Advertisement

IRACON:ಸಂಧಿವಾತ ಸಮಸ್ಯೆ ಬಗ್ಗೆ ಸಾರ್ವಜನಿಕರು ಮುಂಜಾಗ್ರತೆ ವಹಿಸಬೇಕು: ಡಾ.ಶರಣಪ್ರಕಾಶ ಪಾಟೀಲ

11:13 AM Nov 23, 2024 | Team Udayavani |

ಬೆಂಗಳೂರು: ಸಂಧಿವಾತ ಕಾಯಿಲೆಗಳ ಆಧುನಿಕ ಚಿಕಿತ್ಸೆ ಹಾಗು ಮುಂಜಾಗ್ರತೆ ಕುರಿತು ಜ್ಞಾನ ಹಂಚಿಕೊಳ್ಳಲು ಈ ರೀತಿಯ ಸಮ್ಮೇಳನಗಳು ಮಹತ್ವದ ವೇದಿಕೆಯಾಗಿ ಕೆಲಸ ಮಾಡುತ್ತವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಶರಣ್ ಪ್ರಕಾಶ್ ಪಾಟೀಲ್ ತಿಳಿಸಿದರು.

Advertisement

IRACON 2024 ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಮಾವೇಶದಲ್ಲಿ ದೇಶದ ನಾನಾ ಭಾಗಗಳಿಂದ ನಾಲ್ಕು ಸಾವಿರಕ್ಕೂ ಹೆಚ್ಚು ವೈದ್ಯರು ಭಾಗವಹಿಸಿದ್ದರು. ಅವರು ಚಿಕಿತ್ಸೆಗೆ ಹೊಸ ತಾಂತ್ರಿಕತೆ, ಜೈವಿಕ ಔಷಧಿ ಮತ್ತು ರೋಗಿಯ ಕೇಂದ್ರಿತ ಚಿಕಿತ್ಸಾ ವಿಧಾನಗಳ ಕುರಿತು ಚರ್ಚೆ ನಡೆಸಿದರು.

ಕಾರ್ಯಕ್ರಮದಲ್ಲಿ IRACON ಮುಖ್ಯಸ್ಥರಾದ ಡಾ. ಚಂದ್ರಶೇಖರ್ ಮತ್ತು ಡಾ. ನಾಗರಾಜ್ ಉಪಸ್ಥಿತರಿದ್ದರು. ಅವರು ಸಮಾವೇಶದ ಉದ್ದೇಶ, ವೈಶಿಷ್ಟ್ಯಗಳು ಮತ್ತು ಪ್ರಾತ್ಯಾಕ್ಷತೆ ಕುರಿತು ಮಾತನಾಡಿ, ಆರೋಗ್ಯ ಕ್ಷೇತ್ರಕ್ಕೆ ಈ ಕಾರ್ಯಕ್ರಮದ ಕೊಡುಗೆಯನ್ನು ಉಲ್ಲೇಖಿಸಿದರು.

Advertisement

IRACON 2024 ಚಾಮರಾಜ ವಜ್ರ, ಪ್ಯಾಲೆಸ್ ಗ್ರೌಂಡ್ಸ್‌ನಲ್ಲಿ ನವೆಂಬರ್ 21-24ರ ವರೆಗೆ ನಡೆಯಲಿದ್ದು, ದೇಶಾದ್ಯಂತ ವೈದ್ಯಕೀಯ ತಜ್ಞರಿಗೆ ಪರಿಣತಿಯನ್ನು ವಿಸ್ತರಿಸಲು ಅನುಕೂಲವಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next