Advertisement

Mangaluru: ಪದ್ಮಶ್ರೀ ಬೇಳೇರಿ ಸಂರಕ್ಷಿತ ಭತ್ತದ 10 ತಳಿ ಸಂವರ್ಧನೆ

11:58 PM Nov 08, 2024 | Team Udayavani |

ಮಂಗಳೂರು: ಭತ್ತದ ತಳಿಗಳ ಸಂರಕ್ಷಣೆಗಾಗಿ ಪದ್ಮಶ್ರೀ ಪಡೆದವರು ಕಾಸರಗೋಡಿನ ಬೇಳೇರಿ ಸತ್ಯನಾರಾಯಣ ಅವರು. ಅವರಿಂದಲೇ ಸಾಂಪ್ರದಾಯಿಕ ಭತ್ತದ ತಳಿಗಳನ್ನು ಕೆವಿಕೆಯಲ್ಲಿ ಯಶಸ್ವಿಯಾಗಿ ಬೆಳೆದು ಕ್ಷೇತ್ರೋತ್ಸವವನ್ನೂ ನಡೆಸಿ ರೈತರಿಗೆ ಇವುಗಳ ಮಹತ್ವ ಸಾರುವ ಕೆಲಸ ನಡೆದಿದೆ.

Advertisement

ಸತ್ಯನಾರಾಯಣ ಬೇಳೇರಿ ಬಳಿಯಿಂದ 10 ಭತ್ತದ ತಳಿಗಳನ್ನು ಪಡೆದು ಕೆವಿಕೆ ಪ್ರಯೋಗದ ಗದ್ದೆಗಳಲ್ಲಿ ಬೆಳೆಸಿದ್ದು, ಕೆಲ ದಿನಗಳ ಹಿಂದೆಯಷ್ಟೇ ಕಟಾವು ನಡೆಸಿದ್ದಾರೆ. ಆ ಬಳಿಕ ಕೆಲವು ಪ್ರಗತಿಪರ ರೈತರನ್ನೂ ಕರೆದು ಅವರಿಗೆ ಈ ಭತ್ತ ತಳಿಗಳನ್ನು ತೋರಿಸಿ ಕ್ಷೇತ್ರೋತ್ಸವ ನಡೆಸಿದ್ದಾರೆ.

10 ಭತ್ತದ ತಳಿಗಳು ಯಾವ್ಯಾವುವು?
-ಕರಿಕಗ್ಗ: ಕರ್ನಾಟಕ ಮೂಲದ ತಳಿ. ಉಪ್ಪು ನೀರಿನ ನೆರೆ ಹಾವಳಿ ತಡೆದುಕೊಳ್ಳುವ ಗುಣ ಹೊಂದಿದ್ದು, ಹೆಚ್ಚು ಪ್ರೊಟೀನ್‌, ಪೋಷಕಾಂಶ ಹೊಂದಿದ್ದು, ಕುಚ್ಚಲಕ್ಕಿಗೆ ಸೂಕ್ತ. ತವಳ ಕಣ್ಣನ್‌: ಕೇರಳ ಮೂಲದ ನೆರೆ ನಿರೋಧಕ ತಳಿ.
– ನೆರೆಗುಳಿ: ತಗ್ಗು ನೆರೆ ಪ್ರದೇಶಕ್ಕೆ ಸೂಕ್ತ.
-ಜುಗಲ್‌: ಪಶ್ಚಿಮ ಬಂಗಾಳ ಮೂಲವಾಗಿದ್ದು, ಒಂದು ಭತ್ತದ ಕಾಳಿನಲ್ಲಿ ಎರಡು ಅಕ್ಕಿ ಕಾಳು ಇರುವುದು ವಿಶೇಷ.
-ಕಳಮೆ: ಕರ್ನಾಟಕ ಮೂಲದ್ದಾಗಿದ್ದು, ಕರಾವಳಿಯ ûಾರ ಪ್ರದೇಶಕ್ಕೆ ಸೂಕ್ತವಾಗಿದೆ.
-ಬರ ನೆಲ್ಲು: ಬರ ನಿರೋಧಕ ಗುಣ ಹೊಂದಿದೆ.
-ನವರ: ಕೇರಳ ರಾಜ್ಯದ ಅಲ್ವಾವಧಿ ತಳಿ. 70-75 ದಿನಗಳ ಫಸಲು ಅವಧಿ ಹೊಂದಿದೆ.
– ರಾಜಕಯಮೆ: ಕರ್ನಾಟಕ ಮೂಲದ ಎತ್ತರದ ತಳಿ. ಕಡಿಮೆ ಇಳುವರಿ, ಅಕ್ಕಿ ಹಳೆಯದಾದಂತೆ ರುಚಿ ಹೆಚ್ಚು.
-ರಕ್ತಶಾಲಿ ತಳಿ: ಕೇರಳ ಮೂಲಜ ಕೆಂಪಕ್ಕಿ ತಳಿ. ಔಷಧೀಯ ಗುಣ ಹೊಂದಿದ್ದು, ರಕ್ತ ಕೊರತೆ ನೀಗಿಸುತ್ತದೆ.
ಗಂಧಶಾಲೆ: ಕೇರಳದ ಸುಗಂಧಿತ ತಳಿ.

ಕೆವಿಕೆ ವಿಜ್ಞಾನಿಗಳೇ ಆಸಕ್ತಿ ತೋರಿಸಿ, ಈ ಸುಗಂಧಿತ, ಔಷಧೀಯ ಗುಣಗಳುಳ್ಳ ವಿಶೇಷ ಪಾರಂಪರಿಕ ತಳಿಗಳನ್ನು ಸಂವರ್ಧಿಸುವ ಕೆಲಸ ಕೈಗೆತ್ತಿಕೊಂಡರು. ಇದನ್ನು ಇನ್ನಷ್ಟು ಸಂಶೋಧನೆ ಮಾಡಿ ಭತ್ತದ ತಳಿಗಳನ್ನು ಪ್ರಸಾರ ಮಾಡುವ ಕೆಲಸವನ್ನು ಕೆವಿಕೆ ಹಾಗೂ ಈ ಭಾಗದ ಕೃಷಿಕರು ಮಾಡುತ್ತಿರುವುದು ಸ್ವಾಗತಾರ್ಹ.
-ಪದ್ಮಶ್ರೀ ಬೇಳೇರಿ ಸತ್ಯನಾರಾಯಣ,
ಭತ್ತ ಬೆಳೆ ಸಂರಕ್ಷಕರು

Advertisement

Udayavani is now on Telegram. Click here to join our channel and stay updated with the latest news.

Next