Advertisement

ಹೆಚ್ಚು ಹಣ ನೀಡಿದರೆ ಮಾತ್ರ ದೊರೆಯುತ್ತೆ ಮಾಸ್ಕ್, ಸ್ಯಾನಿಟೈಸರ್‌

09:29 PM Mar 11, 2020 | Lakshmi GovindaRaj |

ಚನ್ನರಾಯಪಟ್ಟಣ: ರಾಜ್ಯದಲ್ಲಿ ಕೊರೊನಾ ವೈರಸ್‌ ಭೀತಿ ಹೆಚ್ಚುತ್ತಿದ್ದಂತೆ ಮಾಸ್ಕ್ ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ ಮೊರೆ ಹೋಗುತ್ತಿರುವ ಜನರು ಎಂಆರ್‌ಪಿಗಿಂತ ಹೆಚ್ಚು ಹಣ ನೀಡಿ ಕೊಳ್ಳುವ ಪರಿಸ್ಥಿತಿ ತಾಲೂಕಿನಲ್ಲಿ ನಿರ್ಮಾಣವಾಗಿದೆ.

Advertisement

ತಾಲೂಕಿನ ನುಗ್ಗೇಹಳ್ಳಿ, ಹಿರಿಬಾಗೂರು ಹೋಬಳಿ ಹಾಗೂ ಪ್ರವಾಸಿ ಕೇಂದ್ರ ಶ್ರವಣಬೆಳಗೊಳದ ಔಷಧಿ ಅಂಗಡಿಯಲ್ಲಿ ಕಳೆದ ಒಂದು ವಾರದಿಂದ ಮಾಸ್ಕ್ ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ ಎಂಆರ್‌ಪಿ ಬೆಲೆಗೆ ದೊರೆಯುತ್ತಿಲ್ಲ. ಈ ಬಗ್ಗೆ ಜನರು ದೂರವಾಣಿ ಕರೆ ಮಾಡಿ ತಾಲೂಕು ಆರೋಗ್ಯಾಧಿಕಾರಿಗಳನ್ನು ವಿಚಾರಿಸಿದರೆ ಇದು ನನಗೆ ಸಂಬಂಧಿಸಿದಲ್ಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ಇದಕ್ಕಾಗಿ ಪ್ರತ್ಯೇಕ ವಿಭಾಗವಿದೆ ಅವರಿಗೆ ದೂರು ನೀಡಿ ಎಂದು ಸಬೂಬು ಹೇಳುವ ಮೂಲಕ ಜಾರಿಕೊಳ್ಳುತ್ತಿದ್ದಾರೆ.

ಪ್ರವಾಸಿಗರಿಗೆ ಹೆಚ್ಚು ಬೆಲೆಗೆ ಮಾರಾಟ: ಶ್ರವಣಬೆಳಗೊಳಕ್ಕೆ ವಾರಾಂತ್ಯದಲ್ಲಿ ಹೆಚ್ಚು ಪ್ರವಾಸಿಗರು ಆಗಮಿಸುತ್ತಾರೆ ಹಾಗಾಗಿ ಅಲ್ಲಿ ಕೆಲ ಔಷಧಿ ಅಂಗಡಿಯವರು ಪ್ರವಾಸಿಗರಿಗೆ 25 ರೂ. ನಿಂದ 30 ರೂ. ಪಡೆದು ಮಾಸ್ಕ್ ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ ಮಾರಾಟ ಮಾರುತ್ತಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ಔಷಧಿ ಅಂಗಡಿಯವರನ್ನು ಸ್ಥಳೀಯರು ವಿಚಾರಿಸಿದರೆ ಒಂದೆರಡು ಇದ್ದು ಅವುಗಳನ್ನು ಮಾರಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ.

