Advertisement
ಪೇಟೆಯಿಂದ ಏಕಮುಖವಾಗಿ ಆಳ್ವಾಸ್ ಆಸ್ಪತ್ರೆ ರಸ್ತೆಯಲ್ಲಿ ಸಾಗಿ ಬಂದರೆ ಎರಡೂ ಕಡೆ ಚರಂಡಿಯಲ್ಲಿ ಅಲ್ಲಲ್ಲಿ ರಾಜಸ್ಥಾನಿ ಮಾತ್ರವಲ್ಲ ಲೋಕಲ್ ಮಂದಿಯೂ ತಮ್ಮ ವ್ಯಾಪಾರದ ಸಾಮಗ್ರಿಗಳನ್ನು ಚರಂಡಿಯ ಮೇಲೆಯೇ ರಾಶಿ ಹಾಕಿ ಪಾದಚಾರಿಗಳನ್ನು ಭರ್ರನೆ ಓಡಾಡುವ ವಾಹನಗಳ ಅಪಾಯಕ್ಕೆ ಸಿಲುಕಿಸಿಟ್ಟಂತಿದೆ.
ವಿಜಯನಗರದಲ್ಲಿ ರಸ್ತೆ ಬದಿಯ ಚರಂಡಿ ಮೇಲೆಯೇ ವಾಹನ, ವ್ಯಾಪಾರದ ಸರಕು ಇರಿಸಲಾಗಿದೆ. ಮಸೀದಿ ರಸ್ತೆಯಲ್ಲಿ ಒಂದು ಬದಿಯಲ್ಲಿ ಚರಂಡಿಯೇ ಇಲ್ಲ, ಅಲ್ಲಿ ನಡೆದು ಕೊಂಡುಹೋಗಲು ತ್ರಾಸವೋ ತ್ರಾಸ ವಾಗುತ್ತಿದೆ.
Related Articles
Advertisement
ಬಸ್‌ನಿಲ್ದಾಣದ ನಿರ್ಗಮನ ಹಾದಿಯಲ್ಲಿ ಮಾರ್ಗದಿಂದಲೇ ಕಬ್ಬಿಣದ ಮೆಟ್ಟಲು ನಿರ್ಮಿಸಿ ಚರಂಡಿಯ ಮೇಲೆ ನಡೆದಾಡ ದಂತಾಗಿದೆ, ಮುಂದುವರಿದು ಎಡಕ್ಕೆ ತಿರುಗಿ ಮಸೀದಿ ರಸ್ತೆಗಿಳಿದರೆ ಅಲ್ಲೂ ಇದೇ ರೀತಿ ಮಹಡಿಗೆ ಮಾರ್ಗದಿಂದಲೇ ಕಬ್ಬಿಣದ ಮೆಟ್ಟಲು ವೆಲ್ಡ್ ಮಾಡಲಾಗಿದೆ.
ಚರಂಡಿ ಮೇಲೆಯೇ ಅಂಗಡಿ ಸಾಮಗ್ರಿ ಹಳೆ ಮಾರುಕಟ್ಟೆ ಇರುವಲ್ಲಿ ಉತ್ತರದ ಬದಿಯಲ್ಲಿ ವಾಹನಗಳು ಝಂಡಾ ಹೂಡಿ ನಡೆದುಕೊಂಡು ಹೋಗುವವರಿಗೆ ತೊಂದರೆಯಾಗುತ್ತಿದೆ. ಉಸಿರುಕಟ್ಟುವ ವಾತಾವರಣವಿಲ್ಲಿದೆ. ಇದರ ಎದುರುಬದಿಯಲ್ಲಿ ಚರಂಡಿ ಮೇಲೆಯೇ ಅಂಗಡಿ ಸಾಮಗ್ರಿ ರಾಶಿ ಬಿದ್ದಿದೆ. ಅತಿಕ್ರಮಣ ತೆರವಿಗೆ ಕ್ರಮ
ಚರಂಡಿ ಕಬಳಿಸಿ ವ್ಯವಹಾರ ನಡೆಸಲಾಗುತ್ತಿರುವುದನ್ನು ತೆರವು ಮಾಡಿಸಲು ಸೂಕ್ತ ಕ್ರಮ ಜರಗಿಸಲಾಗುವುದು. ಪಾದಚಾರಿಗಳು ಯಾವುದೇ ಅಡೆತಡೆ ಇಲ್ಲದೆ ನಡೆದುಕೊಂಡು ಹೋಗಲು ಅವಕಾಶ ಮಾಡಿಕೊಡಲಾಗುವುದು. ಚರಂಡಿಗಳ ಮೇಲಿನ ಅಕ್ರಮ ನಿರ್ಮಾಣಗಳ ಬಗ್ಗೆಯೂ ಕ್ರಮಜರಗಿಸಲಾಗುವುದು.
– ಪ್ರಸಾದ್ ಕುಮಾರ್, ಪುರಸಭೆ, ಅಧ್ಯಕ್ಷರು, ಮೂಡುಬಿದಿರೆ – ಧನಂಜಯ ಮೂಡುಬಿದಿರೆ