Advertisement

NCP Vs NCP: ಶರದ್‌ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್‌ ಬಣ

10:42 PM Nov 24, 2024 | Team Udayavani |

ಮುಂಬೈ: ಎನ್‌ಸಿಪಿಯ ಎರಡೂ ಬಣಗಳ ನಡುವಿನ ನೇರ ಸ್ಪರ್ಧೆಯಲ್ಲಿ ಶರದ್‌ ಪವಾರ್‌ ಬಣದ 29 ಅಭ್ಯರ್ಥಿಗಳನ್ನು ಅಜಿತ್‌ ಪವಾರ್‌ ಬಣವು ಸೋಲಿಸಿದೆ.

Advertisement

6 ಕ್ಷೇತ್ರಗಳಲ್ಲಿ ಶರದ್‌ ಪವಾರ್‌ ಎನ್‌ಸಿಪಿ ಮಾತ್ರ ಗೆದ್ದಿದೆ. 59 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಅಜಿತ್‌ ಪವಾರ್‌ ನೇತೃತ್ವ ಎನ್‌ಸಿಪಿ 41 ಕ್ಷೇತ್ರಗಳನ್ನು ಗೆದ್ದುಕೊಂಡಿದೆ.

ಆದರೆ, ಭಾರೀ ಸೋಲು ಕಂಡಿರುವ ಶರದ್‌ ಪವಾರ್‌ ನೇತೃತ್ವದ ಎನ್‌ಸಿಪಿ ಸ್ಪರ್ಧಿಸಿದ್ದ 86 ಕ್ಷೇತ್ರಗಳ ಪೈಕಿ 10 ಕ್ಷೇತ್ರ ಗೆದ್ದುಕೊಳ್ಳಲು ಮಾತ್ರವೇ ಸಾಧ್ಯವಾಗಿದೆ.

ವಿಶೇಷ ಎಂದರೆ, ಕೆಲವು ತಿಂಗಳ ಹಿಂದೆ ನಡೆದ ಲೋಕಸಭೆ ಚುನಾವಣೆಯಲ್ಲಿ ಅಜಿತ್‌ ಪವಾರ್‌ ನೇತೃತ್ವದ ಎನ್‌ಸಿಪಿಯು, ಶರದ್‌ ಬಣದ ವಿರುದ್ಧ ಸೋಲು ಕಂಡಿತ್ತು. ಬಾರಾಮತಿ ಲೋಕಸಭೆ ಕ್ಷೇತ್ರದಲ್ಲಿ ಶರದ್‌ ಪವಾರ್‌ ಅವರ ಪುತ್ರಿ ಸುಪ್ರಿಯಾ ಸುಳೆ ಅವರು, ಅಜಿತ್‌ ಅವರ ಪತ್ನಿಯನ್ನು ಸೋಲಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next