Advertisement

ಹೀಗಿದೆ ನೋಡಿ ಗಾಂಧಿ ಗ್ರಾಮ ಪುರಸ್ಕೃತ ಕಾಳಗಿ ಪರಿಸ್ಥಿತಿ!

10:22 AM Oct 09, 2017 | Team Udayavani |

ಕಾಳಗಿ: ವಾರದ ಹಿಂದೆಯಷ್ಟೇ ಗಾಂಧಿ ಗ್ರಾಮ ಪುರಸ್ಕಾರ ಪಡೆದಿರುವ ಕಾಳಗಿ ಗ್ರಾಮದಲ್ಲಿ ಹೆಜ್ಜೆಹೆಜ್ಜೆಗೂ ಅನೈರ್ಮಲ್ಯ ತಾಂಡವವಾಡುತ್ತಿದೆ.

Advertisement

ಚರಂಡಿ ನೀರು ರಸ್ತೆ ಮೇಲೆ ಹರಿದು ಪಾಚಿಗಟ್ಟಿದೆ. ರಸ್ತೆ ಬದಿಯಲ್ಲಿ ಕಸದ ರಾಶಿ ತುಂಬಿಕೊಂಡಿದೆ. ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಸಾರ್ವಜನಿಕರು ಬದುಕುವಂತಾಗಿದೆ.

ಸ್ವತ್ಛತೆ, ಎನ್‌ಆರ್‌ಜಿ ಕಾರ್ಯಕ್ರಮ, ಕರ ವಸೂಲಿ, ಬಸವ ವಸತಿ ಯೋಜನೆ, ಪ್ರಧಾನಮಂತ್ರಿ ಆವಾಸ್‌ ಯೋಜನೆ, ಶುದ್ಧ ಕುಡಿಯುವ ನೀರು, ಬೀದಿ ದೀಪ ಹಾಗೂ ಸರ್ಕಾರದ ಎಲ್ಲ ಯೋಜನೆಗಳ ಸಮರ್ಪಕ ಬಳಕೆ ಹಿನ್ನೆಲೆಯಲ್ಲಿ ಕಾಳಗಿ ಗ್ರಾಪಂಗೆ ಗಾಂಧಿಗ್ರಾಮ ಪುರಸ್ಕಾರ ಲಭಿಸಿದೆ. ಆದರೆ ಗ್ರಾಮದಲ್ಲಿ ಎಲ್ಲಿಯೂ ಸ್ವತ್ಛತೆ ಕಂಡು ಬರುವುದಿಲ್ಲ.

ಚರಂಡಿ ನೀರು ಹರಿದು ಹೋಗಲು ದಾರಿ ಇಲ್ಲ. ಹಾಗಾಗಿ ಇಲ್ಲಿನ ಬಹುತೇಕ ಮನೆಗಳ ಎದುರು ನಿಲ್ಲುತ್ತಿದ್ದು, ರಸ್ತೆಗಳು ಕೆಸರು ಗದ್ದೆಯಂತಾಗಿವೆ. ಇದರಿಂದ ಸೊಳ್ಳೆಗಳ ಸಂತಾನೋತ್ಪತಿಯಾಗಿ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಉಂಟಾಗಿದೆ. ರಸ್ತೆ ಬದಿ ಕಸದ ರಾಶಿ ತುಂಬಿ ತುಳುಕುತ್ತಿದ್ದು, ಗ್ರಾಪಂ ಅಧಿಕಾರಿಗಳು ಸ್ವತ್ಛತೆ ಕಾಪಾಡುವಲ್ಲಿ ವಿಫಲರಾಗಿದ್ದಾರೆ ಎಂದು ಗ್ರಾಮದ ನಿವಾಸಿ ರಮೇಶ ಕದಂ ಆರೋಪಿಸಿದ್ದಾರೆ.

