವೇ ಆಗುವುದಿಲ್ಲ.

Advertisement

ಪ್ರವೃತ್ತಿಯಾಗಲು ಸಾಧ್ಯವಿಲ್ಲ. ಯಾವ ಗ್ರಂಥಗಳಿಂದ ಧರ್ಮಾಭಿಮಾನಿಗಳನ್ನು ಸಿದ್ಧಮಾಡುತ್ತೀರೋ ಆ ಗ್ರಂಥಕೃರ್ತವಿಗೆ ಯಾರಾದರೂ ಅಜ್ಞಾನವಿದೆ ಎಂದು ಶಂಕೆ ಮಾಡಿದರೆ ಏನು ಮಾಡುವುದು? “ಇದೇ ಗ್ರಂಥವು ಪುಣ್ಯಪಾಪಗಳಿಂದ ದೃಢೀಕರಿಸಲ್ಪಟ್ಟಿದೆ. ಇದಕ್ಕೆ ನಾನೇ ಗ್ಯಾರೆಂಟಿ. ನನಗೆ ಅಜ್ಞಾನವಿಲ್ಲ’ ಎಂದು ಗ್ರಂಥಕತೃì ಹೇಳಬಹುದು. ಸ್ವವಾಕ್ಯದಿಂದ ಗ್ಯಾರೆಂಟಿ ಕೊಡಲು ಆಗುವುದಿಲ್ಲ. ಯುಕ್ತಿಯನ್ನು ಹೇಳಬೇಕು. ಪುಣ್ಯಪಾಪವನ್ನು ವೇದವ್ಯಾಸರ ಮಾತಿನಿಂದ ಹೇಳುವುದಲ್ಲ. ವೇದದಲ್ಲಿ ಹೇಳಿದ್ದನ್ನು ವೇದವ್ಯಾಸರು ಹೇಳಿದ್ದಷ್ಟೆ. ಅಂದರೆ ಮೂಲ ವೇದವೇ ಹೊರತು ವೇದವ್ಯಾಸರಲ್ಲ.

– ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು,
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ,  ಉಡುಪಿ

-ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ,  ಉಡುಪಿ ಸಂಪರ್ಕ ಸಂಖ್ಯೆ: 8055338811

 

Advertisement
Advertisement

Udayavani is now on Telegram. Click here to join our channel and stay updated with the latest news.

Next