Advertisement

Maratha reservation; ಹಿಂಸಾಚಾರ ವಿರುದ್ಧ ಕಠಿನ ಕ್ರಮಕ್ಕೆ ಸೂಚನೆ: ಅಜಿತ್‌ ಪವಾರ್‌

07:00 PM Sep 03, 2023 | Team Udayavani |

ಮುಂಬಯಿ: ಮರಾಠಾ ಮೀಸಲಾತಿಗೆ ಆಗ್ರಹಿಸಿ ಜಾಲಾ° ಜಿಲ್ಲೆಯ ಅಂಬಾಡ್‌ ತಾಲೂಕಿನ ಅಂತರವಾಲಿಯಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರಿಂದ ಲಾಠಿಚಾರ್ಚ್‌, ಅಶ್ರುವಾಯು ಪ್ರಯೋಗ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಸೂಚಿಸಲಾಗಿದೆ.

Advertisement

ರಾಜ್ಯದ ಕೆಲವೆಡೆ ಬಸ್‌ಗಳ ಮೇಲೆ ಕಲ್ಲು ತೂರಾಟ, ಬೆಂಕಿ ಹಚ್ಚುವಿಕೆ ಮತ್ತು ಹಿಂಸಾಚಾರದ ಘಟನೆಗಳು ನಡೆಯುತ್ತಿದ್ದು, ಅವುಗಳನ್ನು ತತ್‌ಕ್ಷಣವೇ ನಿಲ್ಲಿಸಬೇಕು ಎಂದು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ತಿಳಿಸಿದ್ದಾರೆ.

ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮರಾಠ ಸಮುದಾಯದ ಮುಖಂಡರೊಂದಿಗೆ ಚರ್ಚಿಸಲು ರಾಜ್ಯ ಸರಕಾರ ಸಿದ್ಧವಿದೆ. ಕಲ್ಲು ತೂರಾಟ, ಬೆಂಕಿ ಹಚ್ಚುವಿಕೆ, ಹಿಂಸಾಚಾರದಲ್ಲಿ ನಮ್ಮದೇ ರಾಜ್ಯದ ಆಸ್ತಿಪಾಸ್ತಿಗೆ ಹಾನಿಯಾಗುತ್ತಿದೆ. ಈ ಆಂದೋಲನದಿಂದ ನಾಗರಿಕರಿಗೆ ತೊಂದರೆಯಾಗುವ ಆತಂಕವಿದೆ. ಆದ್ದರಿಂದ ಕಲ್ಲು ತೂರಾಟ, ಬೆಂಕಿ ಹಚ್ಚುವ ಹಿಂಸಾಚಾರ ತಪ್ಪಿಸಬೇಕು. ಹಿಂಸಾಚಾರವನ್ನು ತಡೆಯಲು ಮರಾಠಾ ಸಮುದಾಯ, ಮುಖಂಡರು, ಕಾರ್ಯಕರ್ತರು, ಮರಾಠ ಸಂಘಟನೆಗಳ ಕಾರ್ಯಕರ್ತರು ಮುಂದಾಗಬೇಕು ಎಂದು ಮನವಿ ಮಾಡುತ್ತೇನೆ. ನಾವೆಲ್ಲರೂ ಸಹಕರಿಸಿ ರಾಜ್ಯದಲ್ಲಿ ಶಾಂತಿ ಮತ್ತು ಕಾನೂನು ಸುವ್ಯವಸ್ಥೆ ಕಾಪಾಡಲು ಪ್ರಯತ್ನಿಸೋಣ ಎಂದು ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ತಿಳಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next