ಸಪ್ಲೈ ಇಲ್ಲ: ತಾಲೂಕು ಕೇಂದ್ರದಲ್ಲಿ ಇರುವ ಮೆಡಿಕಲ್‌ ಶಾಪ್‌ಗಳಲ್ಲಿ ವಾರದ ಹಿಂದೆ ಐದು ರೂ.ಗೆ ಒಂದು ಮಾಸ್ಕ್ ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ ಮಾರಾಟ ಮಾರಲಾಗುತ್ತಿತ್ತು. ಈಗ ಖಾಲಿಯಾಗಿದೆ ಸರಿಯಾಗಿ ಸಪ್ಲೈ ಆಗುತ್ತಿಲ್ಲ, ಒಂದೆರಡು ಇರಬಹುದು ನೋಡುತ್ತೇನೆ ಬೆಲೆಯೂ ಸ್ವಲ್ಪ ಜಾಸ್ತಿಯಾಗಿದೆ ಎಂದು ರಾಗ ಎಳೆಯುತ್ತಾರೆ. ಇದಕ್ಕ ಗ್ರಾಹಕ ಸಕಾರಾತ್ಮಕವಾಗಿ ಸ್ಪಂದಿಸಿದರೆ ನೀಡುತ್ತಾರೆ ಇಲ್ಲದೆ ಹೋದರೆ ಈಗ ಬೇರೆಯವರು ತೆಗೆದುಕೊಂಡು ಹೋದರು ಎಂದು ಹೇಳುವುದನ್ನು ಮಾಮೂಲಾಗಿದೆ.

ಡೀಲರ್‌ ಡಿಮ್ಯಾಂಡ್‌ ಸೃಷ್ಟಿಸಿದ್ದಾರೆ: ಮಾಸ್ಕ್ ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ ಸರಬರಾಜಾಗುವ ಬಗ್ಗೆ ಒಳ ಹೊಕ್ಕು ನೋಡಿದರೆ ಔಷಧಿ ಅಂಗಡಿ ಅವರಿಗೆ ಸಕಾಲಕ್ಕೆ ಸರಬರಾಜು ಮಾಡದೆ ಡೀಲರ್‌ ಡಿಮ್ಯಾಂಡ್‌ ಸೃಷ್ಟಿಸಿಕೊಂಡಿದ್ದಾರೆ. ತಿಂಗಳ ಹಿಂದೆ ನೂರು ಮಾಸ್ಕ್ ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ ಕೊಂಡಾಗ 180 ರೂ. ನಿಂದ 200 ರೂ. ಪಡೆಯುತ್ತಿದ್ದ ಡೀಲರ್‌ ಈಗ 100 ಕ್ಕೆ 1,800 ರೂ. ನಿಂದ 2ಸಾವಿರ ರೂ. ಬೆಲೆ ಹೇಳುತ್ತಿದ್ದಾರೆ. ಆದರೆ ಜಿಎಸ್‌ಟಿ ಬಿಲ್‌ ನೀಡಲು ನಿರಾಕರಣೆ ಮಾಡುತ್ತಿದ್ದಾರೆ.

Advertisement

ಬಿಲ್‌ ಕೇಳಿದರೆ ನೋ ಸ್ಟಾಕ್‌: ಔಷಧಿ ಅಂಗಡಿ ಮಾಲೀಕ ಮಾಸ್ಕ್ ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ಗೆ ಬಿಲ್‌ ಕೇಳುತ್ತಾನೆ ಅವರಿಗೆ ನೋಸ್ಟಾಕ್‌ ಎಂದು ಹೇಳುತ್ತಾರೆ. ಇನ್ನೂ ಒತ್ತಡ ಹಾಕಿದರೆ ಒಂದು ದಿವಸ ಮೊದಲು ಮುಂಗಡವಾಗಿ ಹಣ ಬ್ಯಾಂಕ್‌ಗೆ ಪಾವತಿಸಿ ಇಲ್ಲವೇ ನಗದು ನೀಡಿದರೆ ಮರು ದಿವಸ ಅಂಗಡಿಗೆ ತಂದು ಕೊಡುತ್ತಿವೆ ಎನ್ನುತ್ತಿದ್ದಾರೆ ಡೀಲರ್‌ಗಳು. ಹೆಚ್ಚು ಹಣ ನೀಡುತ್ತೇವೆ ಎಂದರೂ ಒಂದು ಅಂಗಡಿಗೆ 100ಕ್ಕಿಂತ ಹೆಚ್ಚಿಗೆ ಮಾಸ್ಕ್ ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ ನೀಡುತ್ತಿಲ್ಲ.

