ವಾಷಿಂಗ್ಟನ್: ತಂತ್ರಜ್ಞಾನ ಕ್ಷೇತ್ರವು ಭರದಿಂದ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ, ಕಂಪ್ಯೂಟರ್‌ಗಳಲ್ಲಿ ಬಳಸಲಾಗುವ ಆಪರೇಟಿಂಗ್ ಸಿಸ್ಟಂ ಆದ “ವಿಂಡೋಸ್’ಗೆ ಹೊಸ ಸ್ಪರ್ಶ ನೀಡಿ, ಹೊಸ ಪೀಳಿಗೆಯ ವಿಂಡೋಸ್ ಬಿಡುಗಡೆ ಮಾಡುವುದಾಗಿ ಮೈಕ್ರೋಸಾಫ್ಟ್ ಕಂಪನಿ ತಿಳಿಸಿತ್ತು.
ಆ ನಿಟ್ಟಿನಲ್ಲಿ ಈಗಾಗಲೇ ಕೆಲಸ ಆರಂಭಿಸಿರುವುದಾಗಿಯೂ ಹೇಳಿತ್ತು. ಆದರೆ, ಈಗ ಹೊಸದಾಗಿ ಬಿಡುಗಡೆಯಾಗಿರುವ ವಿಂಡೋಸ್, ಈಗಿರುವ ವಿಂಡೋಸ್ 10ರ ಮುಂದಿನ ಆವೃತ್ತಿಯಾಗಿದ್ದು ಅದು ಸದ್ಯದಲ್ಲೇ ವಿಂಡೋಸ್ 11 ಹೆಸರಿನಲ್ಲಿ ಬಿಡುಗಡೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿಯ ಜೀವ ಉಳಿಸಿತು14,000 ಕಿ.ಮೀ ದೂರದಿಂದ ಬಂದ ಫೋನ್ ಕರೆ..!
“ಇದೇ ತಿಂಗಳ 24ರಂದು ಹೊಸ ಸ್ಪರ್ಶದ ವಿಂಡೋಸ್ ಆಪರೇಟಿಂಗ್ ಸಿಸ್ಟಂನಲ್ಲಿ ಏನೇನಿದೆ’ ಎಂಬುದನ್ನು ನಾವು ಆಯೋಜಿಸುವ ವರ್ಚುವಲ್ ಸಮಾರಂಭದಲ್ಲಿ ನೋಡಬಹುದು ಎಂದು ಮೈಕ್ರೋಸಾಫ್ಟ್ ಸಂಸ್ಥೆ ಈಗಾಗಲೇ ಪ್ರಕಟಿಸಿದೆ.
ಆದರೆ, ಇದು ವಿಂಡೋಸ್ 11ರ ಉದ್ಘಾಟನೆ ಸಮಾರಂಭವೇ ಹೊರತು ಬೇರೆ ಏನಲ್ಲ ಎಂದು ಕಂಪ್ಯೂಟರ್ ಕ್ಷೇತ್ರದ ತಜ್ಞರು ಅಂದಾಜಿಸಿದ್ದಾರೆ.