Advertisement

MAHE: 2ನೇ ರಾಷ್ಟ್ರೀಯ ಸಿಜಿಎಂಪಿ ದಿನಾಚರಣೆ; ಔಷಧ ಗುಣಮಟ್ಟ ಚರ್ಚೆ

01:15 AM Oct 14, 2024 | Team Udayavani |

ಮಣಿಪಾಲ: ಮಾಹೆ ವಿ.ವಿ.ಯ ಡಾ| ಟಿಎಂಎ ಪೈ ಸಭಾಂಗಣ ದಲ್ಲಿ 2ನೇ ರಾಷ್ಟ್ರೀಯ ಸಿಜಿಎಂಪಿ ದಿನ ವನ್ನು ಉದ್ಯಮಿಗಳು, ವಿ.ವಿ.ಯ ಅಧಿ ಕಾರಿಗಳ ಉಪಸ್ಥಿತಿಯಲ್ಲಿ ನಡೆಯಿತು.

Advertisement

ಮಣಿಪಾಲ ಕಾಲೇಜ್‌ ಆಫ್‌ ಫಾರ್ಮಾ ಸ್ಯುಟಿಕಲ್ ಸೈನ್ಸಸ್‌ (ಎಂಕಾಪ್ಸ್‌)ನಲ್ಲಿ ಸೆಂಟರ್‌ ಫಾರ್‌ ಸಿಜಿಎಂಪಿ ಆಯೋಜಿಸಿದ ಎರಡು ದಿನಗಳ ಕಾರ್ಯಕ್ರಮ ಅ.9 ಮತ್ತು 10ರಂದು ನಡೆದಿದ್ದು ಔಷಧ ಗುಣಮಟ್ಟದ ಮಾನದಂಡ ಅನುಸ ರಿಸುವ ಪ್ರಾಮುಖ್ಯತೆ, ಔಷಧೀಯ ಶಿಕ್ಷಣ, ಅಭ್ಯಾಸದ ಪ್ರಗತಿ ಇತ್ಯಾದಿ ಸಮಗ್ರವಾಗಿ ಚರ್ಚಿಸಲಾಗಿದೆ.

ಫಾರ್ಮಸಿ ಕೌನ್ಸಿಲ್‌ ಆಫ್‌ ಇಂಡಿಯಾದ ಅಧ್ಯಕ್ಷ ಡಾ| ಮೋಂಟು ಕುಮಾರ್‌ ಎಂ. ಪಟೇಲ್‌ ಉದ್ಘಾಟನೆಯಲ್ಲಿ ಭಾಗವಹಿಸಿ, ಔಷಧೀಯ ಉದ್ಯಮದಲ್ಲಿ ನಿಯಂತ್ರಕ ಅನುಸರಣೆ ಮತ್ತು ಗುಣಮಟ್ಟದ ಭರವಸೆಯ ಬಗ್ಗೆ ವಿವರಿಸಿದರು.
ಕುಲಪತಿ ಲೆ| ಜ| ಡಾ| ಎಂ.ಡಿ. ವೆಂಕಟೇಶ್‌ ಮಾತನಾಡಿ, ಔಷಧೀಯ ಶಿಕ್ಷಣದಲ್ಲಿ ಉತ್ಕೃಷ್ಟತೆ ಬೆಳೆಸುವಲ್ಲಿ ಮಾಹೆ ಬದ್ಧತೆ ಹೊಂದಿದೆ ಎಂದರು.

2ನೇ ದಿನದ ಐಡಿಎಂಎನ ಪ್ರಧಾನ ಕಾರ್ಯದರ್ಶಿ, ಮುಂಬಯಿ ಎನ್‌ಕ್ಯೂಬ್‌ ಎಥಿಕಲ್ಸ್‌ ಪ್ರೈ.ಲಿ. ವ್ಯವಸ್ಥಾಪಕ ನಿರ್ದೇಶಕ ಮೆಹುಲ್‌ ಷಾ ಮಾತನಾಡಿ, ಮಾಹೆ ವಿ.ವಿ.ಯ 25,000 ವಿದ್ಯಾರ್ಥಿಗಳು, 26 ಸ್ಟ್ರೀಮ್‌ಗಳು, 130 ಕೋರ್ಸ್‌ಗಳು ಮಣಿಪಾಲವನ್ನು ಶೈಕ್ಷಣಿಕ ಹಬ್‌ ಆಗಿ ರೂಪಿಸಿದೆ ಎಂದರು.

ಐಡಿಎಂಎ ಪ್ರಧಾನ ಕಾರ್ಯದರ್ಶಿ ದಾರಾ ಬಿ. ಪಟೇಲ್‌, ಮಾಹೆ ಸಹ ಕುಲಪತಿ ಡಾ| ಶರತ್‌ ಕೆ. ರಾವ್‌ ಪ್ರಸ್ತಾವನೆಗೈದರು. ಸಿಜಿಎಂಪಿ ಕೇಂದ್ರದ ಸಂಯೋಜಕ ಡಾ| ಗಿರೀಶ್‌ ಪೈ ಸಿಜಿಎಂಪಿ ದಿನದ ಬಗ್ಗೆ ತಿಳಿಸಿದರು.

Advertisement

ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಎಸ್‌.ಎಂ. ಮುದ್ದಾ ಅವರಿಗೆ ನ್ಯಾಶನಲ್‌ ಸಿಜಿಎಂಪಿ ಡೇ ಅವಾರ್ಡ್‌ ನೀಡ‌ಲಾಯಿತು. ಅವರ ಪರವಾಗಿ ಮೆಹುಲ್‌ ಶಾ ಪ್ರಶಸ್ತಿ ಸ್ವೀಕರಿಸಿದರು.

ಡಾ| ಪಿ.ವಿ. ಮಲ್ಯರ ನಿರ್ದೇಶನದಲ್ಲಿ ಉದ್ಯಮ-ಸಂಸ್ಥೆಯ ಪ್ಯಾನಲ್‌ ಚರ್ಚೆ ನಡೆಯಿತು. ಕಾರ್ಪೊರೇಟ್‌ ಸಂಬಂಧಗಳ ನಿರ್ದೇಶಕ ಡಾ| ಹರೀಶ್‌ ಕುಮಾರ್‌ ಮತ್ತು ಫೋಪೆ ಅಧ್ಯಕ್ಷ ಹರೀಶ್‌ ಕೆ. ಜೈನ್‌ ಅಧ್ಯಕ್ಷತೆಯಲ್ಲಿ ಸಮಾರೋಪ ನಡೆಯಿತು. ಪೋಸ್ಟರ್‌ ಪ್ರಸ್ತುತಿಗಳ ವಿಜೇತರಿಗೆ ಡಾ| ಗಿರೀಶ್‌ ಪೈ ಮತ್ತು ಎಂಕಾಪ್ಸ್‌ನ ಪ್ರಾಂಶುಪಾಲ ಡಾ| ಶ್ರೀನಿವಾಸ್‌ ಮುತಾಲಿಕ್‌ ಪ್ರಮಾಣಪತ್ರ ವಿತರಿಸಿದರು. ರವೀಂದ್ರ ಶೆಣೈ ವಂದಿಸಿ, ಡಾ| ರೇಖಾ ಆರ್‌. ಶೆಣೈ ಸಮಾರೋಪದಲ್ಲಿ ನಿರೂಪಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next