ಸಾಲ ನೀಡುವುದು ನಿಂತು ಹೋಗಿದೆ: ತಿಂಗಳ ಹಿಂದೆ ಮಾಸ್ಕ್ ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ ಸರಬರಾಜು ಮಾಡುವ ಡೀಲರ್‌ ಕೇಳಿದಷ್ಟು ನೀಡಿ ಒಂದು ತಿಂಗಳ ನಂತರ ಅಂಗಡಿ ಮಾಲೀಕರಿಂದ ಹಣ ಪಡೆಯುತ್ತಿದ್ದರು. ಆದರೆ ಕೊರೊನಾ ವೈರೆಸ್‌ ಬಗ್ಗೆ ಮಾಧ್ಯಮಗಳಲ್ಲಿ ಬಂದ ಮೇಲೆ ಮಾಸ್ಕ್ ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ಗೆ ಎಲ್ಲಿಲ್ಲದ ಬೇಡಿಕೆ ಹೆಚ್ಚಿದೆ. ಹಾಗಾಗಿ ಈಗ ಸಾಲ ನೀಡುವುದನ್ನು ನಿಲ್ಲಿಸಿದ್ದಾರೆ. ಇದರಿಂದಾಗಿ ಗ್ರಾಹಕರಿಗೆ ತೊಂದರೆಯಾಗುತ್ತಿದೆ ಹೊರತು ನಮ್ಮಿಂದ ಯಾವುದೇ ತಪ್ಪಾಗುತ್ತಿಲ್ಲ ಎನ್ನುತ್ತಿದ್ದಾರೆ ಔಷಧಿ ಅಂಗಡಿ ಮಾಲೀಕರು.

ಜನೌಷಧಿ ಕೇಂದ್ರದಲ್ಲಿಯೂ ದೊರೆಯುತ್ತಿಲ್ಲ: ಕೆಲ ಖಾಸಗಿ ಔಷಧಿ ಅಂಗಡಿಯಲ್ಲಿ ಮಾಸ್ಕ್ ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ಗಳು ಹೆಚ್ಚು ಬೆಲೆಗೆ ಮಾರಾಟ ಆಗುತ್ತಿವೆ. ಇನ್ನು ಕೆಲವು ಕಡೆಯಲ್ಲಿ ದೊರೆಯುತ್ತಿಲ್ಲ. ಆದರೆ ಕೇಂದ್ರ ಸರ್ಕಾರವು ಬಡವರಿಗಾಗಿ ತೆರೆದಿರುವ ಜನೌಷಧಿ ಕೇಂದ್ರದಲ್ಲಿಯೂ ದೊರೆಯುತ್ತಿಲ್ಲ. ಹೆಚ್ಚುತ್ತಿರುವ ಬೆಲೆ ನಿಯಂತ್ರ ಮಾಡಬೇಕೆಂದರೆ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲು ಮುಂದಾಗಬೇಕಿದೆ.

ಮೆಡಿಕಲ್‌ ಶಾಪ್‌ ಮಾಲೀಕರು ಮಾಸ್ಕ್ ಹಾಗೂ ಹ್ಯಾಂಡ್‌ ಸ್ಯಾನಿಟೈಸರ್‌ಗಳನ್ನು ಎಂಆರ್‌ಪಿ ಬೆಲೆಗೆ ಮಾರಾಟ ಮಾಡಬೇಕು. ಹೆಚ್ಚು ಬೆಲೆಗೆ ಮಾರಾಟ ಮಾಡುತ್ತಿರುವ ದೂರುಗಳು ಬಂದರೆ ಜಿಲ್ಲಾ ಕೇಂದ್ರದಲ್ಲಿ ಇರುವ ಡ್ರಕ್ಸ್‌ ಕಂಟ್ರೋಲರ್‌ ವಿಭಾಗಕ್ಕೆ ಮಾಹಿತಿ ನೀಡಿ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತದೆ.
-ಡಾ.ಕಿಶೋರಕುಮಾರ, ತಾಲೂಕು ಆರೋಗ್ಯಾಧಿಕಾರಿ

ಶಾಲೆಯಲ್ಲಿ ಮಗನಿಗೆ ಮಾಸ್ಕ್ ಹಾಕಿಕೊಂಡು ಬರುವಂತೆ ಸೂಚನೆ ನೀಡಿದ್ದಾರೆ. 25 ರೂ. ನೀಡಿ ಔಷಧಿ ಅಂಗಡಿಯಲ್ಲಿ ಮಾಸ್ಕ್ ತಂದಿದ್ದೇನೆ. ಹೆಚ್ಚು ಹಣ ಪೀಕಸುತ್ತಿರುವವರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸಬೇಕಿದೆ.
-ಕನ್ಯಾಕುಮಾರಿ, ಗ್ರಾಹಕರು

* ಶಾಮಸುಂದರ್‌ ಕೆ. ಅಣ್ಣೇನಹಳ್ಳಿ

Advertisement

Udayavani is now on Telegram. Click here to join our channel and stay updated with the latest news.

Next