Advertisement
ಜಿಕೆವಿಕೆಯ ಕೃಷಿ ಎಂಜಿನಿಯರಿಂಗ್ ಮಹಾವಿದ್ಯಾಲಯದಿಂದ ಈ ಸಂಶೋಧನೆಯು ನಡೆದಿದೆ. ನೈಸರ್ಗಿಕ ಜೇನುಗೂಡು ಕಟ್ಟಲು ಜೇನು ಹುಳುವಿಗೆ 8 ರಿಂದ 9 ಲೀಟರ್ ಮೇಣದ ಅವಶ್ಯಕತೆಯಿ ರುತ್ತದೆ. ಇದನ್ನು ಎರಡರಿಂದ ಮೂರು ಬಾರಿ ಮಾತ್ರ ಮರುಬಳ ಸಬಹುದು. ಈ ಗೂಡು ಸಿಹಿ ಇರುವುದರಿಂದ “ಮಿಲಿಮೌತ್’ ಎನ್ನುವ ಹುಳುಗಳು ಗೂಡಿನಲ್ಲಿ ಸೇರಿಕೊಂಡು ಗೂಡನ್ನು ಹಾಳು ಮಾಡುತ್ತವೆ. ಈ ಸಮಸ್ಯೆಗೆ ಉತ್ತರವಾಗಿ ಎಫ್.ಡಿ.ಎಯಿಂದ ಮಾನ್ಯತೆ ಪಡೆದ 3ಡಿ ಮುದ್ರಿತ ಮಾದರಿಯ ಅಕ್ರಿಲೋಟ್ರೈಲ್ ಬ್ಯುಟಾಡೀನ್ ಸ್ವೈರೀನ್ (ಎಬಿಎಸ್)ನಿಂದ ಕೃತಕ ಜೇನುಗೂ ಡುನ್ನು ತಯಾರಿಸಲಾಗಿದೆ. ಇದನ್ನು ರೈಸ್ 3ಡಿ ಪ್ರಿಂಟರ್ಸ್ ಪ್ಲಸ್ ಮಾದರಿಯ 3ಡಿ ಪ್ರಿಂಟರ್ ಬಳಸಿ ಮುದ್ರಿಸಲಾಗಿದ್ದು, ಹನಿಕೊಂಬ್ ಸ್ಟ್ರಕ್ಚರ್ ಮಾದರಿಯಲ್ಲಿದೆ. ದೀರ್ಘ ಬಾಳಿಕೆ ಹಾಗೂ ಅಧಿಕ ಜೇನು ಉತ್ಪಾದನೆಗೆ ಇದು ಸಹಾಯಕ ಎನ್ನುತ್ತಾರೆ ಸಂಶೋಧಕರು.
Related Articles
Advertisement
ಸುಧಾರಿತ ತಂತ್ರಜ್ಞಾನ: ಈ ಹಿಂದೆ ಇದ್ದ “ಫೌಂಡೇಶನ್ ಶೀಟ್ ‘ತಂತ್ರಜ್ಞಾನದಲ್ಲಿಯೂ ಗೂಡು ಕಟ್ಟಿ ಕೊಳ್ಳಲು 2 ದಿನದ ಅವಶ್ಯಕತೆ ಇದ್ದು, ಈ ತಂತ್ರಜ್ಞಾನದಿಂದ ಆ ಸಮಯವನ್ನು ಉಳಿತಾಯ ಮಾಡಬಹುದು. ರೈತರಿಗೂ ಇದು ಸುಲಭವಾಗಿದ್ದು, ಮರುಬಳಕೆಗೆ ಒಗ್ಗಿಕೊಂಡಿದೆ.
3ಡಿ ಮುದ್ರಿತ ಕೃತಕ ಜೇನುಗೂಡು ಎಲ್ಲಿ ಲಭ್ಯ?
ವಿಶ್ವವಿದ್ಯಾಲಯದಲ್ಲಿ 3ಡಿ ಮುದ್ರಿತ ಕೃತಕ ಜೇನುಗೂಡು ಲಭ್ಯವಿದೆ. ಪ್ರಸ್ತುತ ಮಾರುಕಟ್ಟೆಯಲ್ಲಿ 500 ರೂ. ನಿಂದ 2500 ರೂವರೆಗಿನ ಗೂಡುಗಳು ದೊರೆಯುತ್ತಿದ್ದು, ಬೆಲೆಗೆ ತಕ್ಕಂತೆ ಗೂಡಿನ ಬಾಳಿಕೆ ನಿರ್ಧಾರವಾಗುತ್ತದೆ. ಆಸಕ್ತರು ಮೊ. 9449627325 ಗೆ ಸಂಪರ್ಕಿಸಬಹುದು ಎಂದು ವಿವಿ ತಿಳಿಸಿದೆ.
ಈ ಕೃತಕ ಗೂಡುಗಳು ಜೇನು ಹುಳುಗಳನ್ನು ಆಲಸಿ ಮಾಡದೆ, ಗೂಡು ತಯಾರಿಕೆಯ ಸಮಯವನ್ನು ಉಳಿಸಿ. ಹೆಚ್ಚು ಉತ್ಪಾದನೆಗೆ ಸಹಾಯಕವಾಗಿದೆ. ಈ ಸಂಶೋಧನೆಯ ಪೇಟೆಂಟ್ಗೆ ಕೆಲ ಹಂತಗಳು ಮಾತ್ರ ಬಾಕಿ ಇರುವುದು ಸಂತಸದ ವಿಚಾರ. ●ಡಾ.ಸಿ.ಟಿ.ರಾಮಚಂದ್ರ, ಎಂಜಿನಿಯರಿಂಗ್ ವಿವಿಯ ಪ್ರಾಧ್ಯಾಪಕ.
ಜೇನು ಕೃಷಿಯಲ್ಲಿ ಈ ಮಾದರಿಯನ್ನು ಈಗಾಗಲೇ ಅಳವಡಿಸಿಕೊಂಡಿದ್ದೇನೆ. ಇನ್ನು ಹೆಚ್ಚಿನ ಕೃತಕ ಗೂಡುಗಳನ್ನು ಅಳವಡಿಸಬೇಕೆಂದಿದ್ದೇನೆ. ●ಕಿರಣ್, ಜೇನು ಕೃಷಿಕ
-ಸುಚೇತಾ ಹೆಗಡೆ