Advertisement
ಮರಗಳಿಂದ ಬೀಳುವ ತರಗೆಲೆಗಳನ್ನು ಗುಡಿಸಿ ತೆರವು ಮಾಡುವುದು ಹೊರತು ಪಡಿಸಿದರೆ ಇತರ ಯಾವುದೇ ಕೆಲಸಗಳು ನಡೆಯುತ್ತಿಲ್ಲ. ಪಾರ್ಕ್ ಒಳಗಿನ ಫೌಂಟೇನ್ಗಳು ಕಾರ್ಯ ನಿಲ್ಲಿಸಿದ್ದು, ಅದರಲ್ಲಿನ ನೀರು ಕಲುಷಿತಗೊಂಡಿದೆ. ಕೆಲವು ಕಲ್ಲು ಬೆಂಚುಗಳಲ್ಲಿ ಕುಳಿತು ಕೊಳ್ಳಲು ಜನರಿಗೆ ಸಾಧ್ಯವಿಲ್ಲ. ಸಣ್ಣ ಗ್ಯಾಲರಿಗಳೂ ಕುಳಿತುಕೊಳ್ಳಲು ಯೋಗ್ಯವಿಲ್ಲ. ಮಳೆಗಾಲದಲ್ಲಿ ಹಿಡಿದ ಪಾಚಿ ಹಾಗೇ ಒಣಗಿ ಹೋಗಿದ್ದು, ಬಣ್ಣ ಬಳಿದು ಕುಳಿತುಕೊಳ್ಳಲು ಯೋಗ್ಯವಾಗುವಂತೆ ಮಾಡಬೇಕಿದೆ. ಪಾರ್ಕ್ನ ಆವರಣದ ಗೋಡೆ ಬದಿಯಲ್ಲಿ ಪೊದೆಗಳ ರೀತಿಯಲ್ಲಿ ಗಿಡಗಳು ಬೆಳೆದಿದ್ದು, ತರಗೆಲೆಗಳ ನಡುವೆ ನೀರು, ತುಂಪು ಪಾನೀಯಗಳನ್ನು ಕುಡಿದು ಎಸೆದ ಬಾಟಲಿಗಳು ಕೂಡಾ ಬಿದ್ದಿವೆ. ಕೆಲವು ಕಡೆಗಳಲ್ಲಿ ಹುತ್ತಗಳೂ ಬೆಳೆದಿವೆ.
Related Articles
ಜಿಂಕೆವನಕ್ಕೆ ಪ್ರವೇಶ ಶುಲ್ಕ ಇರುವುದರಿಂದ ಕದ್ರಿಯ ಮುಖ್ಯ ಪಾರ್ಕ್ಗೆ ಹೋಲಿಸಿದರೆ ಭೇಟಿ ನೀಡುವವರ ಸಂಖ್ಯೆಯೂ ಕಡಿಮೆಯಿದೆ. ಫೋಟೋ ಶೂಟ್- ವೀಡಿಯೋ ಶೂಟಿಂಗ್ಗಳಿಗೆ ದುಬಾರಿ ಶುಲ್ಕವೂ ಇದೆ. ಈ ಕಾರಣಕ್ಕಾಗಿ ಬಹುತೇಕ ಮಂದಿ ಸ್ಮಾರ್ಟ್ ಸಿಟಿಯಿಂದ ಅಭಿವೃದ್ಧಿ ಪಡಿಸಲಾದ ರಸ್ತೆಯ ಇಕ್ಕೆಲಗಳಲ್ಲಿಯೇ ಫೋಟೋ ಶೂಟ್ಗಳನ್ನು ಮಾಡುತ್ತಾರೆ.
Advertisement
ಕೆಲಸ ನಿಲ್ಲಿಸಿರುವ ಸಂಗೀತ ಕಾರಂಜಿ2.30 ಕೋ.ರೂ. ವೆಚ್ಚದಲ್ಲಿ ಪಾರ್ಕ್ನಲ್ಲಿ ಅಳವಡಿಸಲಾಗಿರುವ ಸಂಗೀತ ಕಾರಂಜಿ ತನ್ನ ಕೆಲಸ ನಿಲ್ಲಿಸಿ ವರ್ಷಗಳೇ ಕಳೆದಿದೆ. ಸಂಗೀತ ಕಾರಂಜಿಯನ್ನು ಮತ್ತೆ ಆರಂಭಿಸುವ ನಿಟ್ಟಿನಲ್ಲಿ ನಡೆಸಿದ ಪ್ರಯತ್ನಗಳೆಲ್ಲ ವಿಫಲವಾಗಿದ್ದು, ಕಾರಂಜಿಗಾಗಿ ಅಳವಡಿಸಿದ ಉಪಕರಣ ಮಳೆ ಬಿಸಿಲಿಗೆ ತುಕ್ಕು ಹಿಡಿಯುತ್ತಿದೆ. ಇವುಗಳಿಗಾಗಿ ಮಾಡಿದ ಕೋಟ್ಯಂತರ ರೂಪಾಯಿ ವ್ಯರ್ಥವಾದಂತಾಗಿದೆ.
ಪಾರ್ಕ್ನ ಒಳಗೆ ರೇಡಿಯೋ ಸ್ಟೇಷನ್ ಒಂದಿದೆ. ಆದರೆ ಅದರೊಳಗೆ ರೇಡಿಯೋ ಪ್ರಸಾರಕ್ಕೆ ಸಂಬಂಧಿಸಿದಂತೆ ಯಾವುದೇ ವ್ಯವಸ್ಥೆಗಳು ಇಲ್ಲ. ಯಾರೋ ಅದನ್ನು ಕೋಣೆಯಾಗಿ ಉಪಯೋಗಿಸುತ್ತಿದ್ದು, ಆಹಾರ ಸೇವನೆ ಮಾಡಿರುವುದು, ಬಾಟಲುಗಳನ್ನು ಇಟ್ಟಿರುವುದು ಕಂಡು ಬರುತ್ತದೆ. ಹೊರಗಡೆಯಿಂದ ರೇಡಿಯೋ ಸ್ಟೇಶನ್ ಎಂದು ಬರೆಯಲಾಗಿದ್ದು, ಇದನ್ನು ಅಭಿವೃದ್ಧಿ ಪಡಿಸಿ, ರೇಡಿಯೋ ಪ್ರಸಾರವನ್ನು ಮಾಡಬೇಕು ಎನ್ನುವ ಆಗ್ರಹ ಪಾರ್ಕ್ ಬಳಕೆದಾರರದ್ದಾಗಿದೆ. ಪಾಕ್ನಲ್ಲಿ ಗಿಡಮರಗಳಿದ್ದು, ತಂಪಾದ ವಾತಾವರಣವೂ ಇದೆ. ಆದರೆ ಸುತ್ತಲಿನ ಪ್ರದೇಶವನ್ನು ನಿರ್ವಹಣೆಯಾಗುತ್ತಿಲ್ಲ. ಗ್ಯಾಲರಿಗಳು ಕುಳಿತು ಕೊಳ್ಳಲು ಯೋಗ್ಯವಾಗಿಲ್ಲ. ಕನಿಷ್ಠ 2 ವರ್ಷಕ್ಕೊಮ್ಮೆಯಾದರೂ, ಸುಣ್ಣ ಬಣ್ಣ ಬಳಿದು ಸುಂದರವಾಗಿ ಕಾಣುವಂತೆ ಮಾಡಬೇಕು.
– ಕಾರ್ತಿಕ್, ಪಾರ್ಕ್ಬಳಕೆದಾರರು -ಭರತ್ ಶೆಟ್ಟಿಗಾರ್