Advertisement

Delhi Pollution: ಕೃಷಿ ತ್ಯಾಜ್ಯ ಸುಟ್ಟರೆ ರೈತರಿಗೆ ಇನ್ನು ದುಪ್ಪಟ್ಟು ದಂಡ!

12:49 AM Nov 08, 2024 | Team Udayavani |

ಹೊಸದಿಲ್ಲಿ: ದಿಲ್ಲಿಯಲ್ಲಿ ದಿನದಿಂದ ದಿನಕ್ಕೆ ವಾಯು ಗುಣಮಟ್ಟ ಕಳಪೆಯಾಗುತ್ತಿರುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿರುವ ಕೇಂದ್ರ ಸರಕಾರ‌, ಕೃಷಿ ತ್ಯಾಜ್ಯಗಳನ್ನು (ಭತ್ತದ ಕೂಳೆ) ಸುಡುವ ರೈತರಿಗೆ ದುಪ್ಪಟ್ಟು ದಂಡ ವಿಧಿಸುವುದಾಗಿ ಘೋಷಿಸಿದೆ.

Advertisement

5 ಎಕ್ರೆಗಿಂತ ಹೆಚ್ಚಿನ ಭೂಮಿ ಹೊಂದಿರುವ ರೈತರು ಕೂಳೆ ಸುಟ್ಟರೆ 30,000 ರೂ. ದಂಡ ತೆರಬೇಕಾಗುತ್ತದೆ. 2 ಎಕ್ರೆಗಿಂತ ಕಡಿಮೆ ಭೂಮಿ ಹೊಂದಿರುವ ರೈತರು ಕೂಳೆ ಸುಟ್ಟರೆ,  2,500 ರೂ.ದಂಡ ವಿಧಿಸಲಾಗುತ್ತಿತ್ತು. ಅದನ್ನೀಗ 5 ಸಾವಿರ ರೂ.ಗೆ ಏರಿಸಲಾಗಿದೆ. 2- 5 ಎಕ್ರೆ ಭೂ ಮಾಲಕರಿಗೆ ಇದ್ದ 5,000 ರೂ. ದಂಡವನ್ನು 10,000 ರೂ.ಗೆ ಏರಿಸಲಾಗಿದೆ.

ಎನ್‌ಸಿಆರ್‌ನಲ್ಲಿ ವಾಯು ಗುಣಮಟ್ಟ ಕಳಪೆಯಾಗುವಲ್ಲಿ  ಶೇ.30 ರಷ್ಟು ಪಾಲು ಕೃಷಿತ್ಯಾಜ್ಯ ಸುಡುವಿಕೆಯಿಂದ ಆಗುತ್ತಿದೆ ಎಂದು ಸರಕಾರ‌ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next