ಗ್ರಾಮದ ಕೆಲವು ರಸ್ತೆಗಳನ್ನು ಮಾತ್ರ ವಾರಕ್ಕೊಮ್ಮೆ ಸ್ವತ್ಛ ಮಾಡುವ ಗ್ರಾಪಂ ಸಿಬ್ಬಂದಿ ಬಹುತೇಕ ರಸ್ತೆಗಳ ಕಡೆ ಒಮ್ಮೆಯೂ ನೋಡುವುದಿಲ್ಲ. ಸದ್ಯ ಮಳೆ ಆಗುತ್ತಿದೆ. ಹಾಗಾಗಿ ಚರಂಡಿ ಮತ್ತು ಮಳೆ ನೀರು ಮಿಶ್ರಣಗೊಂಡು ಗ್ರಾಮದಲ್ಲಿ ವಿಪರೀತ ಸೊಳ್ಳೆಗಳು ಕಾಣಿಸಿಕೊಳ್ಳುತ್ತಿವೆ. ಇನ್ನುಹಂದಿಗಳ ಹಾವಳಿ ಸಹ ಹೆಚ್ಚಾಗಿದ್ದು, ಚರಂಡಿಯಲ್ಲಿ ಬಿದ್ದೆದ್ದು ಮನೆಗಳಿಗೆ ನುಗುತ್ತಿವೆ. ಡೆಂಘೀ, ಚಿಕೂನ್‌ಗುನ್ಯಾ ದಂತ ರೋಗಗಳ ಭೀತಿಯಲ್ಲಿ ಬದುಕುತ್ತಿದ್ದೇವೆ ಎನ್ನುತ್ತಿದ್ದಾರೆ ಗ್ರಾಮಸ್ಥರು.

Advertisement

ಬಳಕೆಯಲ್ಲಿಲ್ಲ ಸಾರ್ವಜನಿಕ ಶೌಚಾಲಯ: ಗ್ರಾಮದಲ್ಲಿ ಒಟ್ಟು ಐದು ಸಾರ್ವಜನಿಕ ಮಹಿಳಾ  ಚಾಲಯಗಳಿವೆ. ಅದರಲ್ಲಿ 1ನೇ ಬ್ಲಾಕ್‌ ಮತ್ತು 4ನೇ ಬ್ಲಾಕ್‌ ಶೌಚಾಲಯಗಳು ಬಳಕೆಯಲ್ಲಿವೆ. ಹನುಮಾನ ಮಂದಿರ, ಅಪ್ಪರಾವ ಹಡಪದ ಅವರ ಮನೆ ಹಿಂದೆ ಹಾಗೂ ಪ್ಯಾಟಿಮಠದ
ಹತ್ತಿರವಿರುವ ಸಾರ್ವಜನಿಕ ಮಹಿಳಾ ಶೌಚಾಲಯಗಳಿವೆ ನೀರಿನ ವ್ಯವಸ್ಥೆ ಇಲ್ಲ. ಹಾಗಾಗಿ ಅವು ನಿರುಪಯುಕ್ತವಾಗಿವೆ. ಮೂರು ಸಾರ್ವಜನಿಕ ಮಹಿಳಾ ಶೌಚಾಲಯದ ಹತ್ತಿರ ನೀರಿನ ಅನುಕೂಲವಿದ್ದರೂ ಪೈಪ್‌ಲೈನ್‌ ವ್ಯವಸ್ಥೆ ಮಾಡಿಕೊಡದೆ ಗ್ರಾಪಂ ನಿರ್ಲಕ್ಷ್ಯಾ ವಹಿಸುತ್ತಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ರಾಘವೇಂದ್ರ ಗುತ್ತೇದಾರ ಆರೋಪಿಸಿದ್ದಾರೆ.

ಚೌವಡಿ ಕಟ್ಟೆ ಮುಖ್ಯಬಜಾರ ರಸ್ತೆ ತಗ್ಗು ಬಿದ್ದು ಮಳೆ ಹಾಗೂ ಚರಂಡಿ ನೀರು ತುಂಬಿಕೊಂಡಿದೆ. ಮರ್ಗಮ್ಮ ದೇವಿ ದೇವಸ್ಥಾನ ಪಕ್ಕ ಮತ್ತು ಸಾವಳಗೇರ ಮನೆ ಹತ್ತಿರ ಚರಂಡಿ ಸೇತುವೆ ಕಳಚಿ ಬಿದ್ದಿದ್ದು, ಕಬ್ಬಿಣದ ಸಲಾಕೆಗಳು ಮೇಲೆದ್ದು ವಾಹನ ಸವಾರರಿಗೆ ಅಪಾಯ ತಂದೊಡ್ಡುತ್ತಿವೆ. ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಇತ್ತ ಕಡೆ ಗಮನ ಹರಿಸಿ ಸ್ವತ್ಛತೆಗೆ ಪ್ರಾಮುಖ್ಯತೆ ನೀಡಿ ಸರ್ಕಾರ ನೀಡಿರುವ ಗಾಂಧಿ ಗ್ರಾಮ ಪುರಸ್ಕಾರದ ಮಾನ ಉಳಿಸುವರೇ ಎಂದು ಕಾಯ್ದು ನೋಡಬೇಕಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next