Advertisement
ಈ ಬಗ್ಗೆ ಮಾತನಾಡಿದ ಮೈಕ್ರೋಸಾಫ್ಟ್ ನ ಚೀಫ್ ಪ್ರಾಡಕ್ಟ್ ಆಫೀಸರ್ ಪನೊಸ್ ಪನಾಯ್, “ನಮ್ಮ ಪಿಸಿಗಳನ್ನು ನಾವು ಹೇಗೆ ಬಳಸಿದ್ದೇವೆ ಎಂಬುದರ ಬಗ್ಗೆ ಪ್ರಾಯೋಗಿಕ ಮತ್ತು ಕ್ರಿಯಾತ್ಮಕವಾದ ವಿಚಾರದಲ್ಲಿ ನಾವು ಕಳೆದ 18 ತಿಂಗಳುಗಳಲ್ಲಿ ಸಾಕಷ್ಟು ಬದಲಾವಣೆಯನ್ನು ತಂದಿದ್ದೇವೆ. ಮುಂದಿನ ಪೀಳಿಗೆಯ ವಿಂಡೋಸ್ ಗಳನ್ನು ನಿರ್ಮಾಣ ಮಾಡಲು ಇದು ನಮಗೆ ಪ್ರೇರಣೆಯನ್ನು ಒದಗಿಸಿದೆ. ಬಿಲಿಯನ್ ಗಟ್ಟಲೆ ಜನರು ವಿಶ್ವಾಸಾರ್ಹತೆಯನ್ನು ಹೊಂದುವಂತಹ ಪ್ಲಾಟ್ ಫಾರ್ಮ್ ಅನ್ನು ನಾವು ಸಿದ್ಧಪಡಿಸಿದ್ದೇವೆ. ಈ ಹೊಚ್ಚ ಹೊಸದಾದ ವಿಂಡೋಸ್ 11 ಮೂಲಕ ಪ್ರತಿಯೊಬ್ಬರೂ ಸೃಷ್ಟಿ ಮಾಡುವುದು, ಕಲಿಕೆ, ಪ್ಲೇಯನ್ನು ಅದರಲ್ಲೂ ಪ್ರಮುಖವಾಗಿ ಸುಧಾರಿತ ರೀತಿಯಲ್ಲಿ ಸಂಪರ್ಕ ಸಾಧಿಸುವಂತಹ ಪರಿಚಿತವಾದ ಜಾಗವನ್ನು ನಿರ್ಮಾಣ ಮಾಡಲು ಬಯಸಿದ್ದೇವೆ’’ ಎಂದರು.ಈ ವಿಂಡೋಸ್ 11, ಹೊಸ ಪಿಸಿಗಳಲ್ಲಿ ಲಭ್ಯವಿದೆ ಮತ್ತು ವಿಂಡೋಸ್ 10 ಪಿಸಿಗಳಿಗೆ ಉಚಿತವಾಗಿ ಅಪ್ ಗ್ರೇಡ್ ಮಾಡುವ ಅವಕಾಶವನ್ನು ಕಲ್ಪಿಸಲಾಗಿದೆ.
ವಿಂಡೋಸ್ 11 ತಾಜಾ, ಸ್ವಚ್ಛ ಇಂಟರ್ ಫೇಸ್ ಮತ್ತು ಬಳಕೆದಾರ ಸ್ನೇಹಿ ವೈಶಿಷ್ಟ್ಯತೆಗಳನ್ನು ಒಳಗೊಂಡಿದೆ. ಇದು ಬಳಕೆದಾರರಿಗೆ ತಮ್ಮ ಕೆಲಸಗಳನ್ನು ಸುಲಭವಾಗಿ ಮಾಡಲು ಮತ್ತು ಅವರ ಸೃಜನಶೀಲತೆಗೆ ಪ್ರೇರಣೆಯನ್ನು ನೀಡುತ್ತದೆ. ಸ್ಕ್ರೀನ್ ನ ಮಧ್ಯಭಾಗದಲ್ಲಿರುವ ಸ್ಟಾರ್ಟ್ ಬಟನ್ ಕ್ಲಿಕ್ ಮಾಡುವ ಮೂಲಕ ಬಳಕೆದಾರರು ತಮಗೆ ಬೇಕಾದುದನ್ನು ಸುಲಭವಾಗಿ ಕಂಡುಹಿಡಿಯಲು ಸಾಧ್ಯವಾಗುತ್ತದೆ. ವಿಭಿನ್ನ ರೀತಿಯ ಪ್ಲಾಟ್ ಫಾರ್ಮ್ ಗಳು ಅಥವಾ ಸಾಧನಗಳಲ್ಲಿ ಈ ಹಿಂದೆ ನೋಡಲಾದ ಇತ್ತೀಚಿನ ಫೈಲ್ ಗಳನ್ನು ಬಳಕೆದಾರರಿಗೆ ತೋರಿಸಲು ಸ್ಟಾರ್ಟ್ ಕ್ಲೌಡ್ ಹಾಗೂ ಮೈಕ್ರೋಸಾಫ್ಟ್ 365 ನ ಶಕ್ತಿಯನ್ನು ಬಳಸಿಕೊಳ್ಳುತ್ತದೆ. ಬಳಕೆದಾರರು ತಾವು ಹಿಂದೆ ನಿಲ್ಲಿಸಿದ್ದ ಕೆಲಸವನ್ನು ತೆಗೆದುಕೊಳ್ಳಬಹುದಾಗಿದೆ. ಅವರು ತಮ್ಮ ಆಂಡ್ರಾಯ್ಡ್ ಅಥವಾ ಐಒಎಸ್ ಸಾಧನಗಳಲ್ಲಿ ಕೆಲಸ ಮಾಡುತ್ತಿರುವ ದಾಖಲೆಗಳನ್ನು ಸಹ ಪಡೆದುಕೊಳ್ಳಬಹುದಾಗಿದೆ. ಅತ್ಯುನ್ನತ ಕಾರ್ಯನಿರ್ವಹಣೆ ಮತ್ತು ಕಲಿಕೆಗೆ ಪೂರಕವಾದ ಸುರಕ್ಷಿತ ಆಪರೇಟಿಂಗ್ ಸಿಸ್ಟಂ ಆಗಿ ಈ ಹೊಸ ವಿಂಡೋಸ್ 11 ಅನ್ನು ವಿನ್ಯಾಸಗೊಳಿಸಲಾಗಿದೆ. ಇದು ಅತ್ಯಂತ ಸುರಕ್ಷಿತವಾಗಿದ್ದು, ಹೊಸ ಅಂತರ್ನಿರ್ಮಿತ ಭದ್ರತಾ ತಂತ್ರಜ್ಞಾನಗಳನ್ನು ಹೊಂದಿದೆ ಹಾಗೂ ಡೇಟಾ ಮತ್ತು ಸಾಧನಗಳಾದ್ಯಂತ ಅಕ್ಸೆಸ್ ಅನ್ನು ರಕ್ಷಿಸುವ ಝೀರೋ ಟ್ರಸ್ಟ್ ರೆಡಿ ಆಪರೇಟಿಂಗ್ ಸಿಸ್ಟಂ ಅನ್ನು ಪೂರೈಸುತ್ತದೆ.
Related Articles
Advertisement
ಈ ಹೊಸ ವಿಂಡೋಸ್ 11 ಹೊಚ್ಚ ಹೊಸದಾದ ಮೈಕ್ರೋಸಾಫ್ಟ್ ನೊಂದಿಗೆ ರೂಪಿತವಾಗಿದೆ. ವೇಗ, ವೈವಿಧ್ಯತೆ ಮತ್ತು ಅನುಕೂಲಕ್ಕೆ ಪೂರಕವಾಗಿ ಮರುನಿರ್ಮಾಣಗೊಂಡಿದೆ. ಇದು ಸುರಕ್ಷತೆ ಮತ್ತು ಕುಟುಂಬ ಸುರಕ್ಷತೆಗಾಗಿ ಪರೀಕ್ಷಿಸಲ್ಪಟ್ಟ ಮೊದಲ ಹಾಗೂ ಥರ್ಡ್ ಪಾರ್ಟಿ ಅಪ್ಲಿಕೇಷನ್ ಗಳ ವ್ಯಾಪಕವಾದ ಕ್ಯಾಟಲಾಗ್ ಅನ್ನು ಒಳಗೊಂಡಿದೆ. ಬಳಕೆದಾರರ ಮನರಂಜಿಸಲು, ಅವರನ್ನು ಪ್ರೇರೇಪಿಸಲು ಹಾಗೂ ಅವರನ್ನು ಪರಸ್ಪರ ಸಂಪರ್ಕ ಮಾಡುವ ವಿಚಾರದಲ್ಲಿ ನಂಬಲಾಗದಂತಹ ಅನುಭವಗಳನ್ನು ತಂದುಕೊಡುತ್ತದೆ. ಮೊದಲ ಬಾರಿಗೆ ಆಂಡ್ರಾಯ್ಡ್ ಅಪ್ಲಿಕೇಷನ್ ಗಳು ಮೈಕ್ರೋಸಾಫ್ಟ್ ಸ್ಟೋರ್ ನಲ್ಲಿ ಲಭ್ಯವಿರುತ್ತವೆ ಹಾಗೂಅಮೇಜಾನ್ ಆಪ್ ಸ್ಟೋರ್: ಅಮೆಜಾನ್ ನೊಂದಿಗೆ ಮೈಕ್ರೋಸಾಫ್ಟ್ ಸಹಭಾಗಿತ್ವದಲ್ಲಿ ಅಮೆಜಾನ್ ಆಪ್ ಸ್ಟೋರ್ ಪರಿಚಯಿಸಲಾಗಿದೆ. ಈ ಮೂಲಕ ಸುಲಭವಾಗಿ ಈ ಅಪ್ಲಿಕೇಷನ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. • ಡೈರೆಕ್ಟ್ X 12 ಅಲ್ಟಿಮೇಟ್, ಇಲ್ಲಿ ಬಳಕೆದಾರರು ಅತ್ಯದಿಕ ಫ್ರೇಂ ದರಗಳಲ್ಲಿ ಅತ್ಯಾನಂದದ ಗ್ರಾಫಿಕ್ಸ್ ಅನ್ನು ಆನಂದಿಸಬಹುದಾಗಿದೆ.
