Advertisement

Fraud Case: ನಕಲಿ ಚಿನ್ನ ನೀಡಿ ಫೈನಾನ್ಸ್‌ ಸಂಸ್ಥೆಗೆ ಲಕ್ಷಾಂತರ ರೂ. ವಂಚನೆ

08:28 PM Jan 07, 2025 | Team Udayavani |

ಉಡುಪಿ: ಸಾರ್ವಜನಿಕರು ಅಡವಿಟ್ಟ ಚಿನ್ನ ಬಿಡಿಸಿ, ಖರೀದಿಸುವ ಮೈಸೂರಿನ ಮೂಲದ ಫೈನಾನ್ಸ್‌ ಸಂಸ್ಥೆಯೊಂದಕ್ಕೆ ನಕಲಿ ಚಿನ್ನ ನೀಡಿ 6 ಲ.ರೂ. ವಂಚಿಸಿದ ಬಗ್ಗೆ ನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

ಮೈಸೂರು ಮೂಲದ ಧನ ಗಣಪತಿ ಗೋಲ್ಡ್‌ ಆ್ಯಂಡ್‌ ಡೈಮಂಡ್‌ ಫೈನಾನ್ಸ್‌ವರು ಸಾರ್ವಜನಿಕರು ಚಿನ್ನದ ಸಾಲಗಳನ್ನು ಪಡೆದು ಚಿನ್ನ ಬಿಡಿಸಿಕೊಳ್ಳಲು ಸಾದ್ಯವಾಗದ ಚಿನ್ನವನ್ನು ಗ್ರಾಹಕರ ಪರವಾಗಿ ಬಿಡಿಸಿಕೊಂಡು ಚಿನ್ನವನ್ನು ಖರೀದಿ ಮಾಡುವ ವ್ಯವಹಾರ ಮಾಡಿಕೊಂಡಿದ್ದರು. ಜ. 2ರಂದು ಉಡುಪಿಯಿಂದ ಅಬ್ಬಾಸ್‌ ಅವರು ಸಂಸ್ಥೆಗೆ ಕರೆ ಮಾಡಿ ಸಂಪರ್ಕಿಸಿ, ಅಡವಿಟ್ಟ ಚಿನ್ನ ಬಿಡಿಸಿ ನೀಡುವ ವ್ಯವಹಾರದ ಬಗ್ಗೆ ಮಾತನಾಡಿದ್ದಾರೆ. ಅದರಂತೆ ಫೈನಾನ್ಸ್‌ನ ಕಾರ್ತಿಕ್‌ ಮತ್ತು ಕವನ್‌ ಅವರು ಉಡುಪಿಗೆ ಬಂದು ಅಬ್ಬಾಸ್‌ ಅವರನ್ನು ಜ. 3ರಂದು ಉಚ್ಚಿಲ ಬಳಿ ಭೇಟಿ ಮಾಡಿದ್ದರು.

ಚಿನ್ನವನ್ನು ಸೊಸೈಟಿಯಿಂದ ಬಿಡಿಸುವ ಬಗ್ಗೆ ಮಾತನಾಡಿ, ಬೆಳಪು ವ್ಯವಸಾಯ ಸಹಕಾರಿ ಸಂಘ, ನಗರದ ಗುರುನಿತ್ಯಾನಂದ ಕೋ ಆಪರೇಟಿವ್‌ ಸೊಸೈಟಿ ಮತ್ತು ಕುಂದಾಪುರ ವ್ಯವಸಾಯ ಸಹಕಾರಿ ಸಂಘ ಹಾಗೂ ಮೂರ್ತೆದಾರರ ಸಹಕಾರಿ ಸಂಘದಲ್ಲಿ ಚಿನ್ನ ಅಡವಿಟ್ಟಿರುವ ಬಗ್ಗೆ ಖಚಿತಪಡಿಸಿಕೊಂಡು ಅಬ್ಟಾಸ್‌ನ ಕುಂದಾಪುರ ಫೆಡರಲ್‌ ಬ್ಯಾಂಕ್‌ನ ಖಾತೆಗೆ ಫೈನಾನ್ಸ್‌ನವರು ಮುಂಗಡ ಹಣ 6 ಲ.ರೂ. ವರ್ಗಾಹಿಸಿದ್ದರು.

ಜ. 4ರಂದು ಫೈನಾನ್ಸ್‌ನವರು ಬೆಳಪು ವ್ಯವಸಾಯ ಸಹಕಾರಿ ಸಂಘದಲ್ಲಿ ಮೊಹಮ್ಮದ್‌ ಹನೀಫ್ ಅವರ ಮತ್ತು ಹೆಸರು ಗೊತ್ತಿಲ್ಲದ ವ್ಯಕ್ತಿ ಹಾಜರಾತಿಯಲ್ಲಿ 44 ಗ್ರಾಂ ಮತ್ತು ಉಡುಪಿಯ ಗುರುನಿತ್ಯಾನಂದ ಕೋ ಆಪರೇಟಿವ್‌ ಸೊಸೈಟಿಯಲ್ಲಿ ಮೊಹಮ್ಮದ್‌ ಯಾಸೀನ್‌ ಹಾಜರಾತಿಯಲ್ಲಿ 16 ಗ್ರಾಂ ಹಾಗೂ ಮೂರ್ತೆದಾರರ ಸಹಕಾರಿ ಸಂಘ ಸಂತೆಕಟ್ಟೆಯಲ್ಲಿ ಮೊಹಮ್ಮದ್‌ ಯಾಸೀನ್‌ ಹಾಜರಾತಿಯಲ್ಲಿ 32 ಗ್ರಾಂ ಚಿನ್ನವನ್ನು ಬಿಡಿಸಿಕೊಂಡಿದ್ದಾರೆ.

ಅನಂತರ ಆರೋಪಿ ಅಬ್ಬಾಸ್‌ ಕುಂದಾಪುರದಲ್ಲಿಯೂ ಚಿನ್ನ ಬಿಡಿಸಲು ಹೋಗುವ ಎಂದು ಫೈನಾನ್ಸ್‌ನವರನ್ನು ಉಡುಪಿ ಬಸ್‌ ನಿಲ್ದಾಣಕ್ಕೆ ಬರಲು ಹೇಳಿ ಅಲ್ಲಿ ಕಾಯಿಸಿ, ಅನಂತರ ಯಾವುದೇ ಪ್ರತಿಕ್ರಿಯೆ ನೀಡದೆ ನಾಪತ್ತೆಯಾಗಿದ್ದ. ಅನುಮಾನಗೊಂಡ ಫೈನಾನ್ಸ್‌ನವರು ಚಿನ್ನದ ಅಸಲಿಯತ್ತು ತಿಳಿದುಕೊಳ್ಳಲು ಚಿನ್ನದ ಅಂಗಡಿಗೆ ಹೋಗಿ ಪರೀಕ್ಷಿಸಿದಾಗ ಬ್ಯಾಂಕ್‌ನಿಂದ ಬಿಡಿಸಿದ ಚಿನ್ನ ನಕಲಿ ಎಂದು ಗೊತ್ತಾಗಿತ್ತು. ಸಂಸ್ಥೆಗೆ ವಂಚನೆ ಮಾಡಿದ ಬಗ್ಗೆ ಫೈನಾನ್ಸ್‌ನ ಮಾರುಕಟ್ಟೆ ವಿಭಾಗದ ಕಾರ್ತಿಕ್‌ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next