Advertisement

Maski ಅಕ್ರಮ‌ ಮರಂ ಸಾಗಾಣಿಕೆ: ಎರಡು ಟಿಪ್ಪರ್ ವಶಕ್ಕೆ

10:01 PM Jan 03, 2025 | Team Udayavani |

ಮಸ್ಕಿ: ಮರಂ ಮಣ್ಣನ್ನು ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದ ಸ್ಥಳಕ್ಕೆ ಕಂದಾಯ ಇಲಾಖೆ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಶುಕ್ರವಾರ ದಾಳಿ‌ ನಡೆಸಿ ಎರಡು ಟಿಪ್ಪರ್ ವಶಕ್ಕೆ ಪಡೆದುಕೊಂಡಿರುವ ಘಟನೆ ತಾಲೂಕಿನ ಮೆದಕಿನಾಳ ಗ್ರಾಮದ ಹೊರ ವಲಯದಲ್ಲಿ ನಡೆದಿದೆ.

Advertisement

ಗಣಿ ಭೂವಿಜ್ಞಾನ ಇಲಾಖೆಯ ಪರವಾನಿಗೆ ಇಲ್ಲದೇ ಸರಕಾರಕ್ಕೆ ರಾಯಲ್ಟಿ ಪಾವತಿಸದೇ ಇದುವರೆಗೂ ಲಕ್ಷಾಂತರ ಮೌಲ್ಯದ ಮರಂ ಮಣ್ಣಿನ್ನು ಅಕ್ರಮವಾಗಿ ವಿವಿಧ ಕಡೆ ಸಾಗಾಣಿಕೆ ಮಾಡುತ್ತಿದ್ದನ್ನು ಆರೋಪ ಕೇಳಿ ಬಂದಿತ್ತು, ಟಿಪ್ಪರ್ ಗಳಲ್ಲಿ ಮರಂ‌ ಮಣ್ಣನ್ನು ಅಕ್ರಮವಾಗಿ ಸಾಗಿಸುವ ಕುರಿತು‌ ಮಾಹಿತಿ ಹಿನ್ನೆಲೆಯಲ್ಲಿ ತಹಸೀಲ್ದಾರ್ ಮಲ್ಲಪ್ಪ‌ ಯರಗೋಳ ಹಾಗೂ ಭೂ ಮತ್ತು ಗಣಿ ಇಲಾಖೆಯ ಇಂಜಿನಿಯರ್ ಮಹೇಶ್ ಅವರು ದಾಳಿ ಮಾಡಿ ಮರಂ ತುಂಬಿರುವ ಟಿಪ್ಪರ್, ಖಾಲಿ ನಿಂತುಕೊಂಡಿರುವ ಇನ್ನೊಂದು ಟಿಪ್ಪರ್ ವಶಕ್ಕೆ ಪಡೆದುಕೊಂಡು ಮೇಲಾಧಿಕಾರಿಗಳ ಆದೇಶ ಮೇರೆಗೆ ಎರಡು ಟಿಪ್ಪರ್ ಮರಂ ಮಣ್ಣಿಗೆ59 ಸಾವಿರ ರೂ. ದಂಡ ಹಾಕಲಾಗಿದೆ ನಂತರ ಎಂದು ತಹಶೀಲ್ದಾರ ಮಲ್ಲಪ್ಪ‌ ಯರಗೋಳ ಅವರು ತಿಳಿಸಿದರು.‌

ಈ ಸಂದರ್ಭದಲ್ಲಿ ‌ಕಂದಾಯ ನಿರೀಕ್ಷಕ ಶರಣೆಗೌಡ, ಗ್ರಾಮಾಡಳಿತ ಅಧಿಕಾರಿ ರಾಘವೇಂದ್ರ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next