ಉಡುಪಿ: ಹಳೆ ತಾಲೂಕು ಕಚೇರಿ ಬಳಿ ಇರುವ ಸರ್ಕಲ್‌ಗೆ ವೀರ ಸಾರ್ವರ್ಕರ್ ವೃತ್ತ ನಾಮಕರಣ ಮಾಡುವ ಬಗ್ಗೆ ನಗರಸಭೆ ಅಧಿವೇಶನದಲ್ಲಿ ಠರಾವೂ ಮಂಡಿಸಲಾಗುವುದು ಎಂದು ಶಾಸಕ ಕೆ.ರಘುಪತಿ ಭಟ್ ಹೇಳಿದರು.
ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಾರ್ವರ್ಕರ್‌ಪ್ರತಿಮೆ ಮಾಡುವುದು ಸಮಂಜಸವಲ್ಲ. ಇದರಿಂದ ಬೇರೆ ರೀತಿ ಸಮಸ್ಯೆಗಳು ಸೃಷ್ಟಿಯಾಗಬಹುದು. ಸಾರ್ವರ್ಕರ್ ಸರ್ಕಲ್‌ನಂತೆ ಡಾ ಬಿ.ಆರ್.ಅಂಬೇಡ್ಕರ್ ವೃತ್ತ ಸಹಿತ ಹಲವಾರು ಮಹಾನಿಯರ ಹೆಸರುಗಳನ್ನು ವೃತ್ತಗಳಿಗೆ ಇಡುವ ಬಗ್ಗೆ ಚಿಂತನೆ ಇದೆ ಎಂದರು.
ಇದನ್ನೂ ಓದಿ: ಕೊಹ್ಲಿ,ರಾಹುಲ್,ರೋಹಿತ್ ಅಲ್ಲ: ಈ ಭಾರತೀಯ ಆಟಗಾರ ಪಾಕ್‌ಗೆ ಅಪಾಯಕಾರಿ: ವಾಸಿಂ ಅಕ್ರಂ
ಹಿಜಾಬ್ ಹೋರಾಟ ಆರಂಭಿಸಿದ್ದೇ ಸಿಎಫ್‌ಐ:
ಜಿಲ್ಲೆಯಲ್ಲಿ ಹಿಜಾಬ್ ಹೋರಾಟ ಆರಂಭಿಸಿದ್ದೇ ಸಿಎಫ್‌ಐ. 20 ವರ್ಷಗಳಿಂದಲೂ ಬಾಲಕಿಯರ ಸರಕಾರಿ ಮಹಿಳಾ ಕಾಲೇಜಿನಲ್ಲಿ ಸಮವಸ್ತ್ರ ನೀತಿಯನ್ನು ಅಚ್ಚುಕಟ್ಟಾಗಿ ಪಾಲಿಸಲಾಗುತ್ತಿತ್ತು. ಇದರಿಂದ ನಮಗೂ ಕೋರ್ಟ್‌ನಲ್ಲಿ ಜಯಸಿಕ್ಕಿಿದೆ. ಈ ವರ್ಷವೂ ಹಲವಾರು ಮಂದಿ ಮುಸ್ಲಿಂ ವಿದ್ಯಾಾರ್ಥಿನಿಯರು ಕಾಲೇಜು ಸೇರಲು ಉತ್ಸುಕರಾಗಿದ್ದಾಾರೆ. ಸಮವಸ್ತ್ರ ಧರಿಸಿ ಕಾಲೇಜಿಗೆ ಬರುತ್ತಿದ್ದ ವಿದ್ಯಾಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಿದ್ದರೆ ಅದಕ್ಕೆ ಸಿಎಫ್‌ಐ ನೇರ ಕಾರಣ ಎಂದು ಆರೋಪಿಸಿದರು.