Advertisement
ಮುವಾನ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ವೇಳೆ ಗೋಡೆಗೆ ಗುದ್ದಿ ಸ್ಫೋಟಗೊಂಡ ವಿಮಾನದಲ್ಲಿ ಪ್ರಯಾಣಿಸಿದ್ದ 181 ಮಂದಿಯಲ್ಲಿ ಲೀ(32) ಮತ್ತು ಕ್ವನ್(25) ಎಂಬ ಇಬ್ಬರನ್ನು ಅವಶೇಷಗಳಡಿಯಿಂದ ಹೊರತೆಗೆದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಲೀಗೆ ಪ್ರಜ್ಞೆ ಬಂದ ಬಳಿಕ ಪುನರಾವರ್ತಿತವಾಗಿ ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಕ್ವನ್‌ಗೆ ತಲೆ, ಕಾಲು ಸೇರಿ ಹಲವು ಕಡೆ ಗಾಯಗಳಾಗಿದ್ದು, ಅಪಾಯವಿಲ್ಲ. ಆದರೂ ಮಾನಸಿಕವಾಗಿ ಆಘಾತವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇದೇ ವೇಳೆ, ದುರಂತದ ಬಗ್ಗೆ ತನಿಖೆ ನಡೆಯುತ್ತಿದ್ದು, ವಿಮಾನದ ಬ್ಲಾಕ್ ಬಾಕ್ಸ್‌ಗಳು ದೊರೆತಿದ್ದು ಇದರಿಂದ ಘಟನೆಯ ಮಾಹಿತಿ ಸಂಗ್ರಹಕ್ಕೆ ಸಹಾಯವಾಗಲಿದೆ. ಇನ್ನು ಘಟನೆ ಬೆನ್ನಲ್ಲೇ ದಕ್ಷಿಣ ಕೊರಿಯಾದ ತನ್ನಲ್ಲಿರುವ ಎಲ್ಲಾ ಬೋಯಿಂಗ್ 737-800 ವಿಮಾನಗಳ ಸುರಕ್ಷತಾ ತಪಾಸಣೆ ನಡೆಸುವುದಾಗಿ ಹೇಳಿದೆ. ನಿಲ್ದಾಣಕ್ಕೆ ವಾಪಸ್:
ಜೆಜು ಏರ್‌ನ ಮತ್ತೊಂದು ಬೋಯಿಂಗ್ 737-800 ವಿಮಾನ ಸೋಮವಾರ ತಾಂತ್ರಿಕ ದೋಷದಿಂದಾಗಿ ಟೇಕ್ ಆಫ್ ಆದ ನಿಮಿಷಗಳಲ್ಲೇ ಮತ್ತೆ ಸಿಯೋಲ್‌ನ ಗಿಂಪೊ ವಿಮಾನ ನಿಲ್ದಾಣಕ್ಕೆ ವಾಪಸ್ಸಾಗಿದೆ.