ಡೆಹ್ರಾಡೂನ್/ಗಾಂಧಿನಗರ: ಮೀಸಲಾತಿ ರಹಿತ ಜಾತಿಗಳಲ್ಲಿ ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ (ಇಬಿಸಿ) ಶಿಕ್ಷಣ ಮತ್ತು ಸರ್ಕಾರಿ ಉದ್ಯೋಗಗಳಲ್ಲಿ ಶೇ. 20ರಷ್ಟು ಮೀಸಲಾತಿ ಕಲ್ಪಿಸಬೇಕೆಂಬ ಖಾಸಗಿ ಮಸೂದೆಯನ್ನು ಗುಜರಾತ್‌ನ ಕಾಂಗ್ರೆಸ್ ಶಾಸಕ ಅಮಿತ್ ಚಾವ್ದಾ, ಅಲ್ಲಿನ ವಿಧಾನಸಭೆಯಲ್ಲಿ ಬುಧವಾರ ಮಂಡಿಸಿದ್ದಾರೆ. ಆದರೆ, ಆ ಮಸೂದೆ ತಿರಸ್ಕೃತಗೊಂಡಿದೆ. ಚರ್ಚೆಯ ವೇಳೆ, ಮೀಸಲು ಸೌಲಭ್ಯವಿಲ್ಲದ ಜಾತಿಗಳ ಯುವಕರಿಗೆ ಶಿಕ್ಷಣದಲ್ಲಿ, ಉದ್ಯೋಗದಲ್ಲಿ ಶೇ. 10ರಷ್ಟು ಮೀಸಲಾತಿಯನ್ನು ಪ್ರಧಾನಿ ಮೋದಿ ಜಾರಿಗೆ ತಂದಿದ್ದಾರೆ. ಅದು ಏನೇನೂ ಸಾಲದು. ಹೀಗಾಗಾಗಿ, ಶೇ. 20ರಷ್ಟು ಮೀಸಲಾತಿ ಬೇಕು ಎಂದು ಅಮಿತ್ ವಾದಿಸಿದ್ದರು. ಆರ್ಥಿಕವಾಗಿ ಮೇಲ್ವರ್ಗದವರಿಗೆ ಸರ್ಕಾರಿ ಉದ್ಯೋಗ, ಶಿಕ್ಷಣದಲ್ಲಿ ಶೇ.10 ಮೀಸಲು ನೀಡುವ ವಿಧೇಯಕವನ್ನು ಉತ್ತರಾಖಂಡ ವಿಧಾನಸಭೆಯಲ್ಲಿ ಗುರುವಾರ ಮಂಡಿಸಲಾಗಿದೆ.