Advertisement

Pakistan: ಪೊಲೀಸರ ಕಾರ್ಯಾಚರಣೆಗೆ ಪಿಟಿಐ ಪ್ರತಿಭಟನೆ ರದ್ದು!

04:05 AM Nov 28, 2024 | Team Udayavani |

ಇಸ್ಲಾಮಾಬಾದ್‌: ಚುನಾವಣ ಅಕ್ರಮ, ಜೈಲಲ್ಲಿರುವ ಪಾಕಿಸ್ಥಾನದ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ಬಿಡುಗಡೆ ಗಾಗಿ 3 ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯನ್ನು ಸೇನೆ ಮತ್ತು ಪೊಲೀ ಸರು ಯಶಸ್ವಿಯಾಗಿ ಮಟ್ಟ ಹಾಕಿದ್ದಾರೆ.

Advertisement

ಮಂಗಳವಾರ ರಾತ್ರಿ ಖಾನ್‌ರ ಪಿಟಿಐ ಪಕ್ಷದ ಕಾರ್ಯಕರ್ತರು ಮತ್ತು ಪೊಲೀಸರು ಮತ್ತು ಸೇನೆ ನಡುವೆ ಭಾರೀ ಘರ್ಷಣೆ ನಡೆದು ಪಿಟಿಐನ ನಾಲ್ವರು ಕಾರ್ಯಕ ರ್ತರು ಅಸುನೀಗಿದ್ದಾರೆ. 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮಂಗಳವಾರ ಮಧ್ಯರಾತ್ರಿ ಇಸ್ಲಾಮಾಬಾದ್‌ನ ಡಿ-ಚೌಕ್‌ ಪ್ರದೇಶದಲ್ಲಿ ಭಾರೀಪ್ರಮಾಣ ದಲ್ಲಿ ಘರ್ಷಣೆ ನಡೆದಿದ್ದು, 1,000ಕ್ಕೂ ಅಧಿಕ ಮಂದಿಯನ್ನು ಬಂಧಿಸಲಾಗಿದೆ. ಇನ್ನು ಇಮ್ರಾನ್‌ ಪತ್ನಿ ಬೂಶ್ರಾ ಬಿಬಿ ಹಾಗೂ ಖೈಬರ್‌ ಪಖ್ತೂಂಖ್ವಾ ಸಿಎಂ ಅಲಿ ಅಮಿನ್‌ ಗಂದಾಪುರ ಇಸ್ಲಾಮಾಬಾದ್‌ಗೆ ತೆರಳುತ್ತಿದ್ದರಾದರೂ ಮಾನ್ಸೇಹ್ರಾ ಪಟ್ಟಣದಲ್ಲಿದ್ದಾರೆ ಎಂದು ಪಿಟಿಐ ಸ್ಪಷ್ಟಪಡಿಸಿದೆ.

“ಸರಕಾರದ ಕ್ರೂರತೆಯನ್ನು ಗಮನ ದಲ್ಲಿಟ್ಟುಕೊಂಡು, ನಾವು ನಮ್ಮ ಶಾಂತಿ ಯುತ ಪ್ರತಿಭಟನೆಯನ್ನು ಸ್ಥಗಿತ ಗೊಳಿ ಸುತ್ತಿದ್ದೇವೆ. ಭವಿಷ್ಯದಲ್ಲಿ ಖಾನ್‌ ಸೂಚನೆಗೆ ಅನುಗುಣವಾಗಿ ಮುಂದಿನ ನಿರ್ಧಾರಗಳನ್ನು ಪ್ರಕಟಿಸಲಾಗುವುದು’ ಎಂದು ಪಿಟಿಐ ಹೇಳಿದೆ.

ಪಾಕಿಸ್ಥಾನದಲ್ಲಿ ಮತ್ತೆ ಘರ್ಷಣೆ: 10 ಸಾವು, 10 ಮಂದಿಗೆ ಗಾಯ
ಪೇಶಾವರ: ಪಾಕಿಸ್ಥಾನದ ಗಲಭೆಗ್ರಸ್ತ ಖೈಬರ್‌ ಪಖ್ತೂಂಖ್ವಾ ಪ್ರಾಂತದಲ್ಲಿ ಹಿಂಸಾಚಾರ ಅವ್ಯಾಹತವಾಗಿ ಮುಂದುವರಿದಿದ್ದು, 10 ಮಂದಿ ಸಾವಿಗೀಡಾಗಿದ್ದಾರೆ. 10 ಮಂದಿ ಗಾಯಗೊಂಡಿದ್ದಾರೆ. ಶಿಯಾ ಮತ್ತು ಸುನ್ನಿ ಸಮುದಾಯಗಳ ನಡುವೆ ಈ ಘರ್ಷಣೆ ನಡೆಯುತ್ತಿದೆ.

Advertisement

ಅಫ್ಫಾನಿಸ್ಥಾನಕ್ಕೆ ಹೊಂದಿಕೊಂಡು ಇರುವ ಗಡಿ ಜಿಲ್ಲೆ ಕುರ್ರಂ ಜಿಲ್ಲೆಯಲ್ಲಿ ಹೊಸತಾಗಿ ಘರ್ಷಣೆಗಳು ನಡೆದಿವೆ. ಕಳೆದ ಶುಕ್ರವಾರ ಕುರ್ರಂ ಜಿಲ್ಲೆಯಲ್ಲಿ 2 ಗುಂಪುಗಳ ನಡುವೆ ಘರ್ಷಣೆ ಶುರುವಾಗಿತ್ತು. ಕಳೆದ ವಾರ ನಡೆದಿದ್ದ ಗಲಭೆಯಲ್ಲಿ 37 ಮಂದಿ ಅಸುನೀಗಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next