Advertisement

ಒಂಟಿತನಕ್ಕೂ ಸಚಿವಾಲಯ

06:05 AM Jan 22, 2018 | Team Udayavani |

ಲಂಡನ್‌: ಜನರನ್ನು ಮೂಲಭೂತವಾಗಿ ಕಾಡುವ ಸಮಸ್ಯೆಗಳಲ್ಲಿ ಒಂಟಿತನವೂ ಒಂದು. ಆದರೆ ಸರ್ಕಾರಗಳು ಇದನ್ನು ಸಮಸ್ಯೆ ಎಂದು ಪರಿಗಣಿಸುವುದೇ ಇಲ್ಲ. ಆದರೆ ಇದೇ ಮೊದಲ ಬಾರಿಗೆ ಬ್ರಿಟನ್‌ ಸರ್ಕಾರ ಅಂಥದ್ದೊಂದು ಕೆಲಸ ಮಾಡಿದೆ. ಒಂಟಿತನವನ್ನು ತೊಡೆದುಹಾಕಲು ಸಚಿವರೊಬ್ಬರನ್ನು ನೇಮಿಸಿದೆ. ಸದ್ಯ ಕ್ರೀಡಾ ಸಚಿವೆಯಾಗಿರುವ ಟ್ರೇಸಿ ಕ್ರೋಚ್‌ ಅವರು ಈಗ ಒಂಟಿತನ ನಿವಾರಣೆಯ ಹೊಣೆಯನ್ನೂ ಹೊತ್ತುಕೊಂಡಿದ್ದಾರೆ.

Advertisement

ದೇಶದಲ್ಲಿ 90 ಲಕ್ಷ ಮಂದಿ ಒಂಟಿತನದ ಸಮಸ್ಯೆ ಎದುರಿಸುತ್ತಿದ್ದಾರೆ. ಬಹಳಷ್ಟು ಜನರಿಗೆ ಒಂಟಿತನ ಎಂಬುದು ಆಧುನಿಕ ಜೀವನ ನೀಡಿರುವ ನೋವು ಎಂದು ಪ್ರಧಾನಿ ಥೆರೇಸಾ ಮೇ ಹೇಳಿದ್ದಾರೆ. “ಎಲ್ಲರೂ ಏಂಕಾಗಿನದ ವಿರುದ್ಧ ಹೋರಾಡಬೇಕು ಎಂದು ನಾನು ಬಯಸುತ್ತೇನೆ. ವೃದ್ಧರು, ಪ್ರೀತಿಪಾತ್ರರನ್ನು ಕಳೆದುಕೊಂಡಿರವವರು, ತಮ್ಮ ಕಷ್ಟ ಸುಖಗಳನ್ನು ಹಂಚಿಕೊಳ್ಳಲು ಯಾರನ್ನೂ ಹೊಂದಿಲ್ಲದವರ ಒಂಟಿತನವನ್ನು ಹೋಗಲಾಡಿಸಲು ಎಲ್ಲರೂ ಸಹಕರಿಬೇಕು ಎಂದು ಕೇಳಿಕೊಳ್ಳುತ್ತೇನೆ’ ಎಂದು ಅವರು ಹೇಳಿದ್ದಾರೆ. 

ಮಾನವ ಹಕ್ಕುಗಳ ಪ್ರತಿಪಾದಕಿ ಜೊಕಾಕ್ಸ್‌ ನಿಧನರಾಗುವ ಮೊದಲು ಒಂಟಿತನ ನಿವಾರಣೆಗಾಗಿ ಆಯೋಗವನ್ನು ರಚಿಸಿದ್ದರು. ಅದನ್ನು ಸರ್ಕಾರ ಪುನಾರಂಭಿಸಲಿದೆ. ದೇಶದಲ್ಲಿರುವ 2 ಲಕ್ಷ ಹಿರಿಯರು ತಿಂಗಳಲ್ಲಿ ಬಂದು ಬಾರಿಯೂ ತಮ್ಮ ಸ್ನೇಹಿತರು ಮತ್ತು ಸಂಬಂಧಿಗಳ ಜೊತೆ ಮಾತನಾಡುವುದಿಲ್ಲ. ಶೇ.85ರಷ್ಟು ದಿವ್ಯಾಂಗಿಗಳು ಒಂಟಿತನದಿಂದ ಬಳಲುತ್ತಾರೆ. 18ರಿಂದ 35 ವರ್ಷದ ಒಳಗಿನ ಹಲವರು ಏಕಾಂಗಿತನದಿಂದ ತಮ್ಮ ಬದುಕಿನ ಸಂತೋಷವನ್ನು ಕಳೆದುಕೊಂಡಿದ್ದಾರೆ ಎಂದು ಸರ್ಕಾರ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next