ಮಹಾಲಿಂಗಪುರ: ಭಾರಿ ಕೂತುಹಲ ಕೆರಳಿಸಿದ್ದ ಹಾಗೂ ಕಾಂಗ್ರೆಸ್ ಬಿಜೆಪಿ ಪಕ್ಷದ ನಡುವೆ ತುರುಸಿನಿಂದ ಡಿ.27 ರಂದು ನಡೆದಿದ್ದ ಸ್ಥಳಿಯ ಪುರಸಭೆ 14 ನೇ ವಾರ್ಡಿನ ಉಪಚುನಾವಣೆಯ ಫಲಿತಾಂಶ ಡಿ.30ರ ಶನಿವಾರ ಮುಂಜಾನೆ ಪ್ರಕಟವಾಗಿದ್ದು ಕಾಂಗ್ರೆಸ್ ಅಭ್ಯರ್ಥಿ ಅಬ್ದುಲ್ ಬಾಗವಾನ 328 ಮತಗಳ ಭಾರಿ ಅಂತರದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಶನಿವಾರ ಮುಂಜಾನೆ ರಬಕವಿ-ಬನಹಟ್ಟಿ ತಹಶೀಲ್ದಾರ ಕಾರ್ಯಾಲಯದಲ್ಲಿ ನಡೆದ ಮತ ಎಣಿಕೆಯ ನಂತರ ಚುನಾವಣಾಧಿಕಾರಿ ವ್ಹಿ.ಸಿ.ಬೆಳಗಲ್ಲ ಫಲಿತಾಂಶ ಘೋಷಿಸಿದರು.
ಅಭ್ಯರ್ಥಿಗಳು ಪಡೆದ ಮತಗಳ ವಿವರ: ಕಾಂಗ್ರೆಸ್ ನ ಅಬ್ದುಲ್ ಬಾಗವಾನ (630), ಬಿಜೆಪಿಯ ಶ್ರೀಮಂತ ಹಳ್ಳಿ(302), ಪಕ್ಷೇತರ ಬಸಪ್ಪ ಚಿಂಚಖಂಡಿ(15), ಮಹಾಂತೇಶ ಅವಟಗಿ(15), ಪಕ್ಷೇತರ/ಎಸ್ ಡಿಪಿಆಯ್ ರಮಜಾನ ಖಾಲೇಖಾನ (31), ನೋಟಾ (5) ಮತಗಳು ಚಲಾವಣೆ ಆಗಿವೆ. ಕಾಂಗ್ರೆಸ್ ಅಭ್ಯರ್ಥಿ 328 ಮತಗಳ ಭಾರಿ ಅಂತರದಲ್ಲಿ ಜಯಶಾಲಿಯಾಗಿದ್ದಾರೆ.
ಅನುಕಂಪದ ಅಲೆಗೆ ಮಣಿದ ಮತದಾರರು: 14ನೇ ವಾರ್ಡಿನ ಹಿಂದಿನ ಸದಸ್ಯ ಜಾವೇದ ಬಾಗವಾನ ಅವರ ಅಕಾಲಿಕ ನಿಧನದಿಂದ ಉಪಚುನಾವಣೆ ನಡೆದಿತ್ತು. ಉಪಚುನಾವಣೆಯಲ್ಲಿ ಮೃತ ಜಾವೇದ ಸಹೋದರ ಅಬ್ದುಲ್ ಬಾಗವಾನ ಅವರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಬಿಜೆಪಿ ಅಭ್ಯರ್ಥಿ ಶ್ರೀಮಂತ ಹಳ್ಳಿ ಅವರ ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿತ್ತು. ಜಾವೇದ ಅವರ ಅಕಾಲಿಕ ಸಾವಿನ ಅನುಕುಂಪ ಜೊತೆಗೆ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಿಗೆ ಮನಸೋತ ವಾರ್ಡಿನ ಮತದಾರರು ಉಪಚುನಾವಣೆಯಲ್ಲಿಯೂ ಕಾಂಗ್ರೆಸ್ ಗೆ ಜೈ ಎಂದಿದ್ದಾರೆ.
ವಿಜಯೋತ್ಸವ ಆಚರಣೆ: ಫಲಿತಾಂಶ ಹೊರಬೀಳುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ಮುಖಂಡರು, ಪುರಸಭೆ ಸದಸ್ಯರು, ಕಾರ್ಯಕರ್ತರು ಪಟ್ಟಣದ ವಿವಿಧ ವೃತ್ತಗಳಲ್ಲಿ ಹಾಗೂ 14 ನೇ ವಾರ್ಡಿನಲ್ಲಿ ಪಟಾಕಿ ಸಿಡಿಸಿ, ಸಿಹಿ ಹಂಚಿ, ಗುಲಾಲ್ ಎರಚಿಕೊಂಡು ವಿಜಯೋತ್ಸವ ಆಚರಿಸಿದರು.
ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಮುಖಂಡ ಸಿದ್ದು ಕೊಣ್ಣೂರ, ಸ್ಥಳಿಯ ಮುಖಂಡರಾದ ಯಲ್ಲನಗೌಡ ಪಾಟೀಲ್, ಮಹಾಲಿಂಗಪ್ಪ ತಟ್ಟಿಮನಿ, ಮುಸ್ತಕ್ ಚಿಕ್ಕೋಡಿ, ಮಲ್ಲಪ್ಪ ಸಿಂಗಾಡಿ, ಪ್ರಕಾಶ ಮಮದಾಪೂರ, ಈಶ್ವರ ಚಮಕೇರಿ, ಮಲ್ಲಪ್ಪ ಭಾವಿಕಟ್ಟಿ, ಬಸವರಾಜ ರಾಯರ, ಬಲವಂತಗೌಡ ಪಾಟೀಲ್, ರಾಜು ಗೌಡಪ್ಪಗೋಳ, ಸುನೀಲಗೌಡ ಪಾಟೀಲ, ನಜೀರ ಜಾರೆ, ಅರ್ಜುನ ದೊಡಮನಿ, ಸುರೇಶ ಬಿದರಿ, ಅರುಣ ಬಂತಿ, ರವಿ ಬಿದರಿ, ರಾಜೇಶ ಭಾವಿಕಟ್ಟಿ, ಸಿರಾಜ ಪಾಂಡು, ಅನೀಲ ದೇಸಾಯಿ, ನಾನಾ ಜೋಶಿ, ಸಿದ್ದು ಬೆನ್ನೂರ, ಸಯ್ಯದ ಯಾದವಾಡ, ಲಕ್ಷ್ಮಣ ಮಾಂಗ, ಹೊಳೆಪ್ಪ ಬಾಡಗಿ ಸೇರಿದಂತೆ ಹಲವರು ಇದ್ದರು.