Advertisement

ಮಂಡೋಳಿಯ 3 ದೇವಸ್ಥಾನ ಜೀರ್ಣೋದ್ಧಾರ

04:26 PM Apr 04, 2022 | Team Udayavani |

ಬೆಳಗಾವಿ: ಮಂಡೋಳಿ ಗ್ರಾಮದ 3 ಪುರಾತನ ದೇವಸ್ಥಾನಗಳ ಅಭಿವೃದ್ಧಿಗಾಗಿ ಶಾಸಕಿ ಲಕ್ಷ್ಮೀ ಹೆಬ್ಟಾಳಕರ ಅವರು 1.50 ಕೋಟಿ ರೂ. ಅನುದಾನ ಬಿಡುಗಡೆ ಮಾಡಿಸಿದ್ದು, ಯುಗಾದಿ ಹಬ್ಬದಂದು ಜೀರ್ಣೋದ್ಧಾರ ಕಾರ್ಯಕ್ರಮಕ್ಕೆ ಪೂಜೆ ನೆರವೇರಿಸಿದರು.

Advertisement

ತಾಲೂಕಿನ ಮಂಡೋಳಿ ಗ್ರಾಮದ ಮೂರು ಪುರಾತನ ದೇವಸ್ಥಾನಗಳಾದ ಶ್ರೀ ಮಾರುತಿ ಮಂದಿರ, ಶ್ರೀ ಕಲ್ಮೇಶ್ವರ ಮಂದಿರ ಹಾಗೂ ಶ್ರೀ ವಿಠ್ಠಲ ರುಕ್ಮಾಯಿ ಮಂದಿರ ಜೀರ್ಣೋದ್ಧಾರ ಕಾಮಗಾರಿಗೆ ಚಾಲನೆ ನೀಡಿದರು.

ದೇವಸ್ಥಾನಗಳ ಜೀರ್ಣೋದ್ಧಾರ ಮಾಡುವ ಸೇವೆಯ ಭಾಗ್ಯ ನನ್ನ ಪಾಲಿಗೆ ಬಂದಿದ್ದು, ಆ ದೇವರ ಇಚ್ಛೆಯೇ ಆಗಿದೆ. ನೀವೆಲ್ಲ ಸೇರಿ ಈ ಸೇವಾ ಕಾರ್ಯದ ಜವಾಬ್ದಾರಿ ನನಗೆ ವಹಿಸಿರುವುದಕ್ಕೆ ಆಭಾರಿಯಾಗಿದ್ದೇನೆ ಎಂದು ಭಾವುಕರಾಗಿ ನುಡಿದರು.

ಮಂಡೋಳಿ ಗ್ರಾಮದಲ್ಲಿ ನಾವೆಲ್ಲರೂ ಸೇರಿ ಭವ್ಯ ಮಂದಿರ ನಿರ್ಮಿಸೋಣ. ಈಗ ಮಂದಿರ ನಿರ್ಮಾಣಕ್ಕೆ ನಿಧಿ ಮಂಜೂರಾಗಿರುವುದು ಸಾಕಾಗದಿದ್ದರೆ ಮತ್ತಷ್ಟು ನಿಧಿ ತರುತ್ತೇನೆ. ಆದರೆ ಈ ಪುಣ್ಯ ಕಾರ್ಯದಲ್ಲಿ ಸಮಸ್ತ ಗ್ರಾಮಸ್ಥರು ಕೈಜೋಡಿಸಲಿ. ಮನೆ ಮಗಳಾಗಿ ನನ್ನ ಜವಾಬ್ದಾರಿಯನ್ನು ಮನಃಪೂರ್ವಕವಾಗಿ ನಿಭಾಯಿಸುತ್ತೇನೆ ಎಂದು ಹೆಬ್ಟಾಳಕರ ಆಶ್ವಾಸನೆ ನೀಡಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರಕ್ಕೆ ರಾಜ್ಯ ಸರ್ಕಾರದಿಂದ ಮಂಜೂರಾದ 10 ಕೋಟಿ ರೂ. ಅನುದಾನವನ್ನು ವಿವಿಧ ಇಲಾಖೆಗಳಿಗೆ ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದು ತಿಳಿಸಿ, ಸರ್ಕಾರದ ಸುತ್ತೋಲೆಯನ್ನು ಹೆಬ್ಟಾಳಕರ ಓದಿದರು. ಇನ್ನು ಅಲ್ಪಸಂಖ್ಯಾತರ ಕಲ್ಯಾಣ ನಿಧಿಯಡಿ ಹಲಗಾ ಗ್ರಾಮದ ಜೈನ ಬಸದಿಗಾಗಿ 50 ಲಕ್ಷ, ಮುತ್ನಾಳ ಜೈನ ಬಸದಿಗಾಗಿ 50 ಲಕ್ಷ, ಮಣ್ಣೂರ ಜೈನ ಬಸದಿಗಾಗಿ 50 ಲಕ್ಷ ಹಾಗೂ ಹಲವಾರು ಸಮುದಾಯ ಭವನಕ್ಕಾಗಿ ನಿಧಿ ಮಂಜೂರು ಮಾಡಲಾಗಿದೆ ಎಂದು ಹೇಳಿದರು.

