Advertisement

Jammu: ವೈಷ್ಣೋದೇವಿ ರೋಪ್‌ವೇ ವಿರೋಧಿ ಪ್ರತಿಭಟನೆ ವೇಳೆ ಭಾರೀ ಘರ್ಷಣೆ

02:29 AM Nov 26, 2024 | Team Udayavani |

ಜಮ್ಮು: ಜಮ್ಮುವಿನ ವೈಷ್ಣೋದೇವಿ ದೇಗುಲದ ಟ್ರೆಕ್‌ ಮಾರ್ಗದಲ್ಲಿ ರೋಪ್‌ವೇ ನಿರ್ಮಾಣ ವಿರೋಧಿಸಿ ಸ್ಥಳೀಯ ಅಂಗಡಿ ಮಾಲೀಕರು, ಕಾರ್ಮಿಕರು ನಡೆಸುತ್ತಿದ್ದ ಪ್ರತಿಭಟನಾ ಮೆರವಣಿಗೆ ಹಿಂಸಾಚಾರಕ್ಕೆ ತಿರುಗಿದೆ.

Advertisement

ರಿಯಾಸಿ ಜಿಲ್ಲೆಯ ಕತ್ರಾ ಬೇಸ್‌ ಕ್ಯಾಂಪ್‌ನಲ್ಲಿ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಪೊಲೀಸ್‌ ಸಿಬ್ಬಂದಿಯೊಬ್ಬರು ಗಾಯಗೊಂಡಿದ್ದಾರೆ. ತಾರಾಕೋಟೆ ಮಾರ್ಗ ಮತ್ತು ಸಂಜಿಛತ್‌ ನಡುವಿನ 12 ಕಿ.ಮೀ. ಮಾರ್ಗದಲ್ಲಿ 250 ಕೋಟಿ ರೂ.ಗಳ ರೋಪ್‌ ವೇ ಯೋಜನೆ ಜಾರಿಯಾದರೆ ನಾವೆಲ್ಲ ನಿರುದ್ಯೋಗಿಗಳಾಗುತ್ತೇವೆ. ಈ ಕಾರಣಕ್ಕಾಗಿ ಯೋಜನೆ ಕೂಡಲೇ ನಿಲ್ಲಿಸಿ ಅಥವಾ ಸೂಕ್ತ ಪರಿಹಾರ ಕೊಡಿಸಿ ಎಂಬುದು ಪ್ರತಿಭಟನಾಕಾರರ ಆಗ್ರಹವಾಗಿತ್ತು.

ಪ್ರತಿಭಟನೆ ವೇಳೆ ಸಿಆರ್‌ಪಿಎಫ್ ವಾಹನವು ಹಾದುಹೋಗಿದ್ದು, ಪ್ರತಿಭಟನಾನಿರತರನ್ನು ಕೆರಳಿಸಿದ್ದು, ವಾಹನದ ಮೇಲೆ ಇಟ್ಟಿಗೆಗಳಿಂದ ದಾಳಿ ನಡೆಸಿದರು. ಈ ವೇಳೆ ಒಬ್ಬ ಪೊಲೀಸ್‌ ಅಧಿಕಾರಿಗೆ ಗಾಯವಾಗಿದ್ದರೆ, ವಾಹನಗಳಿಗೆ ಹಾನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next