Advertisement

Manipal: ಮಾಹೆ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ರಜತ ಮಹೋತ್ಸವ

12:06 PM Dec 19, 2024 | Team Udayavani |

ಮಣಿಪಾಲ: ಅಲೈಡ್ ಹೆಲ್ತ್ ಪ್ರೊಫೆಶನ್‌ಗಳು ರೋಗ ಹರಡುವಿಕೆಯನ್ನು ತಡೆಗಟ್ಟಲು, ರೋಗನಿರ್ಣಯ ಮಾಡಲು, ಚಿಕಿತ್ಸೆ ನೀಡಲು ಮತ್ತು ಎಲ್ಲಾ ವಯಸ್ಸಿನ ಮತ್ತು ಎಲ್ಲಾ ವಿಶೇಷತೆಗಳ ಜನರಿಗೆ ಚಿಕಿತ್ಸೆ ನೀಡುವಲ್ಲಿ ಸಹಾಯಕವಾಗಿರುವ ಪರಿಣತಿಯನ್ನು ಅನ್ವಯಿಸುವ ಆರೋಗ್ಯ ವೃತ್ತಿಪರರ ಒಂದು ವಿಭಿನ್ನ ಗುಂಪು. ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಷನ್ (ಎಂ ಸಿ ಎಚ್ ಪಿ ) ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನ ಪ್ರಮುಖ ಸಂಸ್ಥೆಗಳಲ್ಲಿ ಒಂದಾಗಿದೆ, ಇದನ್ನು ಭಾರತ ಸರ್ಕಾರದ MOE, ನಿಂದ “ಇನ್‌ಸ್ಟಿಟ್ಯೂಟ್ ಆಫ್ ಎಮಿನೆನ್ಸ್” ಮಾನ್ಯತೆ ಪಡೆದಿದೆ. ಎಂ ಸಿ ಎಚ್ ಪಿ ಮಾಹೆಯ ಎಲ್ಲಾ ನಾಲ್ಕು ಕ್ಯಾಂಪಸ್‌ಗಳ ಅಡಿಯಲ್ಲಿ ಶಿಕ್ಷಣ ನೀಡುತ್ತಿದೆ. ಇದು 2024-2025 ರ ಸಾಲಿನಲ್ಲಿ ರಜತ ಮಹೋತ್ಸವ ಆಚರಿಸುತ್ತಿದೆ.

Advertisement

ಪ್ರಸ್ತುತ  ಭಾರತ ಹಾಗೂ ಏಷ್ಯಾದ ಮೊದಲ ಮತ್ತು ದೊಡ್ಡ ಸಂಸ್ಥೆಯಾಗಿದ್ದು, 22 ದೇಶಗಳ ವಿದ್ಯಾರ್ಥಿಗಳನ್ನು ಹೊಂದಿರುವ ಸಂಬಂಧಿತ ಆರೋಗ್ಯ ಕ್ಷೇತ್ರದಲ್ಲಿ ಉನ್ನತ ಶಿಕ್ಷಣ ನೀಡುವಲ್ಲಿ ಮುಂಚೂಣಿಯಲ್ಲಿದೆ. ಆರೋಗ್ಯ ತಂಡದಲ್ಲಿ ಕೆಲಸ ಮಾಡುವವರಿಗೆ ಹಲವಾರು ಪರಿಸ್ಥಿತಿ ಮತ್ತು ಕಾಯಿಲೆಗಳನ್ನು ತಡೆಗಟ್ಟಲು, ರೋಗನಿರ್ಣಯ ಮಾಡಲು ಮತ್ತು ಚಿಕಿತ್ಸೆ ನೀಡಲು ಹಾಗೂ ರೋಗಿಗಳಿಗೆ ಅತ್ಯುತ್ತಮ ಫಲಿತಾಂಶಗಳನ್ನು ಒದಗಿಸುವ ದೃಷ್ಟಿಯಿಂದ ಸಂಸ್ಥೆಯು ಉನ್ನತ ಮಟ್ಟದ ಅಲೈಡ್ ಆರೋಗ್ಯ ವೃತ್ತಿಪರ ತರಬೇತಿ ನೀಡುತ್ತಿದೆ.

ಎಂಸಿಎಚ್ ಪಿ ಯಲ್ಲಿ ನೀಡಲಾಗುವ ಕೋರ್ಸ್‌ಗಳನ್ನು ವಿಶೇಷವಾಗಿ ಜಾಗತಿಕವಾಗಿ ಬೆಳೆಯುತ್ತಿರುವ ಆರೋಗ್ಯ ಉದ್ಯಮದಲ್ಲಿ ಉತ್ತಮ ವೃತ್ತಿಜೀವನಕ್ಕಾಗಿ ಪದವೀಧರರು ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ತರಬೇತಿ ನೀಡಲಾಗತ್ತದೆ. 1999 ರಲ್ಲಿ ಸ್ಥಾಪನೆಯಾದಾಗಿನಿಂದ, ಈ ಸಂಸ್ಥೆಯ ಬೆಳವಣಿಗೆಯು ಅಸಾಧಾರಣವಾಗಿದೆ. ಬೇಡಿಕೆ-ಚಾಲಿತ ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳು, ಅತ್ಯುತ್ತಮ ಮೂಲಸೌಕರ್ಯ, ಮೀಸಲಾದ ಕ್ಲಿನಿಕಲ್ ಸೌಲಭ್ಯಗಳು ಮತ್ತು ಅರ್ಹ ಅಧ್ಯಾಪಕರುಗಳಿಂದ ಸಂಸ್ಥೆಯು ಈಗ ರಾಷ್ಟ್ರದಲ್ಲಿ ಅಲೈಡ್ ಹೆಲ್ತ್ ಸೈನ್ಸ್‌ನಲ್ಲಿ ಶ್ರೇಷ್ಠತೆಯ ಕೇಂದ್ರವೆಂದು ಮೆಚ್ಚುಗೆ ಪಡೆದಿದೆ.

