Advertisement

Urwa: ಫುಟ್‌ಪಾತ್‌ನಲ್ಲಿ ಬಾಯ್ದೆರೆದಿದೆ ಚೇಂಬರ್‌!

03:48 PM Oct 29, 2024 | Team Udayavani |

ಉರ್ವ: ಇಲ್ಲಿನ ಉರ್ವ ಮಾರು ಕಟ್ಟೆ ವೃತ್ತದಿಂದ ಲೇಡಿಹಿಲ್‌ ನಾರಾಯಣ ಗುರು ವೃತ್ತದ ಕಡೆಗೆ ಸಾಗುವ ರಸ್ತೆಯಲ್ಲಿ ಎಡಬದಿಯಲ್ಲಿ ಫುಟ್‌ಪಾತ್‌ ನಿರ್ಮಾಣದ ಉದ್ದೇಶಕ್ಕೆ ಕಾಂಕ್ರೀಟ್‌ ಚೇಂಬರ್‌ಗಳನ್ನು ರಚಿಸಲಾಗಿದೆ. ಉರ್ವ ಮಾರಿಗುಡಿ ಕಡೆಗೆ ತೆರಳುವ ದ್ವಾರದ ಬದಿಯಲ್ಲೇ ಈ ಫುಟ್‌ಪಾತ್‌ ಚೇಂಬರ್‌ಗಳಿವೆ.

Advertisement

ಪ್ರಸ್ತುತ ಫುಟ್‌ಪಾತ್‌ ಕಾಮಗಾರಿ ನಡೆಯು ತ್ತಿದ್ದು, ಇವುಗಳನ್ನು ಸೂಕ್ತ ರೀತಿಯಲ್ಲಿ ಮುಚ್ಚದಿರುವ ಕಾರಣ ಅಪಾಯಕ್ಕೆ ಆಹ್ವಾನ ನೀಡಿದಂತಿದೆ. ಯಾರಾದರೂ ನಡೆದುಕೊಂಡು ಹೋಗುವಾಗ ಈ ಬಾಯಿ ತೆರೆದ ಚೇಂಬರ್‌ಗಳು ಗಮನಕ್ಕೆ ಬಾರದೆ ಒಳಗೆ ಬಿದ್ದು ಅಪಾಯ ಉಂಟಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಕನಿಷ್ಟ ಮರದ ಹಲಗೆಗಳನ್ನು ಇರಿಸಿಯಾದರೂ ಚೇಂಬರನ್ನು ಮುಚ್ಚುವ ಅಗತ್ಯವಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಜತೆಗೆ ಫುಟ್‌ಪಾತ್‌ ಕಾಮಗಾರಿಯಲ್ಲಿ ಶೀಘ್ರವಾಗಿ ಪೂರ್ಣಗೊಳಿಸಿ ಪಾದಚಾರಿ ಗಳಿಗೆ ನಡೆದುಕೊಂಡು ಹೋಗಲು ಅವಕಾಶ ಕಲ್ಪಿಸಬೇಕು. ಪ್ರಸ್ತುತ ಪ್ರತಿದಿನ ಶಾಲಾ ಮಕ್ಕಳು, ಹಿರಿಯ ನಾಗರಿಕರು ಸಹಿತ ಪಾದಚಾರಿಗಳು ರಸ್ತೆಯಲ್ಲೇ ನಡೆದುಕೊಂಡು ಹೋಗಬೇಕಾದ ಪರಿಸ್ಥಿತಿ ಇದೆ. ನಿರಂತರ ವಾಹನ ಸಂಚಾರ ಇರುವುದರಿಂದ ಇದು ಅಪಾಯಕಾರಿಯಾಗಿ ಪರಿಣಮಿಸಿದೆ. ಆದ್ದ ರಿಂದ ಸಂಬಂಧಪಟ್ಟವರು ಈ ವಿಚಾರಗಳನ್ನು ಗಮನದಲ್ಲಿರಿಸಿ ಕಾಮಗಾರಿ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next