Advertisement

Govt info;ದೇಶದಲ್ಲಿ ರಸ್ತೆ ಅಪಘಾ*ತದಲ್ಲಿ ಈ ವರ್ಷ 1.78 ಲಕ್ಷ ಸಾ*ವು

12:36 AM Dec 13, 2024 | Team Udayavani |

ಹೊಸದಿಲ್ಲಿ: ರಸ್ತೆ ಅಪಘಾತಗಳಿಂದ ದೇಶದಲ್ಲಿ ಈ ವರ್ಷ 1.78 ಲಕ್ಷ ಮಂದಿ ಅಸುನೀಗಿದ್ದಾರೆ ಎಂದು ಕೇಂದ್ರ ರಸ್ತೆ ಸಾರಿಗೆ ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ. ಲೋಕಸಭೆಯಲ್ಲಿ ಮಾತನಾಡಿದ ಅವರು, ಅಸುನೀಗಿದ 1.78 ಲಕ್ಷ ಮಂದಿಯ ಪೈಕಿ ಶೇ. ಶೇ.60ರಷ್ಟು ಮಂದಿ 18ರಿಂದ 34 ವರ್ಷದೊಳಗಿನವರು. ಈ ಪೈಕಿ ಉತ್ತರಪ್ರದೇಶದಲ್ಲಿ 23,000 ಮಂದಿ ಅಸುನೀಗಿ ಮೊದಲ ಸ್ಥಾನದಲ್ಲಿದೆ. 18,000 ಮಂದಿ ಮೃತಪಟ್ಟು ತಮಿಳುನಾಡು 2ನೇ, ಮಹಾರಾಷ್ಟ್ರದಲ್ಲಿ 15,000 ಮಂದಿ ಮೃತರಾಗಿ 3ನೇ ಸ್ಥಾನದಲ್ಲಿದೆ ಎಂದರು.

Advertisement

ಬೆಂಗಳೂರಿಗೆ 2ನೇ ಸ್ಥಾನ: ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಪೈಕಿ ನಗರಗಳ ಸಾಲಿನಲ್ಲಿ ಬೆಂಗಳೂರಿಗೆ 2ನೇ ಸ್ಥಾನವಿದ್ದು, 915 ಮಂದಿ ಈ ವರ್ಷ ಸಾವಿಗೀಡಾಗಿದ್ದಾರೆ. ಹೊಸದಿಲ್ಲಿಯಲ್ಲಿ 1,400 ಮಂದಿ ಮೃತಪಟ್ಟು ಅದು ಮೊದಲ ಸ್ಥಾನದಲ್ಲಿದೆ ಎಂದಿದ್ದಾರೆ.

ಮುಜುಗರ: ದೇಶದಲ್ಲಿನ ಅಪಘಾತಗಳಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಜುಗರ ಉಂಟಾಗುತ್ತದೆ. ಸರಿಯಾದ ರೀತಿಯಲ್ಲಿ ವಾಹನ ಚಾಲನೆ ಮಾಡದಿರುವುದಿಂದಲೇ ಅಪಘಾತ ಉಂಟಾಗುತ್ತದೆ. ಸಂಚಾರ ನಿಯಮಗಳ ಬಗ್ಗೆ ದೇಶದ ಯುವಕರಿಗೆ ಅರಿವು ಮೂಡಿಸಬೇಕಿದೆ ಎಂದು ಸಚಿವ ನಿತಿನ್‌ ಗಡ್ಕರಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next