ನವದೆಹಲಿ: ಭೂಗತ ಜಗತ್ತಿನ ಡಾನ್ ಆಗಿ, ಆನಂತರ ಸಂಸದರಾಗಿ, ಇದೇ ವರ್ಷ ಮೇ ತಿಂಗಳಲ್ಲಿ ಕೋವಿಡ್ ದಿಂದಾಗಿ ನಿಧನರಾದ ಬಿಹಾರದ ಮಾಜಿ ಸಂಸದ ಮೊಹಮ್ಮದ್ ಶಹಾಬುದ್ದೀನ್ ಅವರ ಪುತ್ರ ಒಸಾಮಾ ಶಹಾದ್, ಶನಿವಾರ ದೇಶದ ಪ್ರಸಿದ್ಧ ತೀರ್ಥ ಕ್ಷೇತ್ರವಾದ ವೈಷ್ಣೋದೇವಿ ದೇಗುಲಕ್ಕೆ ತೆರಳಿ, ದೇವಿಯ ದರ್ಶನ ಪಡೆದಿದ್ದಾರೆ.
ದೇಗುಲದ ಬಳಿ ಅವರು ತೆಗೆಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಜಮ್ಮು- ಕಾಶ್ಮೀರದ ಕಾಟ್ರಾಕ್ಕೆ ಆಗಮಿಸಿದ ಅವರು, ಅಲ್ಲಿಂದ ವೈಷ್ಣೋದೇವಿ ದೇಗುಲಕ್ಕೆ ತೆರಳಿ, ದರ್ಶನ ಪಡೆದರು.
ಇದನ್ನೂ ಓದಿ:ಎಲ್‌ಐಸಿಯಿಂದ ಎರಡು ಐಪಿಒ? 2 ಸಾವಿರ ಕೋಟಿ ರೂ. ಬಂಡವಾಳ ಆಕರ್ಷಿಸಲು ಚಿಂತನೆ
ವಿಶೇಷವೆಂದರೆ, ಶಹಾಬುದ್ದೀನ್ ನಿಧನದ ನಂತರ ಒಸಾಮಾ, ರಾಜಕೀಯದಲ್ಲಿ ಸಕ್ರಿಯರಾಗಿದ್ದಾರೆ.