Advertisement

ಮೈಸೂರು ಪೇಟ, ಬಿಳಿ ಅಂಗಿ, ಪಂಚೆ ಶಲ್ಯ ಧರಿಸುವ ಸಿಬ್ಬಂದಿ

09:22 PM Apr 17, 2019 | Lakshmi GovindaRaju |

ಹುಣಸೂರು: ಮತದಾರರನ್ನು ಮತಗಟ್ಟೆಗೆ ಸೆಳೆಯಲು ತಾಲೂಕಿನ ಎರಡು ಹಾಡಿಗಳಲ್ಲಿ ಪಾರಂಪರಿಕ ಮತಗಟ್ಟೆ, ಮನುಗನಹಳ್ಳಿ ಹಾಗೂ ನಗರದ ಮಹಿಳಾ ಪದವಿ ಕಾಲೇಜಿನ ಮತಕೇಂದ್ರಗಳನ್ನು ಸಖಿ(ನೀಲಿ) ಮತ್ತು ಬಿಳಿಕೆರೆ ಮತಕೇಂದ್ರವನ್ನು ವಿಕಲಚೇತನರ ಮತಗಟ್ಟೆಗಳನ್ನು ಮಾದರಿ ಮತಗಟ್ಟೆಗಳನ್ನಾಗಿ ಅಲಂಕರಿಸಿದ್ದು, ಕಣ್ಮನ ಸೆಳೆಯುತ್ತಿವೆ. ಈ ವಿಶೇಷ ಮತಗಟ್ಟೆಯಲ್ಲಿ ಚುನಾವಣಾ ಸಿಬ್ಬಂದಿ ಮೈಸೂರು ಪೇಟ ತೊಟ್ಟು, ಬಿಳಿ ಅಂಗಿ, ಪಂಚೆ-ಶಲ್ಯ ತೊಡುವರು.

Advertisement

ಮತದಾರರು ಸಂಭ್ರಮದಿಂದ ಮತ ಚಲಾಯಿಸುವಂತೆ ಪ್ರೇರೇಪಿಸುವಂತೆ ಈ ವಿಶಿಷ್ಟ ಮತಗಟ್ಟೆಗಳನ್ನು ಸಜ್ಜುಗೊಳಿಸಲಾಗಿದೆ. ಆದಿವಾಸಿಗಳು ಕೊಡಗಿಗೆ ತೆರಳುವುದರಿಂದ ಅವರನ್ನು ಮತಗಟ್ಟೆಗತ್ತ ಆಕರ್ಷಿಸಲು ನಾಗಪುರ ಆಶ್ರಮ ಶಾಲೆ ಹಾಗೂ ಶೆಟ್ಟಹಳ್ಳಿ ಹಾಡಿಯ ಆವರಣದಲ್ಲಿ ಆದಿವಾಸಿಗಳ ಪಾರಂಪಾರಿಕ ಗುಡಿಸಲು ತೆರೆಯಲಾಗಿದ್ದು, ಬಿದಿರಿನಿಂದ ತಯಾರಿಸಿದ ಸ್ವಾಗತ ಕೇಂದ್ರ ನಿರ್ಮಿಸಲಾಗಿದೆ.

ಸ್ಥಳೀಯ ಮಹಿಳಾ ಸಿಬ್ಬಂದಿ ಆದಿವಾಸಿಗಳ ಪೋಷಾಕಿನೊಂದಿಗೆ ಕರ್ತವ್ಯ ನಿರ್ವಹಿಸಲಿದ್ದಾರೆ. ಆದಿವಾಸಿಗಳ ಸಂಸ್ಕೃತಿಯನ್ನು ಅನಾವರಣಗೊಳಿಸುವ ಭಿತ್ತಿಚಿತ್ರಗಳನ್ನು ಅಲ್ಲಲ್ಲಿ ಅಳವಡಿಸಿದ್ದಾರೆ. ಮತದಾರರು ಖಷಿಯಿಂದ ಬಂದು ಮತದಾನ ಮಾಡುವಂತೆ ಆಕರ್ಷಿಸಲು ಎಲ್ಲಾ ವ್ಯವಸ್ಥೆ ಕಲ್ಪಿಸಲಾಗಿದೆ. ಚುನಾವಣಾ ಸಿಬ್ಬಂದಿ ಮೈಸೂರು ಪೇಟ ತೊಟ್ಟು, ಬಿಳಿ ಅಂಗಿ, ಪಂಚೆ-ಶಲ್ಯ ತೊಡುವರು.

