Advertisement
ಮೊದಲ ಹಂತದ ಅಲೈನ್‌ಮೆಂಟ್ ಸರ್ವೇ (ಡಿಪಿಆರ್) ಮುಗಿದಿದ್ದು, ಕೇಂದ್ರ ಸರಕಾರದಿಂದ ಅಧಿಸೂಚನೆ ಪ್ರಕಟ ಗೊಂಡ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಆರಂಭಗೊಳ್ಳುವ ಸಾಧ್ಯತೆ ಗಳಿವೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರವು ಗೆಜೆಟ್ ಅಧಿಸೂಚನೆಗೆ ಕಾಯು ತ್ತಿದ್ದು, ಅದಕ್ಕಿನ್ನು 2 ತಿಂಗಳು ಬೇಕಾಗ ಬಹುದು ಎನ್ನುತ್ತಿದೆ ಬಲ್ಲ ಮೂಲಗಳು.
ಮಲ್ಪೆಯಿಂದ ತೀರ್ಥಹಳ್ಳಿಯ (ಎನ್.ಎಚ್. 169ಎ) ವರೆಗಿನ ನಗರ ಪ್ರದೇಶಗಳಲ್ಲಿ ಮಾತ್ರ ಅಂದರೆ 90 ಕಿ.ಮೀ.ನ ರಸ್ತೆಯಲ್ಲಿ 13 ಕಡೆ ಗಳಲ್ಲಿ 31.987 ಕಿ.ಮೀ. ವರೆಗೆ ಚತುಷ್ಪಥ ವಾಗಲಿದೆ. ತೀರ್ಥಹಳ್ಳಿ, ರಂಜದಕಟ್ಟೆ, ಮೇಗರವಳ್ಳಿ, ನಾಲೂರು, ಗುಡ್ಡೆಕೇರೆ, ಹೊಸೂರು, ಆಗುಂಬೆ, ಸೋಮೇಶ್ವರ ಪೇಟೆ, ಸೋಮೇ ಶ್ವರ ಗ್ರಾಮೀಣ, ಹೆಬ್ರಿ, ಪರ್ಕಳ, ಮಣಿಪಾಲ, ಉಡುಪಿ ಯಲ್ಲಿ ಚತುಷ್ಪಥ ರಸ್ತೆ, ಪೆರ್ಡೂರು ಹಾಗೂ ಹಿರಿಯಡ್ಕದಲ್ಲಿ ಬೈಪಾಸ್ ನಿರ್ಮಾಣವಾಗಲಿದೆ. ಉಳಿದಂತೆ ಆಗುಂಬೆ ಘಾಟಿ ಪ್ರದೇಶ, ಕೈಮರ, ಉಂತೂರುಕಟ್ಟೆ, ಗುಡ್ಡೆಕೆರೆ, ಹೊಸೂರು, ಆಗುಂಬೆ, ತೀರ್ಥಹಳ್ಳಿ, ರಂಜದ ಕಟ್ಟೆ, ಮುಳಬಾಗಿಲು, ಮೇಗರ ವಳ್ಳಿ, ನಾಲೂರು ಗ್ರಾಮೀಣ ಭಾಗಗಳಲ್ಲಿ ದ್ವಿಪಥ ರಸ್ತೆ ನಿರ್ಮಾಣ ವಾಗಲಿದೆ.
95 ಹೆಕ್ಟೇರ್ ಭೂಸ್ವಾಧೀನ ಒಟ್ಟು 24 ಗ್ರಾ.ಪಂ.ಗಳಲ್ಲಿ ರಸ್ತೆ ಹಾದು ಹೋಗಲಿದ್ದು, 95.76 ಹೆಕ್ಟೇರ್ ಭೂಸ್ವಾಧೀನ ಪ್ರಕ್ರಿಯೆ ಆಗ ಬೇಕಿದೆ. ಜಾಗ ಕೊಟ್ಟವರಿಗೆ ಒಟ್ಟು 41.47 ಕೋ. ರೂ. ಪರಿಹಾರ ಹಣ ನೀಡಬೇಕಿದೆ. 90 ಕಿ.ಮೀ. ರಸ್ತೆ ಕಾಂಕ್ರೀಟಿಕರಣವಾಗಲಿದ್ದು, ಒಟ್ಟು 636 ಕೋ.ರೂ. ಯೋಜನೆ ಇದಾ ಗಿದೆ. ಪ್ರಾಧಿಕಾರದ ಪ್ರಕಾರ 2019ಕ್ಕೆ ಈ ಕಾಮಗಾರಿ ಪೂರ್ಣವಾಗಲಿದೆ.
Related Articles
ಚತುಷ್ಪಥ ರಸ್ತೆ ಕಾಮಗಾರಿ ತಡವಾಗಿರುವುದರಿಂದ ಮಣಿಪಾಲ- ಎಂಜೆಸಿ ಸರ್ಕಲ್‌ನಿಂದ ಪರ್ಕಳದವರೆಗಿನ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಹೊಂಡ- ಗುಂಡಿಗಳಲ್ಲಿ ವಾಹನ ಚಲಾಯಿಸುವುದೇ ಸವಾಲಾಗಿದೆ. ಮಳೆ ಬಂದಾಗ ಕೆಸರಿನ ಸಿಂಚನ, ಮಳೆ ಇಲ್ಲದಿದ್ದಾಗ ಧೂಳುಮಯವಾದ ರಸ್ತೆಯಿಂದ ವಾಹನ ಸವಾರರು, ಪ್ರಯಾಣಿಕರು ಹೈರಾಣಾಗಿದ್ದಾರೆ. ಮಳೆ ನಿಲ್ಲದೆ ಈ ರಸ್ತೆಗೆ ತೇಪೆಯೂ ಇಲ್ಲ. 2 ದಿನವಾದ್ರೂ ಸಂಪೂರ್ಣ ಮಳೆ ಬಿಟ್ಟರೆ, ಹೊಂಡ- ಗುಂಡಿಗಳಿಗೆ ತೇಪೆ ಹಾಕಲಾಗುವುದು ಎನ್ನುವುದಾಗಿ ಸಂಸದೆ ಶೋಭಾ ಕರಂದ್ಲಾಜೆ ಹೇಳುತ್ತಾರೆ.
Advertisement