Advertisement

ಶೋಷಿತರ ಪರ ಒಕ್ಕೂಟದ ಬೃಹತ್‌ ಪ್ರತಿಭಟನೆ

09:30 AM Mar 06, 2019 | Team Udayavani |

ಸುರಪುರ: ಭೀಮರಾಯನ ಗುಡಿ ಕೆಬಿಜೆಎನ್ನೆಎಲ್‌ ಕಾಡಾ ಆಡಳಿತಾಧಿಕಾರಿ ತಕ್ಷಣವೇ ಸೇವೆಯಿಂದ ಅಮಾನತುಗೊಳಿಸಬೇಕು ಎಸಿಇಪಿ ಮತ್ತು ಟಿಎಸ್‌ಪಿ ಯೋಜನೆ ಸಮರ್ಪಕ ಅನುಷ್ಠಾನಗೊಳಿಸುವುದು ಸೇರಿದಂತೆ ವಿವಿಧ ಬೇಡಿಗೆಳಿಗೆ ಒತ್ತಾಯಿಸಿ ಶೋಷಿತಪರ ಹೋರಾಟ ಸಂಘಟನೆಗಳ ಒಕೂಟದ ಕಾರ್ಯಕರ್ತರು ಮಂಗಳವಾರ ಹಸನಾಪುರದ ರಾಜಾ ನಾಲ್ವಿಡಿ ವೆಂಕಟಪ್ಪ ನಾಯಕ ವೃತ್ತದ ಬಳಿ ರಾಜ್ಯ ಹೆದ್ದಾರಿ ತಡೆದು ಪ್ರತಿಭಟಿಸಿದರು.

Advertisement

ಪ್ರತಿಭಟನಾಕಾರರು ನೀರಾವರಿ ಇಲಾಖೆ ವಿರುದ್ಧ ಘೋಷಣೆ ಕೂಗಿದರು. ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತ ಪಡಿಸಿದರು. ಕಾಡಾ ನಿದೇರ್ಶಕರು ಸ್ಥಳಕ್ಕೆ ಆಗಮಿಸಿ ಲಿಖೀತ ಆದೇಶ ನೀಡುವವರೆಗೂ ರಸ್ತೆ ತಡೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು. ನಂತರ ಪೊಲೀಸರು ಮನವಲಿಕೆ ನಂತರ ರಸ್ತೆ ತಡೆ ಹಿಂಪಡೆದು ಪ್ರತಿಭಟನೆ ಮುಂದುವರೆಸಿದರು. 

ಒಕ್ಕೂಟದ ರಾಜ್ಯಾಧ್ಯಕ್ಷ ವೆಂಕೋಬ ದೊರೆ ಮಾತನಾಡಿ, ಕಾಡಾ ಆಡಳಿತಾಧಿಕಾರಿ ವಿ.ಕೆ. ಪೋತಾರ್‌ ಅವರು ಇಲಾಖೆಯಲ್ಲಿ ಹೆಗ್ಗಣವಾಗಿ ಪರಿಣಮಿಸಿದ್ದಾರೆ. ಪ್ರತಿ ಕಾಮಗಾರಿಗಳಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ. ಎಸ್‌ಸಿಪಿ ಟಿಎಸ್‌ಪಿ ಯೋಜನೆ ಅಡಿಯಲ್ಲಿ ಸರಕಾರದ ಕೋಟ್ಯಂತರ
ರೂಪಾಯಿ ಲೂಟಿ ಮಾಡಿದ್ದಾರೆ ಎಂದು ಆರೋಪಿಸಿದರು. ಯೋಜನೆ ಅಡಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನಾಂಗ ಇಲ್ಲದೆ ಇರುವ ಪ್ರದೇಶಗಳಲ್ಲಿ ಕೆಲಸ ಮಾಡಿ ಸಮುದಾಯದ ಬಡ ರೈತರಿಗೆ ವಂಚನೆ ಮಾಡಿದ್ದಾರೆ. ಕಾಮಗಾರಿಯಲ್ಲಿ ಸರಕಾರದ ನಿರ್ದೇಶನಗಳನ್ನು ಪಾಲಿಸಿಲ್ಲ. ಕೆಲ ಕಡೆ ಕೆಲಸ ಮಾಡದೆ ಬೋಗಸ್‌ ಬಿಲ್‌ ಮಾಡಿ ಸರ್ಕಾರದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ದೂರಿದರು.

ಒಕ್ಕೂಟದ ಜಿಲ್ಲಾಧ್ಯಕ್ಷ ಉಸ್ತಾದ ವಜಾಹತ್‌ ಹುಸೇನ್‌ ಮಾತನಾಡಿ, ಹಸನಾಪುರ ಸಬ್‌ ಡಿವಿಜನ್‌ 2ರಲ್ಲಿ ಸಾಕಷ್ಟು ಬೋಗಸ್‌ ನಡೆದಿದೆ. ಕಾಲುವೆ ನವೀಕರಣ, ಶೀಲ್ಟ, ಜಂಗಲ್‌ ಕಂಟಿಗ್‌ ಎಫ್‌ಐಸಿ ಸೇರಿದಂತೆ ವಿವಿಧ ಕಾಮಗಾರಿಗಳ ಟೆಂಡರ ಪ್ರಕ್ರಿಯ ನಿಮಯನುಸಾರ ಮಾಡಿಲ್ಲ.

ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಒಕ್ಕೂಟ ಅನೇಕ ಬಾರಿ ಮನವಿ ಮಾಡಿದೆ. ವಿವಿಧ ಸಂಘ ಸಂಸ್ಥೆಗಳು ಕೂಡಾ ಈ ಬಗ್ಗೆ ದೂರು ನೀಡಿವೆ. ಆದರೆ ಮೇಲಧಿಕಾರಿಗಳು ಪೋಲ್ದಾರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿರುವುದು ಅನುಮಾನ ಮೂಡಿಸಿದೆ ಎಂದು ಆಕ್ರೋಶ ವ್ಯಕ್ತ ಪಡಿಸಿದರು. 

Advertisement

ರಾಜ್ಯಪಾಲರಿಗೆ ಬರೆದ ಬೇಡಿಕಗಳ ಮನವಿಯನ್ನು ಕಂದಾಯ ಇಲಾಖೆ ಶಿರಸ್ತೇದಾರ ರಾಮೂ ಪೂಜಾರಿ ಅವರಿಗೆ ಸಲ್ಲಿಸಿದರು. ಪ್ರಮುಖರಾದ ಗೋಪಾಲ ಬಾಗಲಕೋಟೆ, ಮಾನಯ್ಯ ದೊರೆ, ಬಸವರಾಜ ಕವಡಿಮಟ್ಟಿ, ಕೃಷ್ಣಾ ದಿವಾಕರ, ಕೇಶಣ್ಣ ದೊರೆ, ದೇವಪ್ಪ ದೇವರಮನಿ, ತಿರುಪತಿ ದೊರೆ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next