Advertisement

‘ಸಚಿವರು ರಾಜೀನಾಮೆ ನೀಡಲಿ’

02:30 PM Nov 04, 2018 | |

ಬೆಳ್ತಂಗಡಿ: ಜಿಲ್ಲೆಯ ಹಿಂದಿನ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಜಿಲ್ಲೆಗೆ ಸೂಕ್ತ ಮರಳು ನೀತಿ ಜಾರಿಗೆ ತಾರದೇ ಇರುವುದರಿಂದ ಪ್ರಸ್ತುತ ಮರಳಿನ ಅಭಾವ ತಲೆದೋರಿದೆ. ಈಗಿನ ಸಚಿವ ಯು.ಟಿ. ಖಾದರ್‌ ಕೂಡ ಅದನ್ನೇ ಮುಂದು ವರಿಸಿದ್ದು, ಜಿಲ್ಲೆಯ ಇತರ ಸಮಸ್ಯೆಗಳಿಗೂ ಸ್ಪಂದನೆ ನೀಡದಿರುವ ಉಸ್ತುವಾರಿ ಸಚಿವರು ರಾಜೀನಾಮೆ ನೀಡಲಿ ಎಂದು ಶಾಸಕ ಹರೀಶ್‌ ಪೂಂಜ ಆಗ್ರಹಿಸಿದರು.

Advertisement

ಅವರು ಶನಿವಾರ ಇಲ್ಲಿನ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಬೆಳ್ತಂಗಡಿ ಬಿಜೆಪಿ ವತಿಯಿಂದ ಸೂಕ್ತ ಮರಳು ನೀತಿಗೆ ಆಗ್ರಹಿಸಿ ಸರಕಾರದ ವಿರುದ್ಧದ ಪ್ರತಿಭಟನೆಯಲ್ಲಿ ಮಾತನಾಡಿದರು. ಮರಳಿನ ಅಭಾವದಿಂದ ಜಿಲ್ಲೆಯಲ್ಲಿ ವಸತಿ ಯೋಜನೆಗಳ ಮನೆಗಳು ಅರ್ಧಕ್ಕೆ ನಿಂತಿದ್ದು, ಕಾರ್ಮಿಕರು ಕೂಡ ಕೆಲಸವಿಲ್ಲದೆ ಪರದಾಡುವಂತಾಗಿದೆ. ಸಿಎಂ ಕುಮಾರಸ್ವಾಮಿಯವರು ಎರಡೆರಡು ಬಾರಿ ಸಭೆ ನಡೆಸಿದರೂ ಮರಳು ನೀತಿ ಜಾರಿಗೆ ಬಂದಿಲ್ಲ. ಜಿಲ್ಲೆಯ 147 ಸಾಂಪ್ರದಾಯಿಕ ಮರಳು ಗುತ್ತಿಗೆದಾರರಿಗೆ ಪರವಾನಿಗೆ ನೀಡಿ ಎಂದು ಆಗ್ರಹಿಸಿದರೂ ಸರಕಾರ ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು.

ಮರಳು ನೀತಿ ಜಾರಿ ಕುರಿತು ರಮಾನಾಥ ರೈ – ಯು.ಟಿ. ಖಾದರ್‌ ಬೆಂಬಲಿಗರು ಅಡ್ಡಗಾಲು ಹಾಕುತ್ತಿದ್ದಾರೆ. ಸರಕಾರದ ಸಾಲಮನ್ನಾ ಹಣ ಎಲ್ಲಿಗೆ ಹೋಗಿದೆ ಎಂಬುದು ಯಾರಿಗೂ ಗೊತ್ತಿಲ್ಲ. ಮಳೆ ಹಾನಿ ಪರಿಹಾರದ ಮೊತ್ತ 20 ಕೋ. ರೂ. ಕೂಡ ಕಾಣೆಯಾಗಿದೆ ಎಂದರು.