• ನೇರವಾದ ಸ್ಟೋರೇಜ್ ವೇಗವಾದ ಲೋಡ್ ಮತ್ತು ಹೆಚ್ಚಿನ ವಿವರವಾದ ಗೇಮ್ ಜಗತ್ತಿಗೆ ಅವಕಾಶ ಕಲ್ಪಿಸುತ್ತದೆ.
• ಆಟೋ ಎಚ್ ಡಿಆರ್, ವಿಸ್ತಾರವಾದ, ಹೆಚ್ಚು ವೈವಿಧ್ಯಮಯ ಶ್ರೇಣಿಯ ಬಣ್ಣಗಳ ಮೂಲಕ ನೈಜವಾದ ಆಕರ್ಷಣೀಯ ದೃಶ್ಯದ ಅನುಭವವನ್ನು ನೀಡುತ್ತದೆ.
• 100 ಕ್ಕೂ ಹೆಚ್ಚು ಅತ್ಯುತ್ತಮ ಗುಣಮಟ್ಟದ ಪಿಸಿ ಗೇಮ್ ಗಳನ್ನು ಮತ್ತು ಹೊಸ ಗೇಮ್ ಗಳನ್ನು ಸೇರಿಸಲಾಗಿದೆ. ಹೊಸ ಗೇಮ್‍ಗಳನ್ನು ಅಪ್‍ಡೇಟ್ ಮಾಡಲಾಗುತ್ತದೆ. ಪಿಸಿ ಅಥವಾ ಅಲ್ಟಿಮೇಟ್ ಗ್ರಾಹಕರಿಗೆ ಎಕ್ಸ್ ಬಾಕ್ಸ್ ಗೇಮ್ ಪಾಸ್ ಗೆ ಲಭ್ಯವಾಗುವಂತೆ ಮಾಡುತ್ತದೆ. ಮೈಕ್ರೋಸಾಫ್ಟ್ ಟೀಮ್ಸ್ ಅನ್ನು ಟಾಸ್ಕ್ ಬಾರ್ ನಲ್ಲಿ ಸಂಯೋಜನೆ ಮಾಡಲಾಗಿದೆ. ಇದು ವಿಂಡೋಸ್, ಆಂಡ್ರಾಯ್ಡ್ ಅಥವಾ ಐಒಎಸ್ ಮೂಲಕ ಪ್ರಪಂಚದಾದ್ಯಂತ ಎಲ್ಲಿಯಾದರೂ ಪ್ರೀತಿಪಾತ್ರರ ಜೊತೆಗೆ ಪಠ್ಯ, ಚಾಟ್, ಧ್ವನಿ ಅಥವಾ ವೀಡಿಯೊ ಮೂಲಕ ತ್ವರಿತವಾಗಿ ಸಂಪರ್ಕ ಸಾಧಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ. ಟೀಮ್ಸ್ ಆ್ಯಪ್ ಗಳಿಲ್ಲದ ಸ್ನೇಹಿತರು ಮತ್ತು ಕುಟುಂಬಕ್ಕಾಗಿ ಬಳಕೆದಾರರು ಅವರೊಂದಿಗೆ ದ್ವಿಮುಖ ಎಸ್ಎಂಎಸ್ ಮೂಲಕ ಸಂಪರ್ಕ ಸಾಧಿಸಬಹುದಾಗಿದೆ. -ಕೆ.ಎಸ್. ಬನಶಂಕರ ಆರಾಧ್ಯ