Advertisement

Maharashtra; ಫ‌ಡ್ನವೀಸ್‌ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!

02:00 AM Dec 22, 2024 | Team Udayavani |

ಮುಂಬಯಿ: ಮಹಾರಾಷ್ಟ್ರ ಸಿಎಂ ದೇವೇಂದ್ರ ಫ‌ಡ್ನವೀಸ್‌ ನೇತೃತ್ವದ ಸಂಪುಟದ ಸಚಿವರಿಗೆ ಶನಿವಾರ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. ಗೃಹ ಖಾತೆ ನಿರೀಕ್ಷೆಯಲ್ಲಿ ಇದ್ದ ಡಿಸಿಎಂ ಏಕನಾಥ ಶಿಂಧೆಯವರಿಗೆ ನಗರಾಭಿವೃದ್ಧಿ, ವಸತಿ, ಲೋಕೋಪಯೋಗಿ ಖಾತೆಗಳು ಲಭಿಸಿವೆ. ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ನಿರೀಕ್ಷೆಯಂತೆ ಗೃಹ ಖಾತೆಯನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ. ಜತೆಗೆ ಇಂಧನ ಹಾಗೂ ಕಾನೂನು ಖಾತೆಯನ್ನೂ ಇರಿಸಿಕೊಂಡಿದ್ದಾರೆ.

Advertisement

ಮತ್ತೂಬ್ಬ ಡಿಸಿಎಂ ಅಜಿತ್‌ ಪವಾರ್‌ಗೆ ವಿತ್ತ ಖಾತೆ ನೀಡಲಾಗಿದೆ. ಬಿಜೆಪಿಯ ಚಂದ್ರಶೇಖರ್‌ ಬಾವಂಕುಲೆಗೆ ಕಂದಾಯ, ಶಿವಸೇನೆಯ ದಾದಾಜಿ ಭುಸೆಗೆ ಶಾಲಾ ಶಿಕ್ಷಣ ಖಾತೆ ನೀಡಲಾಗಿದೆ. ಜಲಸಂಪನ್ಮೂಲ ಖಾತೆಯನ್ನು ಬಿಜೆಪಿಯ ಇಬ್ಬರು ಸಚಿವರಾಗಿರುವ ರಾಧಾಕೃಷ್ಣ ವಿಖೆ ಪಾಟೀಲ್‌ ಮತ್ತು ಗಿರೀಶ್‌ ಮಹಾಜನ್‌ ನಡುವೆ ಹಂಚಿಕೆ ಮಾಡಲಾಗಿದೆ. ಗೃಹ ಖಾತೆ ತಮಗೇ ಬೇಕೆಂದು ಮಹಾರಾಷ್ಟ್ರ ಚುನಾವಣೆ ಫ‌ಲಿತಾಂಶ ಪ್ರಕಟವಾದ ದಿನ (ನ.23)ದಿಂದ ಏಕನಾಥ ಶಿಂಧೆ ಪಟ್ಟುಹಿಡಿದ್ದರು. ಡಿ.5ರಂದು ಫ‌ಡ್ನವೀಸ್‌, ಶಿಂಧೆ, ಅಜಿತ್‌ ಪವಾರ್‌ ಸಿಎಂ, ಡಿಸಿಎಂಗಳಾಗಿ ಪ್ರಮಾಣ ಸ್ವೀಕರಿಸಿದ್ದರೆ, ಡಿ.15ರಂದು 39 ಮಂದಿ ಸಚಿವರು ಪ್ರಮಾಣ ವಚನ ಸ್ವೀಕರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next