Advertisement

ರಾಜಹಂಸಗಢ ಕೋಟೆಯಲ್ಲಿ ಮೂರ್ತಿ ಸ್ಥಾಪನೆಗಾಗಿ ಮೂರ್ತಿ ತರಿಸುವ ಕಾರ್ಯ ಏ. 6ರಂದು ಆರಂಭವಾಗಲಿದೆ. ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯ ಸಾಮಗ್ರಿಗಳು ಸುಮಾರು 6ರಿಂದ 7 ಲಾರಿಗಳಲ್ಲಿ ಆಗಮಿಸಲಿವೆ. ಶಿವಾಜಿ ಮಹಾರಾಜರ ಪಾದಗಳೇ ನನಗಿಂತ ಎತ್ತರವಾಗಿವೆ. ಅಷ್ಟು ಬೃಹತ್ತಾದ ಮೂರ್ತಿ ಸ್ಥಾಪನೆಯಾಗಲಿದೆ ಎಂದು ಮಾಹಿತಿ ನೀಡಿದರು.

ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಹಾಗೂ ಎನ್‌ಸಿಪಿ ನಾಯಕ ಶರದ ಪವಾರ, ಮಾಜಿ ಮುಖ್ಯಮಂತ್ರಿ ಅಶೋಕ ಚವಾಣ, ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಹಾಗೂ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ ಅವರನ್ನು ಆಹ್ವಾನಿಸಿ ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ಅನಾವರಣಗೊಳಿಸಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಚನ್ನರಾಜ ಹಟ್ಟಿಹೊಳಿ ಮಾತನಾಡಿ, ನಾಲ್ಕು ವರ್ಷಗಳಲ್ಲಿ ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾಮಗಾರಿಗಳು ಪೂರ್ಣಗೊಂಡಿವೆ. ಆದರೆ ಇದನ್ನು ಸಹಿಸದ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಅನಗತ್ಯವಾಗಿ ಎಲ್ಲದರಲ್ಲೂ ರಾಜಕೀಯ ತರುತ್ತಿದ್ದಾರೆ. ನಾವು- ನೀವೆಲ್ಲ ಸೇರಿ ಅಂಥವರನ್ನು ದೂರ ಇಡೋಣ ಎಂದು ಹೇಳಿದರು.

ಜಿಲ್ಲಾ ಯುವ ಕಾಂಗ್ರೆಸ್‌ ಉಪಾಧ್ಯಕ್ಷ ಮೃಣಾಲ ಹೆಬ್ಟಾಳಕರ ಮಾತನಾಡಿ, ಲಕ್ಷ್ಮೀ ಹೆಬ್ಟಾಳಕರ ಶಾಸಕಿಯಾಗಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮುಂದಿನ ಬಾರಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಲಿದ್ದು, ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುವುದು ಎಂದು ನುಡಿದರು.

ಎಪಿಎಂಸಿ ಅಧ್ಯಕ್ಷ ಯುವರಾಜ ಕದಮ, ಲಕ್ಷ್ಮೀ ಕಣಬರಕರ, ಮಹಾದೇವ ಪಾಟೀಲ, ಕೃಷ್ಣಾ ಶಹಾಪುರಕರ, ರೂಪೇಶ ಗೋಡ್ಸೆ, ಮಲ್ಲೇಶಿ ಮುತಗೇಕರ, ನಾರಾಯಣ ಫಗರೆ, ಶಿವಾಜಿ ಚಲವೇಟಕರ, ಎಂ.ಕೆ. ಪಾಟೀಲ, ಬಾಳಾಸಾಹೇಬ ಕಣಬರಕರ, ಸಂತೋ?‌ ತಳವಾರ, ಮಾರುತಿ ಮನ್ನೋಳಕರ, ಕಲ್ಲಪ್ಪಾ ಸವಾಪಿ, ಜೋತಿಬಾ ಸವಾಪಿ ಹಾಗೂ ಮಂದಿರ ಜೀರ್ಣೋದ್ದಾರ ಕಮಿಟಿಯ ಸದಸ್ಯರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next