ಬೆಂಗಳೂರು: ಸಾಹಿತ್ಯ ಲೋಕವಷ್ಟೇ ಅಲ್ಲ, ಸಿನಿರಂಗದಲ್ಲೂ ತಮ್ಮ ಛಾಪು ಮೂಡಿಸಿದ ಶ್ರೇಯಸ್ಸು ಪದ್ಮಶ್ರೀ ಪುರಸ್ಕೃತ ಡಾ.ದೊಡ್ಡರಂಗೇಗೌಡ ಅವರಿಗೆ ಸಲ್ಲುತ್ತದೆ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬೈರಮಂಗಲ ರಾಮೇಗೌಡ ಬಣ್ಣಿಸಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಕ್ಕಮಹಾದೇವಿ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಡಾ.ಜಿ.ಎಂ.ಮಂಜುನಾಥ್ ಅವರ “ನಡೆದಾಡೋ ಕಾಮನಬಿಲ್ಲೆ’ (ಡಾ.ದೊಡ್ಡರಂಗೇಗೌಡರ ಸಮಗ್ರ ಸಾಹಿತ್ಯ ಒಂದು ಅಧ್ಯಯನ) ಪುಸ್ತಕ ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಕಾವ್ಯ ನಿಷ್ಠೆಯ ನಡುವೆ ಗದ್ಯದಲ್ಲೂ ಕೃಷಿ ಮಾಡಿ ವಿಚಾರಪೂರ್ಣ ಲೇಖನಗಳನ್ನು ದೊಡ್ಡರಂಗೇಗೌಡ ಅವರು ಹೊರತಂದಿದ್ದಾರೆ. ಉತ್ತಮ ಸಂಕಲನಗಳನ್ನು ರಚಿಸುವ ಜತೆಗೆ ದೇಶ ವಿದೇಶಗಳನ್ನು ಸುತ್ತಿ ಅನುಭವಗಳನ್ನು ಪ್ರವಾಸ ಸಾಹಿತ್ಯವಾಗಿ ಪ್ರಕಟಿಸಿ¨ªಾರೆ. ಸುಮಾರು 70 ಪುಸ್ತಕಗಳನ್ನು ಹೊರತಂದಿದ್ದು, ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ಅಭಿಮಾನಿ ಬಳಗ ಸೃಷ್ಟಿಸಿಕೊಂಡಿದ್ದಾರೆ ಎಂದು ಶ್ಲಾ ಸಿದರು.
ದೊಡ್ಡರಂಗೇಗೌಡ ಅವರ ಜೀವನ ಸಾಹಿತ್ಯ ಸಾಧನೆಗಳ ವಿಭಿನ್ನ ಆಯಾಮಗಳನ್ನು ಗುರುತಿಸಿ ಸಮರ್ಪಕವಾಗಿ ವಿಶ್ಲೇಷಿಸುವಲ್ಲಿ ಕೃತಿಯ ಲೇಖಕ ಮಂಜುನಾಥ್ ಸಫಲರಾಗಿ¨ªಾರೆ. ಅವರ ಲೇಖನಗಳನ್ನು ವಿಶೇಷವಾಗಿ ಸಂಶೋಧಿಸುವ ಮೂಲಕ ಹಾಗೂ ಈವರೆಗೂ ಅವರಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸುವ ಕೃತಿಯಾಗಿ ಹೊರತಂದಿ¨ªಾರೆ ಎಂದು ಹೇಳಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ಕವಿ ದೊಡ್ಡರಂಗೇಗೌಡ, ನನ್ನ ಕಾವ್ಯದ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳದ ಈ ದಿನಗಳಲ್ಲಿ ಡಾ.ಶ್ರೀಕಂಠ ಕೂಡಿಗೆ ಅವರ ಮಾರ್ಗದರ್ಶನದಲ್ಲಿ ಲೇಖಕ ಮಂಜುನಾಥ್ ಆಳವಾಗಿ ಅಧ್ಯಯನ ನಡೆಸಿ, ಹಲವು ಮಹತ್ವದ ಅಂಶಗಳನ್ನು ಸಂಶೋಧಿಸಿ¨ªಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಹಿರಿಯ ಸಾಹಿತಿ ಡಾ.ಶ್ರೀಕಂಠ ಕೂಡಿಗೆ, ಬೆಂಗಳೂರು ನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಾಯಣ್ಣ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.