Advertisement

ಮುಂಬಯಿ: ಸೋಂಕಿಗೆ 11 ಮಕ್ಕಳು ಸಾವು

12:37 AM May 07, 2021 | Team Udayavani |

ಮುಂಬಯಿ: ನಗರದಲ್ಲಿ ಕೋವಿಡ್ ಗೆ ಮಾರ್ಚ್‌-ಎಪ್ರಿಲ್‌ನಲ್ಲಿ 11  ಮಕ್ಕಳು ಸಾವನ್ನಪ್ಪಿದ್ದಾªರೆ. ಇದರ ಜತೆಗೆ ಕೋವಿಡ್ ದಿಂದಾಗಿ ಆಸ್ಪತ್ರೆಗೆ ದಾಖಲಾಗುತ್ತಿ ರುವವರ ಸಂಖ್ಯೆ ಒಂದೂವರೆ ಪಟ್ಟು ಹೆಚ್ಚಾಗಿದೆ.

Advertisement

ಮುಂಬಯಿಯ ಕೇಂದ್ರ ಭಾಗದಲ್ಲಿ ರುವ ಕೋವಿಡ್ಬಾಧಿತ ಬಾಣಂತಿ ಮತ್ತು ಮಕ್ಕಳ ಆರೈಕೆಯ ಕೇಂದ್ರವಾದ ಬಿವೈಎಲ್‌ ನಾಯರ್‌ ಆಸ್ಪತ್ರೆಯಲ್ಲಿ 43 ಹಸುಗೂಸುಗಳು ಕೊರೊನಾ ಸೋಂಕಿಗೆ ತುತ್ತಾಗಿ ದಾಖಲಾಗಿದ್ದವು. ಎ. 30ರ ವೇಳೆಗೆ, ಮೂರು ಕೂಸುಗಳು ಹಾಗೂ 11 ವರ್ಷದ ಬಾಲಕನೋರ್ವ ಮೃತಪಟ್ಟಿದ್ದಾರೆ.

ಇನ್ನು, ಪರೇಲ್‌ ಮಕ್ಕಳ ಆಸ್ಪತ್ರೆಯಲ್ಲಿ, ಮಾರ್ಚ್‌ -ಎಪ್ರಿಲ್‌ ನಡುವೆ, ಐದು ಮಕ್ಕಳು ಕೊರೊನಾದಿಂದಾಗಿ ಮೃತಪಟ್ಟಿವೆ. ಎಸ್‌ಆರ್‌ಸಿಸಿ ಮಕ್ಕಳ ಆಸ್ಪತ್ರೆಯಲ್ಲಿ, ಒಂದು ಮಗು ಸಾವನ್ನಪ್ಪಿದೆ. ಇನ್ನು, ಬೃಹನ್‌ಮುಂಬಯಿ ಮಹಾನಗರ ಪಾಲಿಕೆಯ ಅಧಿಕಾರಿಗಳು, ಕಳೆದ ವರ್ಷದಿಂದ ಇಲ್ಲಿಯ ವರೆಗೆ 10 ವರ್ಷದೊಳಗಿನ 11,080 ಮಕ್ಕಳಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಅವರಲ್ಲಿ 17 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next