Advertisement

ಗೋವಾದ ಮಾಜಿ ರಾಜ್ಯಪಾಲೆ ಮೃದುಲಾ ಸಿನ್ಹಾ ನಿಧನ : ಪ್ರಧಾನಿ ಸೇರಿ ಗಣ್ಯರಿಂದ ಸಂತಾಪ

06:54 PM Nov 18, 2020 | sudhir |

ಪಾಟ್ನಾ/ಪಣಜಿ: ಗೋವಾದ ಮಾಜಿ ರಾಜ್ಯಪಾಲೆ, ಬಿಜೆಪಿಯ ಹಿರಿಯ ನಾಯಕಿ ಮೃದುಲಾ ಸಿನ್ಹಾ (77) ಬುಧವಾರ ನಿಧನರಾಗಿದ್ದಾರೆ.

Advertisement

ಅವರು ಗೋವಾದ ಮೊದಲ ಮಹಿಳಾ ರಾಜ್ಯಪಾಲರಾಗಿದ್ದರು. ಹಿಂದಿ ಸಾಹಿತ್ಯ ಕ್ಷೇತ್ರದಲ್ಲಿಯೂ ಅವರು ಸಾಕಷ್ಟು ಹೆಸರು ಮಾಡಿದ್ದರು. ಕೇಂದ್ರ ಸಮಾಜ ಕಲ್ಯಾಣ ಮಂಡಳಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು ಮೃದುಲಾ.

ಬಿಹಾರದಲ್ಲಿ 1942 ನ.27ರಂದು ಜನಿಸಿದ್ದ ಅವರು ಜನಸಂಘದ ಕಾಲದಿಂದಲೂ ರಾಜಕೀಯ ಕ್ಷೇತ್ರದಲ್ಲಿದ್ದರು. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ, ಗೋವಾ ಮುಖ್ಯಮಂತ್ರಿ ಪ್ರಮೋದ್‌ ಸಾವಂತ್‌ ಸಿನ್ಹಾ ನಿಧನಕ್ಕೆ ಶೋಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ನ್ಯೂಜಿಲೆಂಡ್‌ ಪೊಲೀಸ್‌ಗೆ ಹಿಜಬ್‌ ಸಹಿತ ಹೊಸ ಸಮವಸ್ತ್ರ!

Advertisement

Udayavani is now on Telegram. Click here to join our channel and stay updated with the latest news.

Next