ಎಂಸಿಎಚ್ ಪಿ ರಜತ ಮಹೋತ್ಸವ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನವನ್ನು ಮಾಹೆ ಮಣಿಪಾಲದ ಆರೋಗ್ಯ ವಿಜ್ಞಾನದ ಸಹ ಕುಲಪತಿ ಮತ್ತು ಮಾಹೆಯ ಹಳೆಯ ವಿದ್ಯಾರ್ಥಿಗಳ ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ. ಶರತ್ ಕೆ. ರಾವ್ ಉದ್ಘಾಟಿಸಿದರು, ಆರೋಗ್ಯ ವ್ಯವಸ್ಥೆಯಲ್ಲಿ ಅರ್ಹ ಮತ್ತು ಸಮರ್ಥ ಆರೋಗ್ಯ ವೃತ್ತಿಪರರ ಪ್ರಾಮುಖ್ಯತೆ ಕುರಿತು ವಿವರಿಸಿದರು. ಅಲ್ಲದೇ ಗುಣಮಟ್ಟದ ಶಿಕ್ಷಣ, ಅಂತರ ಶಿಸ್ತಿನ ಸಂಶೋಧನೆಗಾಗಿ ಸಂಸ್ಥೆಯನ್ನು ಅಭಿನಂದಿಸಿದರು.

ಪ್ರಸನ್ನ ಸ್ಕೂಲ್ ಆಫ್ ಪಬ್ಲಿಕ್ ಹೆಲ್ತ್‌ನ ನಿರ್ದೇಶಕ ಡಾ ಚೆರಿಯನ್ ವರ್ಗೀಸ್, ಮಾಹೆಯ ಹಳೆ ವಿದ್ಯಾರ್ಥಿಗಳ ಸಂಬಂಧದ ನಿರ್ದೇಶಕ ಡಾ ರೋಹಿತ್ ಸಿಂಗ್ ಅವರು ಸಂಸ್ಥೆಯ ಗಮನಾರ್ಹ ಬೆಳವಣಿಗೆ ಮತ್ತು ಸಂಸ್ಥೆಯ ಪ್ರತಿಷ್ಠಿತ ಹಳೆಯ ವಿದ್ಯಾರ್ಥಿಗಳನ್ನು ಶ್ಲಾಘಿಸಿದರು.

Advertisement

ಮಣಿಪಾಲ್ ಕಾಲೇಜ್ ಆಫ್ ಹೆಲ್ತ್ ಪ್ರೊಫೆಶನ್ಸ್ ಡೀನ್ ಡಾ. ಜಿ ಅರುಣ್ ಮೈಯ್ಯ ಅವರು ಮಾತನಾಡಿ, ಕಳೆದ 25 ವರ್ಷಗಳ ಸಂಸ್ಥೆಯ ಹುಟ್ಟು, ಗಮನಾರ್ಹ ವಿಸ್ತರಣೆ, ಬೆಳವಣಿಗೆ ಕುರಿತು ಮಾಹಿತಿ ನೀಡಿದರು. 70% ಕ್ಕಿಂತ ಹೆಚ್ಚು ಎಂಸಿಎಚ್ ಪಿ ಹಳೆ ವಿದ್ಯಾರ್ಥಿಗಳು ಪ್ರಪಂಚದಾದ್ಯಂತ ಪ್ರತಿಷ್ಠಿತ ಸಂಸ್ಥೆಯಲ್ಲಿ ಸ್ಥಾನ ಪಡೆದಿದ್ದಾರೆ ಎಂದರು. ರಜತ ಮಹೋತ್ಸವದ ಹಳೆ ವಿದ್ಯಾರ್ಥಿಗಳ ಪುನರ್ಮಿಲನದಲ್ಲಿ ಪ್ರಪಂಚದ ವಿವಿಧ ಭಾಗಗಳಿಂದ 500 ಕ್ಕೂ ಹೆಚ್ಚು ಹಳೆ ವಿದ್ಯಾರ್ಥಿಗಳು ಭಾಗವಹಿಸಿದ್ದರು. ಸಮಾರಂಭದಲ್ಲಿ ಸಂಸ್ಥೆಗಳ ಗಣ್ಯ ಹಳೆಯ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.

ಎಂಸಿಎಚ್ ಪಿ ಯ ಹಳೆ ವಿದ್ಯಾರ್ಥಿಗಳ ಸಂಬಂಧಗಳ ಮುಖ್ಯಸ್ಥರಾದ ಡಾ ಶೋವನ್ ಸಹಾ ಮತ್ತು ಅಸೋಸಿಯೇಟ್ ಡೀನ್ ಡಾ. ವೆಂಕಟರಾಜ್ ಐತಾಳ್ ಅವರು ಹಳೆ ವಿದ್ಯಾರ್ಥಿಗಳ ಚಟುವಟಿಕೆಯ ಅವಲೋಕನ ಒದಗಿಸಿದರು. ಸಮಾರಂಭದಲ್ಲಿ ಎಂ ಸಿ ಎಚ್ ಪಿ ಯ ಪ್ರಮುಖ ಹಳೆ ವಿದ್ಯಾರ್ಥಿಗಳಲ್ಲಿನ ಸಾಧಕರನ್ನು ಸನ್ಮಾನಿಸಲಾಯಿತು. ಡಾ.ಶೀಲಾ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next