Advertisement
ಜಿಲ್ಲಾಧಿಕಾರಿ ಅವರನ್ನೇ ಆಡಳಿತಾಧಿಕಾರಿ ಯಾಗಿ ಸರಕಾರ ನೇಮಕ ಮಾಡುವುದು ಕ್ರಮ. ಮುಂದಿನ ಚುನಾವಣೆ ನಡೆಯುವವರೆಗೆ ಡಿಸಿ ಅವರೇ ಪಾಲಿಕೆ ಉಸ್ತುವಾರಿ ನೋಡಿಕೊಳ್ಳಲಿದ್ದಾರೆ. ಜನರು ತಮ್ಮ ಸಮಸ್ಯೆ-ಸವಾಲುಗಳ ಬಗ್ಗೆ ಜಿಲ್ಲಾಧಿಕಾರಿ/ಆಯುಕ್ತರು ಸಹಿತ ಅಧಿಕಾರಿ ವಲಯಕ್ಕೆ ದೂರು ಸಲ್ಲಿಸಿ ಪರಿಹಾರ ಕಂಡುಕೊಳ್ಳಬೇಕು.
Related Articles
Advertisement
2019ರಲ್ಲಿ ಮಾ.7ಕ್ಕೆ ಮತ್ತೆ ಚುನಾವಣೆ ನಡೆಯಬೇಕಿತ್ತು. ಆದರೆ, ವಾರ್ಡ್ ಮೀಸಲಾತಿ ಪ್ರಶ್ನಿಸಿ ಕೆಲವರು ನ್ಯಾಯಾಲಯದ ಮೆಟ್ಟಿಲೇರಿದ ಪರಿಣಾಮ ಚುನಾವಣೆ ನಡೆದಿರಲಿಲ್ಲ. ಮೀಸಲಾತಿ ವಿವಾದವನ್ನು ಬಗೆಹರಿಸಿ ಚುನಾವಣೆಯನ್ನು ಅ. 31ರೊಳಗೆ ಪೂರ್ಣಗೊಳಿಸಿ, ನ. 15ರೊಳಗೆ ಹೊಸ ಆಡಳಿತ ವ್ಯವಸ್ಥೆ ಸ್ಥಾಪನೆಯಾಗಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ಆ. 27ರಂದು ನಿರ್ದೇಶನ ನೀಡಿತ್ತು. ಕೊನೆಗೆ, ನ. 12ರಂದು ಮತದಾನ ನಡೆದಿತ್ತು. ಈ ಬಾರಿಯೂ ಮೀಸಲು ಬದಲಾವಣೆ ಕಡ್ಡಾಯ
ಪಾಲಿಕೆ ಚುನಾವಣೆ ನಡೆಯುವಾಗ ಪ್ರತೀ 10 ವರ್ಷಕ್ಕೊಮ್ಮೆ ವಾರ್ಡ್ ಪುನರ್ ವಿಂಗಡನೆ ಮಾಡಬೇಕಾಗುತ್ತದೆ. ಆದರೆ, 2019ರಲ್ಲಿ ವಾರ್ಡ್ ವಿಂಗಡನೆ ಆಗಿರುವುದರಿಂದ ಈ ಬಾರಿ ವಾರ್ಡ್ ವಿಂಗಡನೆ, ಸೇರ್ಪಡೆ ಇಲ್ಲ. ಆದರೆ, ಪ್ರತೀ 5 ವರ್ಷಕ್ಕೊಮ್ಮೆ ಪಾಲಿಕೆ ವಾರ್ಡ್ ಮೀಸಲಾತಿ ಬದಲಾಗಬೇಕು. ಅದು ಈ ಬಾರಿ ನಡೆಯಲಿದೆ. ಕೆಲವು ಹಾಲಿ ಕಾರ್ಪೋರೆಟರ್ಗಳ ಮೀಸಲಾತಿ ಬದಲಾಗುವ ಸಾಧ್ಯತೆ ಇದೆ. ಪಕ್ಷಗಳ ಬಲಾಬಲ ಹೀಗಿದೆ..
2019ರ ನ. 12ಕ್ಕೆ ಪಾಲಿಕೆ ಚುನಾವಣೆ ನಡೆದಿದ್ದು ಬಿಜೆಪಿ 44, ಕಾಂಗ್ರೆಸ್ 14 ಹಾಗೂ ಎಸ್ಡಿಪಿಐ 2 ಸ್ಥಾನಗಳನ್ನು ಪಡೆದಿತ್ತು. ಇದಕ್ಕೂ ಮುನ್ನ 2013ರಲ್ಲಿ ಕಾಂಗ್ರೆಸ್ 35, ಬಿಜೆಪಿ 20, ಜೆಡಿಎಸ್ 2, ಸಿಪಿಎಂ 1, ಎಸ್ಡಿಪಿಐ 1 ಹಾಗೂ ಓರ್ವ ಪಕ್ಷೇತರ ಸದಸ್ಯರನ್ನು ಹೊಂದಿತ್ತು. ಪಾಲಿಕೆಯಲ್ಲಿ ಕಳೆದ ಬಾರಿ ಶೇ.50 ಸ್ಥಾನ ಮಹಿಳೆಯರಿಗೆ ಮೀಸಲಾಗಿತ್ತು. 60 ಸ್ಥಾನಗಳನ್ನು ಹೊಂದಿರುವ ಪಾಲಿಕೆಯಲ್ಲಿ 30 ಸ್ಥಾನಗಳು ಮಹಿಳೆಯರಿಗೆ ಮೀಸಲು. -ದಿನೇಶ್ ಇರಾ