ನೀಲಿ-ಸಖಿ ಮತಗಟ್ಟೆ: ನಗರದ ಮಹಿಳಾ ಕಾಲೇಜು ಹಾಗೂ ಬಿಳಿಕೆರೆ ಹೋಬಳಿಯ ಮನುಗನಹಳ್ಳಿ ಮತಕೇಂದ್ರಗಳು ಸಖಿ ಮತಕೇಂದ್ರಗಳಾಗಿದ್ದು, ನೀಲಿ ಬಣ್ಣದಲ್ಲಿ ಮಿಂಚುವಂತೆ ನಿರ್ಮಿಸಲಾಗಿದೆ. ಇಲ್ಲಿ ಸಂಪೂರ್ಣ ಮಹಿಳೆಯರೇ ನೀಲಿ ಸೀರೆ ತೊಟ್ಟು ಚುನಾವಣಾ ಕರ್ತವ್ಯ ನಿರ್ವಹಿಸಲಿದ್ದು, ಇಡೀ ಮತ ಕೇಂದ್ರದ ಹೊರ ಮತ್ತು ಒಳ ಆವರಣ ಹಾಗೂ ಮುಖ್ಯದ್ವಾರವನ್ನು ನೀಲಿ ಬಣ್ಣದಿಂದಲೇ ಕಂಗೊಳಿಸುವಂತೆ ಮಾಡಲಾಗಿದೆ.

ವಿಕಲಾಂಗರ ಮತಗಟ್ಟೆ: ಇದೇ ಪ್ರಥಮ ಬಾರಿಗೆ ತಾಲೂಕಿನ ಬಿಳಿಕೆರೆಯ ಮತಗಟ್ಟೆ ವ್ಯಾಪ್ತಿಯಲ್ಲಿ ಹೆಚ್ಚು ಮಂದಿ ವಿಕಲಚೇತನರಿರುವ ಈ ಮತಗಟ್ಟೆಯನ್ನು ವಿಶಿಷ್ಟವಾಗಿ ನಿರ್ಮಿಸಲಾಗಿದ್ದು, ಇಡೀ ಕಟ್ಟಡವನ್ನು ಬಣ್ಣಗಳಿಂದ ಕಂಗೊಳಿಸುವಂತೆ ಮಾಡಲಾಗಿದೆ. ವಿಕಲಚೇತನರು ಸರಾಗವಾಗಿ ಮತಚಲಾಯಿಸಲು ಅಗತ್ಯವಾದ ವೀಲ್‌ಚೇರ್‌ ಸೇರಿದಂತೆ ಉಪಕರಣಗಳನ್ನು ಸಹ ಒದಗಿಸಲಾಗಿದೆ.

Advertisement

ಜಿಲ್ಲಾ ಚುನಾವಣಾಧಿಕಾರಿ, ಜಿಪಂ ಸಿಇಒ ಮಾರ್ಗದರ್ಶನದಲ್ಲಿ ಈ ಮಾದರಿ ಮತಗಟ್ಟೆಗಳನ್ನು ಗ್ರಾಪಂಗಳ ಸ್ವೀಪ್‌ ಸಮಿತಿ ಅಧ್ಯಕ್ಷರಾದ ಪಿಡಿಒ ಹಾಗೂ ಸಿಬ್ಬಂದಿ ನಿರ್ಮಿಸಿದ್ದಾರೆ. ಈ ವಿಶಿಷ್ಟ ಮತಗಟ್ಟೆಗಳಲ್ಲಿ ಮತದಾರರಿಗೆ ತಂಪು ಪಾನೀಯ, ಮಜ್ಜಿಗೆ, ಕಾಳುಮೆಣಸು ಹಾಕಿರುವ ಬೇಲದಹಣ್ಣಿನ, ನಿಂಬೆಹಣ್ಣಿನ ಪಾನಕ ಹಾಗೂ ಸಖಿ ಮತಗಟ್ಟೆಗಳಲ್ಲಿ ಮಹಿಳೆಯರಿಗೆ ಉಗುರು ಬಣ್ಣ ಹಾಗೂ ಟೋಪಿಯನ್ನು ವಿತರಿಸಲಾಗುವುದು. ನಾಗಾಪುರ ಮತಕೇಂದ್ರಕ್ಕೆ ಆದಿವಾಸಿಗಳನ್ನು ಆಕರ್ಷಿಸುವ ಮತದಾನಕ್ಕಾಗಮಿಸುವ ಎಲ್ಲರಿಗೂ ಸಲುವಾಗಿ ವಿವಿಧ ಜಾತಿಯ ಸಸಿ ವಿತರಿಸಲಾಗುವುದು,
-ಮಹೇಶ್‌, ತಾಲೂಕು ಚುನಾವಣಾ ಅಧಿಕಾರಿ

* ಸಂಪತ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next