Advertisement

ಪಣಜಿ ರಾಜ್ಯದಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ಬಸ್‍ ಆರಂಭ; ಬಸ್ ನಿಲ್ದಾಣ ಆಧುನೀಕರಣಕಕ್ಕೆ ಚಿಂತನೆ

11:48 AM Feb 25, 2023 | Team Udayavani |

ಪಣಜಿ: ಮುಂಬರುವ ಅವಧಿಯಲ್ಲಿ ಗೋವಾದಲ್ಲಿ ಸಾರಿಗೆ ಸೌಲಭ್ಯಗಳ ವಿವಿಧ ಯೋಜನೆಗಳ ಕುರಿತು ಗೋವಾ ಸಾರಿಗೆ ಸಚಿವ ಮಾವಿನ್ ಗುದಿನ್ಹೊ ಮಾಹಿತಿ ನೀಡಿ, ಇದರಿಂದ ಪ್ರವಾಸಿಗರಿಗೆ ಹಾಗೂ ನಾಗರಿಕರಿಗೆ ಅನುಕೂಲವಾಗಿದೆ ಎಂದರು.

Advertisement

ಪಣಜಿಯಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಇದು ವಿಮಾನ ನಿಲ್ದಾಣಗಳಿಂದ ಬಸ್ ನಿಲ್ದಾಣಗಳವರೆಗಿನ ಯೋಜನೆಗಳನ್ನು ಒಳಗೊಂಡಿದೆ ಎಂದರು. ವಾಹನ ಮಾಲೀಕರ ಅನುಕೂಲಕ್ಕಾಗಿ ಗೋವಾ ವಿಮಾನ ನಿಲ್ದಾಣಗಳಲ್ಲಿ ಬಹು ಮಹಡಿ ಪಾರ್ಕಿಂಗ್‌ ಅಗತ್ಯ ಎಂದು ಹೇಳಿದರು.

ಬಹು ಮಹಡಿ ಪಾರ್ಕಿಂಗ್‌ ಹೆಚ್ಚಿನ ವಾಹನಗಳಿಗೆ ನಿಲುಗಡೆಗೆ ಅವಕಾಶ ಕಲ್ಪಿಸುತ್ತದೆ. ನಾವು ಮೇಲ್ಸೇತುವೆ ನಿರ್ಮಿಸುತ್ತಿದ್ದೇವೆ. ಗೋವಾ ವಿಮಾನ ನಿಲ್ದಾಣದ ಗ್ರೇಡ್ ಸೆಪರೇಟರ್‌ ನಿಂದ ವೆರ್ನಾ ಜಂಕ್ಷನ್‍ವರೆಗೆ ಫ್ಲೈ ಓವರ್ ಇರಲಿದ್ದು, ಅಂದಾಜು 650 ಕೋಟಿ ರೂ. ವೆಚ್ಛದಲ್ಲಿ ಈ ಯೋಜನೆ ರೂಪಿಸಲಾಗಿದೆ ಎಂದರು.

ಸೋಮವಾರ ಈ ಕುರಿತು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿ ಮಾಡಲಿದ್ದೇನೆ. ಇದಲ್ಲದೆ ಗೋವಾ ರಾಜ್ಯದಲ್ಲಿ ಹೆಚ್ಚಿನ ಎಲೆಕ್ಟ್ರಿಕ್ ಬಸ್‍ಗಳನ್ನು ಪ್ರಾರಂಭಿಸಲಾಗುವುದು ಎಂದ ಅವರು ಎಲ್ಲಾ ಬಸ್ ನಿಲ್ದಾಣಗಳನ್ನು ಕೂಡ ಆಧುನೀಕರಣಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next