ಕಮ್ಯೂನಿಷ್ಟರೆಲ್ಲಿ?
ಬೀಡಿ, ಕಾರ್ಮಿಕರು, ಕಟ್ಟಡ ಕಾರ್ಮಿಕರ ಕುರಿತು ವಿಶೇಷ ಕಾಳಜಿ ಹೊಂದಿ, ಪ್ರತಿ ಬಾರಿಯೂ ಅವರನ್ನು ಹಿಡಿದುಕೊಂಡು ಪ್ರತಿಭಟನೆ ಮಾಡುವ ಕಮ್ಮಿ ನಿಷ್ಠೆಯ ಕಮ್ಯೂನಿಷ್ಟರು ಈಗ ಎಲ್ಲಿ ಹೋಗಿದ್ದಾರೆ. ಮರಳಿನ ಅಭಾವದಿಂದ ಕಾರ್ಮಿಕರಿಗೆ ಕೆಲಸ ಇಲ್ಲದಿದ್ದರೂ ಯಾವ ಕಮ್ಯೂನಿಷ್ಟ್ ನಾಯಕರೂ ಪ್ರತಿಭಟನೆ ಮಾಡುತ್ತಿಲ್ಲ. ಅವರಿಗೆ ನಿಜವಾದ ಕಾಳಜಿ ಇದ್ದರೆ ಪ್ರತಿಭಟನೆ ಮಾಡಲಿ ಎಂದು ಶಾಸಕ ಹರೀಶ್‌ ಪೂಂಜ ಆಗ್ರಹಿಸಿದರು.

ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಪ್ರತಾಪಸಿಂಹ ನಾಯಕ್‌ ಮಾತನಾಡಿ, ಪ್ರಸ್ತುತ ಸರಕಾರದ ಅರಳು-ಮರುಳಿನಿಂದಾಗಿ ಜಿಲ್ಲೆಗೆ ಸೂಕ್ತ ಮರಳು ನೀತಿ ಇಲ್ಲದಾಗಿದೆ ಎಂದು ಆರೋಪಿಸಿದರು. ಮಾಜಿ ಶಾಸಕ ಪ್ರಭಾಕರ ಬಂಗೇರ, ಜಿ.ಪಂ. ಸದಸ್ಯರಾದ ಕೊರಗಪ್ಪ ನಾಯ್ಕ, ಸೌಮ್ಯಲತಾ ಗೌಡ, ಮಮತಾ ಎಂ. ಶೆಟ್ಟಿ, ತಾ.ಪಂ. ಉಪಾಧ್ಯಕ್ಷೆ ವೇದಾವತಿ, ಸದಸ್ಯರಾದ ಸುಧೀರ್‌ ಸುವರ್ಣ, ಕೊರಗಪ್ಪ ಗೌಡ, ಲಕ್ಷ್ಮೀನಾರಾಯಣ, ಗುತ್ತಿಗೆದಾರರ ಸಂಘದ ಅಧ್ಯಕ್ಷ ವಿನಯ ಹೆಗ್ಡೆ, ಪ್ರಮುಖರಾದ ಭಾಸ್ಕರ ಧರ್ಮಸ್ಥಳ, ಜಯಂತ ಕೋಟ್ಯಾನ್‌, ಭುಜಂಗ ಶೆಟ್ಟಿ, ಸೀತಾರಾಮ ಬೆಳಾಲು, ಸದಾನಂದ ಪೂಜಾರಿ  ಉಂಗಿಲಬೈಲು, ಉದಯ ಬಿ.ಕೆ., ಬಾಲಕೃಷ್ಣ ಶೆಟ್ಟಿ ಸವಣಾಲು, ನ.ಪಂ. ಸದಸ್ಯರು ಉಪಸ್ಥಿತರಿದ್ದರು. ಬಿಜೆಪಿ ಮುಂದಾಳು ಪ್ರಭಾಕರ ಶೆಟ್ಟಿ ಉಪ್ಪಡ್ಕ ನಿರೂಪಿಸಿದರು.

Advertisement

ಹೋರಾಟ
ಆಡಳಿತ ನಡೆಸುವವರು ವರ್ಗಾವಣೆ ದಂಧೆ ಮೂಲಕ ಹಣ ಮಾಡುತ್ತಿದ್ದಾರೆ. ಸರಕಾರವು ಜಿಲ್ಲೆಗೆ ಸೂಕ್ತ ಮರಳು ನೀತಿ ಜಾರಿಗೆ ತಾರದೇ ತಾಳ್ಮೆ ಪರೀಕ್ಷೆ ಮಾಡಿದ್ದೇ ಆದಲ್ಲಿ ಮುಂದೆ ಉಗ್ರ ಹೋರಾಟ ಮಾಡಲಾಗುವುದು.
ಹರೀಶ್‌ ಪೂಂಜ
  ಶಾಸಕರ

Advertisement

Udayavani is now on Telegram. Click here to join our channel and stay updated with the latest news.

Next