ಸಿಡ್ನಿ: ಮೆಗ್ ಲ್ಯಾನಿಂಗ್ ಅವರಿಂದ ತೆರವಾಗಿದ್ದ ಆಸ್ಟ್ರೇಲಿಯಾ ವನಿತಾ ತಂಡದ ನಾಯಕತ್ವಕ್ಕೆ ಇದೀಗ ಹೊಸ ನೇಮಕವಾಗಿದೆ. ಅನುಭವಿ ಆಟಗಾರ್ತಿ ಆಲಿಸಾ ಹೀಲಿ ಅವರು ಆಸೀಸ್ ವನಿತಾ ತಂಡವನ್ನು ಮೂರು ಮಾದರಿ ಕ್ರಿಕೆಟ್ ನಲ್ಲಿ ಮುನ್ನಡೆಸಲಿದ್ದಾರೆ. ಶನಿವಾರ ಕ್ರಿಕೆಟ್ ಆಸ್ಟ್ರೇಲಿಯಾವು ಈ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿದೆ.
2023ರ ಜನವರಿಯಿಂದ ಮೆಗ್ ಲ್ಯಾನಿಂಗ್ ಅವರು ಯಾವುದೇ ಅಂತಾರಾಷ್ಟ್ರೀಯ ಪಂದ್ಯವಾಡಿರಲಿಲ್ಲ. ಈ ವೇಳೆ ಅಲಿಸಾ ಹೀಲಿ ಅವರೇ ತಂಡವನ್ನು ಮುನ್ನಡೆಸಿದ್ದರು. ಇದೀಗ ಅಧಿಕೃತವಾಗಿ ಹೀಲಿಗೆ ನಾಯಕತ್ವ ದೊರೆತಿದೆ.
ಆಲ್ ರೌಂಡರ್ ತಹಿಲಾ ಮೆಕ್ ಗ್ರಾತ್ ಅವರು ಉಪ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಕೆಲವೇ ದಿನಗಳಲ್ಲಿ ಭಾರತದಲ್ಲಿ ನಡೆಯಲಿರುವ ಸರಣಿಯಲ್ಲಿ ಆಸೀಸ್ ತಂಡವನ್ನು ಹೀಲಿ ಮುನ್ನಡೆಸಲಿದ್ದಾರೆ.
ಇದನ್ನೂ ಓದಿ:ಉಗ್ರ ಸಂಘಟನೆಯ ಸಂಚಿನ ಪ್ರಕರಣ: ಕರ್ನಾಟಕ ಸೇರಿ 41 ಕಡೆ NIA ದಾಳಿ; 15 ಮಂದಿ ವಶಕ್ಕೆ
ನಾಯಕಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಹೀಲಿ ತನ್ನ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಸ್ಥಿರವಾಗಿ ಉಳಿಯುವ ಮಹತ್ವದ ಬಗ್ಗೆ ಮಾತನಾಡಿದರು.
ಆಸ್ಟ್ರೇಲಿಯಾ ಪರ 14 ವರ್ಷಗಳಿಂದ ಆಡುತ್ತಿರುವ ಅಲಿಸಾ ಹೀಲಿ ಏಳು ಟೆಸ್ಟ್, 101 ಏಕದಿನ ಮತ್ತು 147 ಟಿ20 ಪಂದ್ಯಗಳನ್ನಾಡಿದ್ದಾರೆ. ಆರು ಶತಕಗಳು ಮತ್ತು 32 ಅರ್ಧ ಶತಕಗಳನ್ನು ಅವರು ಬಾರಿಸಿದ್ದಾರೆ. ಹೀಲಿ ಅವರು ಆಸೀಸ್ ಪುರುಷರ ಕ್ರಿಕೆಟ್ ತಂಡದ ಪ್ರಮುಖ ಆಟಗಾರ ಮಿಚೆಲ್ ಸ್ಟಾರ್ಕ್ ಅವರ ಪತ್ನಿ