Advertisement
ಮನೆ ಪರಿಸರದಲ್ಲೇ ಇರುವ, ವಿವಿಧ ರೀತಿಯಲ್ಲಿ ಆಹಾರವಾಗಿ ಬಳಸಬಹುದಾದ ಎಲೆಗಳು, ಕಾಟು ಸಸಿಗಳು, ಹುಲ್ಲು ಸೇರಿದಂತೆ ಹಲವು ಗಿಡಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಕಾರ್ಯಕ್ರಮವಿದು. ಮಧುಮೇಹ, ಶೀತ ಜ್ವರದ ಸಂದರ್ಭದಲ್ಲಿ ಮಾತ್ರೆ ನುಂಗುವ ಬದಲು ಅಮೃತ ಬಳ್ಳಿ, ನೆಲನೆಲ್ಲಿ ಯನ್ನು ಬಳಸಬಹುದು. ಎಲೆ ಅರಿವು ಕಾರ್ಯಕ್ರಮದಲ್ಲಿ ಇಂಥ ಹಿತ್ತಲ ಗಿಡಗಳನ್ನು ಪರಿಚಯಿಸಲಾಗುತ್ತದೆ.
ಮಂಗಳೂರಿನ ನಂತೂರು ಶ್ರೀಭಾರತೀ ಸಭಾಭವನದಲ್ಲಿ ನವೆಂಬರ್ 10ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 1 ಗಂಟೆಯ ವರೆಗೆ ಕಾರ್ಯಕ್ರಮ ನಡೆಯಲಿದೆ. ವೇದಮಾಯು ಆಯುರ್ವೇದ ಆಸ್ಪತ್ರೆಯ ವೈದ್ಯ ಡಾ| ಕೇಶವ್ ರಾಜ್, ಪಿಲಿಕುಳದ ಡಾ| ಉದಯ್ ಕುಮಾರ್ ಶೆಟ್ಟಿ, ಡಾ| ಮನೋಹರ್ ಉಪಾಧ್ಯಾಯ ಹಾಗೂ ಪಾರಂಪರಿಕ ಜ್ಞಾನ ಹೊಂದಿರುವ ಅಜ್ಜಿಯೊಬ್ಬರು ಸೇರಿ ಸಾರ್ವಜನಿಕರಿಗೆ ಮಾಹಿತಿ ನೀಡಲಿದ್ದಾರೆ. ಇಲ್ಲಿ ತಜ್ಞರು ಮಾಹಿತಿ ನೀಡುವ ಜತೆಗೆ ಸಂವಾದಕ್ಕೂ ಅವಕಾಶವಿದೆ. ಅಂತಿಮವಾಗಿ ವೈದ್ಯರು ಅವಲೋಕನ ಮಾಡಲಿದ್ದಾರೆ.
Related Articles
ನವೆಂಬರ್ ತಿಂಗಳಲ್ಲಿ ನಡೆಯುವ ಉಚಿತ ಕಾರ್ಯಕ್ರಮಕ್ಕೆ ಈಗಾಗಲೇ 30 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಮಂಗಳೂರು ನಗರ, ಬಂಟ್ವಾಳ, ಕಾಸರಗೋಡು, ಪುತ್ತೂರು ಭಾಗಗಳಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಸಕ್ತರು ಮುಂದಾಗಿದ್ದಾರೆ. 50ಕ್ಕಿಂತಲೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಲ್ಲಿ ಮುಂದಿನ ದಿನಗಳಲ್ಲಿ ಇತರ ಭಾಗಗಳಲ್ಲೂ ಇಂತಹ ಕಾರ್ಯಕ್ರಮಕ್ಕೆ ವೇದಿಕೆ ತಯಾರಿಸಲಾಗುವುದು.
-ರತ್ನಾಕರ್ ಕುಳಾಯಿ ಸಾವಯವ ಕೃಷಿಕ ಗ್ರಾಹಕ ಬಳಗದ ಕಾರ್ಯದರ್ಶಿ
Advertisement
ಅ. 16ರಂದು ಖಾದ್ಯ ಕಾರ್ಯಾಗಾರಮಂಗಳೂರಿನ ಶಕ್ತಿನಗರದಲ್ಲಿ ಸ್ವೋದ್ಯೋಗ ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿದೆ. ಹಾಲು ಕೆಸುವಿನ ಗೆಡ್ಡಯಿಂದ ಖಾದ್ಯ ತಯಾರಿಯ ಬಗ್ಗೆ ಮಾಹಿತಿ ನೀಡಲಾಗುತ್ತದೆ. ಜೋನ್ಸನ್ ನೆಲ್ಯಾಡಿ ಮತ್ತು ತಂಡ ಈ ಕಾರ್ಯಕ್ರಮ ನಡೆಸಿಕೊಡಲಿದೆ.