ಹೈದರಾಬಾದ್: ಇತ್ತೀಚೆಗಷ್ಟೇ ಮುಗಿದ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮೊಹಮ್ಮದ್ ಸಿರಾಜ್ ಅವರು ಭಾರತಕ್ಕೆ ಮರಳಿದ್ದಾರೆ. ಸರಣಿ ಕ್ಲೀನ್ ಸ್ವೀಪ್ ಖುಷಿಯೊಂದಿಗೆ ಮರಳಿದ್ದ ಸಿರಾಜ್, ಭಾರತ ತಲುಪುತ್ತಿದ್ದಂತೆ ನಿರಾಸೆಗೊಂಡಿದ್ದಾರೆ. ಕಾರಣ ಸಿರಾಜ್ ಬ್ಯಾಗ್ ನಾಪತ್ತೆಯಾಗಿದೆ.
ಹೈದರಾಬಾದ್ ನ 28 ವರ್ಷದ ವೇಗಿ ಸಿರಾಜ್ ಸೋಮವಾರ (ಡಿಸೆಂಬರ್ 26) ಢಾಕಾದಿಂದ ಮುಂಬೈ ಮೂಲಕ ದೆಹಲಿಗೆ ವಿಮಾನದಲ್ಲಿ ತೆರಳಿದ್ದರು. ಅವರು ಮೂರು ಬ್ಯಾಗ್ ಗಳನ್ನು ಹೊಂದಿದ್ದರು ಆದರೆ ಕೊನೆಗೆ ನೋಡುವಾಗ ಒಂದು ಬ್ಯಾಗ್ ಮಿಸ್ ಪ್ಲೇಸ್ ಆಗಿದೆ.
ಸುಮಾರು ನಾಲ್ಕು ಗಂಟೆಗಳ ನಂತರವೂ ಕಾಣೆಯಾದ ಬ್ಯಾಗ್ ಪತ್ತೆಯಾಗದಿದ್ದಾಗ ಸಿರಾಜ್ ಅವರು ಮಂಗಳವಾರ ತಡರಾತ್ರಿ ವಿಮಾನಯಾನ ಸಂಸ್ಥೆಗೆ ಈ ಬಗ್ಗೆ ಮನವಿ ಮಾಡಿದ್ದಾರೆ.
“ನಾನು 26 ರಂದು ಢಾಕಾದಿಂದ ದೆಹಲಿ ಮೂಲಕ ಮುಂಬೈಗೆ ಕ್ರಮವಾಗಿ ಯುಕೆ 182 ಮತ್ತು ಯುಕೆ 951 ವಿಮಾನದಲ್ಲಿ ಪ್ರಯಾಣಿಸುತ್ತಿದ್ದೆ. ನಾನು ಮೂರು ಬ್ಯಾಗ್ ಗಳಲ್ಲಿ ಚೆಕ್ ಇನ್ ಮಾಡಿದ್ದೇನೆ. ಅದರಲ್ಲಿ ಒಂದು ಕಳೆದುಹೋಗಿದೆ. ಸ್ವಲ್ಪ ಸಮಯದೊಳಗೆ ಬ್ಯಾಗ್ ಪತ್ತೆಯಾಗುತ್ತದೆ ಮತ್ತು ತಲುಪಿಸಲಾಗುವುದು ಎಂದು ನನಗೆ ಭರವಸೆ ನೀಡಲಾಯಿತು ಆದರೆ ಇಲ್ಲಿಯವರೆಗೆ ಸಿಕ್ಕಿಲ್ಲ ”ಎಂದು ಸಿರಾಜ್ ಟ್ವೀಟ್ ಮಾಡಿದ್ದಾರೆ.
Related Articles
ಇದಕ್ಕೆ ಉತ್ತರಿಸಿದ ವಿಸ್ತಾರ ಏರ್‌ಲೈನ್ಸ್, “ಹಲೋ ಸಿರಾಜ್, ಇದು ದುರದೃಷ್ಟಕರ ಎಂದು ತೋರುತ್ತದೆ. ನಿಮ್ಮ ಸಾಮಾನು ಸರಂಜಾಮುಗಳನ್ನು ಪತ್ತೆಹಚ್ಚಲು ನಮ್ಮ ಸಿಬ್ಬಂದಿ ಪ್ರಯತ್ನಿಸುತ್ತಾರೆ” ಎಂದು ಟ್ವೀಟ್ ಮಾಡಿದೆ.