Advertisement

Udupi: ಅಯ್ಯಪ್ಪ ಮಾಲಾಧಾರಿ ಭಕ್ತರಿಂದ ದಾಂಧಲೆ: ದೂರು

08:46 PM Dec 31, 2024 | Team Udayavani |

ಉಡುಪಿ: ಶ್ರೀಕೃಷ್ಣ ದೇವರ ದರ್ಶನಕ್ಕೆ ಬಂದ ಸುಮಾರು 7ರಿಂದ 8 ಮಂದಿ ಅಯ್ಯಪ್ಪ ಮಾಲಾಧಾರಿಗಳು ದಾಂಧಲೆ ನಡೆಸಿದ ಬಗ್ಗೆ ನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ.

Advertisement

ಶ್ರೀಕೃಷ್ಣ ಮಠದ ಭದ್ರತಾ ಪೊಲೀಸ್‌ ಸಿಬಂದಿ ರವೀಂದ್ರ ನೀಡಿದ ದೂರಿನಲ್ಲಿ ಅವರು ರಥಬೀದಿಯಲ್ಲಿ ನಡೆಯುವ ರಥೋತ್ಸವದ ದೇವರ ಉತ್ಸವ ಮೂರ್ತಿ ಪಲ್ಲಕ್ಕಿಯೊಂದಿಗೆ ಶ್ರೀಕೃಷ್ಣಮಠದ ಮುಂಭಾಗದಿಂದ ಒಳಭಾಗಕ್ಕೆ ಬರುವ ಸಮಯದಲ್ಲಿ ಏಳೆಂಟು ಮಂದಿ ಕೇರಳ ಮೂಲದ ಅಯ್ಯಪ್ಪ ಮಾಲಾಧಾರಿಗಳು ಕೃಷ್ಣಮಠದ ಸಿಬಂದಿ ಜಗದೀಶ ಎಂಬುವರಿಗೆ ಕೈಯಿಂದ ಹಲ್ಲೆ ನಡೆಸಿದ್ದಾರೆ.

ಶ್ರೀ ಮಠದ ದಿವಾನರಾದ ನಾಗರಾಜ್‌ ಆಚಾರ್ಯ ಅವರು ಅಯ್ಯಪ್ಪ ಮಾಲಾಧಾರಿಗಳನ್ನು ತಡೆಯಲು ಪ್ರಯತ್ನಿಸಿದಾಗ ಅವರ ಮೇಲೆ ಕೂಡ ಹಲ್ಲೆಗೆ ಪ್ರಯತ್ನ ನಡೆಸಿದ್ದಾರೆ. ತಡೆಯಲು ಯತ್ನಿಸಿದ ತನ್ನ ಮೇಲೂ ಹಲ್ಲೆ ನಡೆಸಿದ್ದಾಗಿ ಅವರು ಅಯ್ಯಪ್ಪ ಮಾಲಾಧಾರಿಗಳಾದ ಶಿವಕುಮಾರ, ವಿಶಾಲ್‌, ರಾಜು, ನವೀನ್‌ ರಾಜ್‌, ರವಿಕಿರಣ್‌, ಭಾನು, ಉಮೇಂದರ್‌, ರವಿಕಾಂತ್‌ ಎಂಬವರ ವಿರುದ್ಧ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next